ಆ ಗುಡ್ಡವನ್ನು ಕರಿಕಲ್ಲಬೆಟ್ಟ ಎಂದು ಕರೆಯುತ್ತಾರೆ. ಆ ಗುಡ್ಡದ ತುದಿಯಲ್ಲಿರುವ ಕಲ್ಲೊಂದು ಎಲ್ಲಾ ಕಲ್ಲುಗಳಿಗಿಂತ ವಿಸ್ಮಯಕಾರಿಯಾಗಿದೆ. ಆ ಕಲ್ಲನ್ನು ಬಡಿದರೆ ಅದರಲ್ಲಿ ಗಂಟೆನಾದ ಹೊರಹೊಮ್ಮುತ್ತದೆ. ಪಕ್ಕದ ಬೃಹತ್ ಗಾತ್ರದ ಕಲ್ಲನ್ನು ಬಡಿದರೆ ಮಾಮೂಲಿ ಶಬ್ದ ಕೇಳುತ್ತದೆ ಆದರೆ ಈ ಕಲ್ಲು ಮಾತ್ರ ವಿಶೇಷವಾಗಿದೆ. ಅರೆರೇ ಇದೆಂತಾ ಕಲ್ಲು ಎಂದು ಅಚ್ಚರಿಗೊಂಡ ಗ್ರಾಮಸ್ಥರು ಈ ಕಲ್ಲನ್ನು ನೋಡಲು ಗುಡ್ಡ ಹತ್ತುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿರುವ ಕಲ್ಲಿನ ವಿಶೇಷ ಕುರಿತ ಒಂದು ವರದಿ ಇಲ್ಲಿದೆ.

ದಾವಣಗೆರೆ(ಜೂ.10): ಆ ಗುಡ್ಡವನ್ನು ಕರಿಕಲ್ಲಬೆಟ್ಟ ಎಂದು ಕರೆಯುತ್ತಾರೆ. ಆ ಗುಡ್ಡದ ತುದಿಯಲ್ಲಿರುವ ಕಲ್ಲೊಂದು ಎಲ್ಲಾ ಕಲ್ಲುಗಳಿಗಿಂತ ವಿಸ್ಮಯಕಾರಿಯಾಗಿದೆ. ಆ ಕಲ್ಲನ್ನು ಬಡಿದರೆ ಅದರಲ್ಲಿ ಗಂಟೆನಾದ ಹೊರಹೊಮ್ಮುತ್ತದೆ. ಪಕ್ಕದ ಬೃಹತ್ ಗಾತ್ರದ ಕಲ್ಲನ್ನು ಬಡಿದರೆ ಮಾಮೂಲಿ ಶಬ್ದ ಕೇಳುತ್ತದೆ ಆದರೆ ಈ ಕಲ್ಲು ಮಾತ್ರ ವಿಶೇಷವಾಗಿದೆ. ಅರೆರೇ ಇದೆಂತಾ ಕಲ್ಲು ಎಂದು ಅಚ್ಚರಿಗೊಂಡ ಗ್ರಾಮಸ್ಥರು ಈ ಕಲ್ಲನ್ನು ನೋಡಲು ಗುಡ್ಡ ಹತ್ತುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿರುವ ಕಲ್ಲಿನ ವಿಶೇಷ ಕುರಿತ ಒಂದು ವರದಿ ಇಲ್ಲಿದೆ.

ಅಲ್ಲಿ ಎಷ್ಟು ಬಾರಿ ಕೇಳಿದರೂ ಶಬ್ದ ಬರುತ್ತಿರುವುದು ಬಂಡೆಯಿಂದಲೇ. ಈ ಗುಡ್ಡದ ತುಂಬಾ ಸಾಕಷ್ಟು ಬಂಡೆಗಳಿವೆ. ಪಕ್ಕದ ಬಂಡೆಯಲ್ಲೂ ಇಂಥದ್ದೇ ಶಬ್ದ ಬರುತ್ತಾ ಪರೀಕ್ಷೆ ಮಾಡಿ ನೋಡಿದರೆ ಕೇಳಿದ್ದು ಬರೀ ಕಲ್ಲಿನ ಕಠೋರ ಶಬ್ದ. ಇಂಥದ್ದೊಂದು ವಿಸ್ಮಯಕಾರಿ ಘಟನೆಗೆ ಸಾಕ್ಷಿಯಾಗಿರುವುದು ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ಕರಿಕಲ್ ಬೆಟ್ಟ.. ಈ ಗುಡ್ಡದಲ್ಲಿ ಅಳವಡಿಸಿರುವ ಪವನ್ ವಿದ್ಯುತ್ ಕಂಪನಿಯ ಹುಡುಗರು ಕುತೂಹಲಕ್ಕಾಗಿ ಈ ಬಂಡೆಯನ್ನೊಮ್ಮೆ ಬಾರಿಸಿದ್ದಾರೆ. ಆಗ ಕೇಳಿಸಿದ ಬಂಡೆಯಲ್ಲಿನ ಗಂಟೆನಾದ ಸೂಜಿಗಲ್ಲಿನಂತೆ ಜನರನ್ನ ಸೆಳೆಯುತ್ತಿದೆ.

ವಿಸ್ಮಯ ವೀಕ್ಷಣೆಗೆ ಕರಿಕಲ್ ಗುಡ್ಡದತ್ತ ಜನರ ದಂಡೇ ಹರಿದು ಬರುತ್ತಿದೆ. ಅಷ್ಟೇ ಅಲ್ಲ ವಿಸ್ಮಯದ ಮೂಲ ಹುಡುಕುವ ಸಾಹಸ ಕೂಡ ಜೋರಾಗಿದೆ. ಕರಿಕಲ್ ಗುಡ್ಡದ ಐತಿಹಾಸಿಕ ಹಿನ್ನೆಲೆ ಕಲೆಹಾಕಲಾಗುತ್ತಿದೆ. ಇತಿಹಾಸ ತಜ್ಞರು ಭೂವಿಜ್ಞಾನಿಗಳಿಗೂ ವಿಷಯ ಮುಟ್ಟಿಸಿದ್ದಾರೆ.

ಇದರ ಮಧ್ಯೆ ಹಲವು ಊಹಾಪೋಹಗಳು ಕೂಡ ಹರಿದಾಡುತ್ತಿವೆ. ಕಲ್ಲಿನಲ್ಲಿ ಯಾವುದೋ ಲೋಹದ ಅಂಶ ಹೆಚ್ಚಿರಬೇಕು ಎಂದು ಕೆಲವರು ವಾದಿಸಿದರೆ. ಇದ್ಯಾವುದೋ ದೇವರ ಪವಾಡ ಎನ್ನುವುದು ಇನ್ನು ಕೆಲವರ ವಾದ. ಆದರೆ, ವಿಸ್ಮಯದ ಹಿಂದಿನ ನೈಜ ಕಾರಣ ಮಾತ್ರ ಇನ್ನೂ ನಿಗೂಢವಾಗೇ ಉಳಿದಿದೆ.