ಗೋವಾ ಪ್ರವಾಸದ ನೆಪ ಒಡ್ಡಿ ಪ್ರೇಯಸಿಯನ್ನೇ ಹತ್ಯೆ ಮಾಡಿದ ಪ್ರಿಯಕರ

First Published 21, Mar 2018, 3:10 PM IST
Belagavi Doctor Kill Lover
Highlights

ಮದುವೆಗೆ ಒತ್ತಾಯಿಸಿದ ಪ್ರೇಯಸಿಯನ್ನು ವೈದ್ಯ ಪ್ರಿಯಕರನೇ ಪ್ರಜ್ಞೆ ತಪ್ಪಿಸಿ ರೈಲಿನಿಂದ ತಳ್ಳಿ ಹತ್ಯೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ : ಮದುವೆಗೆ ಒತ್ತಾಯಿಸಿದ ಪ್ರೇಯಸಿಯನ್ನು ವೈದ್ಯ ಪ್ರಿಯಕರನೇ ಪ್ರಜ್ಞೆ ತಪ್ಪಿಸಿ ರೈಲಿನಿಂದ ತಳ್ಳಿ ಹತ್ಯೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ  ಅಸ್ಟೋಗಾ ಗ್ರಾಮದ ರೈಲ್ವೆ ಸೇತುವೆ ಕೆಳಗೆ ಯುವತಿಯ ಶವ ಪತ್ತೆಯಾಗಿದೆ.  ಪುಣೆ ಮೂಲದ ಪೂನಂ ಅಲಿಯಾಸ್ ಪರಿ (22) ಮೃತ ಯುವತಿಯಾಗಿದ್ದಾಳೆ.

ಈಕೆ ಕಳೆದ ಅನೇಕ ವರ್ಷಗಳಿಂದ ಬಿಎಚ್ಎಂಎಸ್ ವೈದ್ಯ ಸುನೀಲ್ ಚೌಹಾಣ್ ಎಂಬಾತನನ್ನು  ಪ್ರೀತಿಸುತ್ತಿದ್ದಳು. ಆದರೆ ಇತ್ತೀಚೆಗೆ ಮದುವೆಯಾಗುವಂತೆ ಸುನೀಲ್’ನ್ನು ಪೂನಂ ಒತ್ತಾಯಿಸಿದ್ದಾಳೆ.

ಆದರೆ ಇದಕ್ಕೆ ಸುನಿಲ್ ಒಪ್ಪದೇ ಜಾತಿ ನೆಪ ಹೇಳಿ ದೂರ ಆಗಲು ಯತ್ನಿಸಿದ್ದು, ಆದರೆ ಪೂನಂ ಮತ್ತೆ ಮತ್ತೆ ಒತ್ತಾಯಿಸಿದ ಕಾರಣದಿಂದ ಆಕೆಯನ್ನು ಹತ್ಯೆ ಮಾಡಿದ್ದಾನೆ.

ಗೋವಾ ಪ್ರವಾಸದ ನೆಪ ಒಡ್ಡಿ ಪೂನಂಳನ್ನು ಕರೆತಂದು ಹತ್ಯೆ ಮಾಡಿದ್ದಾನೆ. ಕಳೆದ 15ರಂದು ಯುವತಿಯ ಶವ ಪತ್ತೆಯಾಗಿದ್ದು, ಈ ವೇಳೇ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಆಕೆಯ ಪೋಷಕರು ಈ ಸಂಬಂಧ ದೂರು ನೀಡಿದ್ದು,ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ  ಈ ವಿಚಾರ ತಿಳಿದು ಬಂದಿದೆ. ಈ ವೇಳೆ ಸುನೀಲ್ ಚೌಹಾಣ್’ನನ್ನು ವಶಕ್ಕೆ ಪಡೆದ ಪೊಲೀಸರು,ನ್ಯಾಯಾಲಯದ ವಶಕ್ಕೆ ಒಪ್ಪಿಸಿದ್ದಾರೆ.

loader