Asianet Suvarna News Asianet Suvarna News

ಬಿಬಿಎಂಪಿ ಬಜೆಟ್'ನಲ್ಲಿ ಏನೇನಿದೆ? ಇಲ್ಲಿದೆ ಹೈಲೈಟ್ಸ್

ಬಜೆಟ್ ಗಾತ್ರ 9,241 ಕೋಟಿ ಇದ್ದು, ರಾಜ್ಯ ಸರ್ಕಾರ 2500 ಕೋಟಿ ಅನುದಾನವನ್ನ ಪಾಲಿಕೆಗೆ ನೀಡಿದೆ.

bbmp budget highlights

ಬೆಂಗಳೂರು(ಮಾ. 25): ಮುಂದಿನ‌ ವರ್ಷದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕುತೂಹಲ ಕೆರಳಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ಇಂದು ಬೆಳಗ್ಗೆ ಮಂಡನೆಯಾಗಿದೆ. ಪಾಲಿಕೆಯ ತೆರಿಗೆ ಹಾಗೂ ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಗುಣಶೇಖರ್‌ ಅವರು ತಮ್ಮ ಜನ್ಮದಿನದಂತೇ ಪಾಲಿಕೆ ಬಜೆಟ್'ನ್ನು ಮಂಡಿಸಿದ್ದಾರೆ. ಬಜೆಟ್ ಗಾತ್ರ 9,241 ಕೋಟಿ ಇದ್ದು, ರಾಜ್ಯ ಸರ್ಕಾರ 2500 ಕೋಟಿ ಅನುದಾನವನ್ನ ಪಾಲಿಕೆಗೆ ನೀಡಿದೆ.

2018ರ ವಿಧಾನಸಭೆ ಚುನಾವಣೆಗೆ ಶಾಸಕರು ಸಿದ್ಧತೆ ಮಾಡಿಕೊಳ್ಳಲು ಪೂರಕವಾದ ಅಂಶಗಳು ಬಜೆಟ್​'ನಲ್ಲಿದ್ದು, ಅದರಂತೆ ರಾಜ್ಯ ಹಣಕಾಸು ಆಯೋಗದ 286 ಕೋಟಿ ರೂ.ಗಳನ್ನು ಶಾಸಕರ ವಿವೇಚನೆಗೆ ಬಿಟ್ಟ ಕಾಮಗಾರಿಗಳಿಗಾಗಿ ಒದಗಿಸಲಾಗುತ್ತಿದೆ. 14ನೇ ಹಣಕಾಸು ಆಯೋಗದಿಂದ ನೀಡಲಾಗುವ 550 ಕೋಟಿ ರೂ.ಗಳನ್ನು ಕೂಡ ಶಾಸಕರ ಕ್ಷೇತ್ರ ಅಭಿವೃದ್ಧಿಗಾಗಿ ಮೀಸಲಿಡುವ ಸಾಧ್ಯತೆಗಳಿವೆ.

ಬಿಬಿಎಂಪಿ ಬಜೆಟ್ ಮುಖ್ಯಾಂಶಗಳು

ಬಿಬಿಎಂಪಿ ಬಜೆಟ್​​ ಗ್ರಾತ್ರ 9,241 ಕೋಟಿ

ವೇತನ ಮತ್ತು ಪಿಂಚಣಿ ಸೌಲಭ್ಯ - 589 ಕೋಟಿ

ಬೀದಿ ದೀಪ ವಿದ್ಯುತ್ ಶುಲ್ಕ ಪಾವತಿ - 231 ಕೋಟಿ

ಸಾಲ ಮತ್ತು ಬಡ್ಡಿ ಮರುಪಾವತಿ- 430 ಕೋಟಿ

ಕಸ ವಿಲೇವಾರಿ ನಿರ್ವಹಣೆ - 898 ಕೋಟಿ

ತೋಟಗಾರಿಕೆ ಮತ್ತು ಕೆರೆಗಳು -1397 ಕೋಟಿ

ಆರೋಗ್ಯ ಮತ್ತು ಶಿಕ್ಷಣ - 293 ಕೋಟಿ

--------------

ಪ್ರತಿ ಮನೆಗೆ ಕಸ ಬೇರ್ಪಡಿಸಲು 2 ಕಸದ ಬುಟ್ಟಿ, 1 ಚೀಲ ಉಚಿತ

ಅಪಾರ್ಟ್​ಮೆಂಟ್​ಗಳಲ್ಲಿ ಘನ ತ್ಯಾಜ್ಯ ವಿಂಗಡಣೆ ಕಡ್ಡಾಯ

ರಸ್ತೆಯಲ್ಲಿ ಕಸ ಹಾಕುವವರನ್ನು ಹಿಡಿಯಲು ಮಾರ್ಷಲ್​'ಗಳ ನೇಮಕ

ಪೌರ ಕಾರ್ಮಿಕರಿಗೆ ವಿಶ್ರಾಂತಿ ಕೊಠಡಿಗೆ 13 ಕೋಟಿ

ಪೌರ ಕಾರ್ಮಿಕರ ಹಾಜರಾತಿಗೆ ಬಯೋಮೆಟ್ರಿಕ್​ ವ್ಯವಸ್ಥೆ

ಪಾಲಿಕೆಯ ಹೊಸ ವಲಯಗಳಲ್ಲಿ 12 ವಿವಾಹ ಸಮುದಾಯ ಭವನ

ಹಾಲಿ 5 ಲಕ್ಷ ಬೀದಿ ದೀಪಗಳ ಬದಲು ಎಲ್​ಇಡಿ ಬಲ್ಬ್​ ಅಳವಡಿಕೆ

ಬೆಂಗಳೂರು ಫುಟ್​ಪಾತ್​ ಅಭಿವೃದ್ಧಿಗೆ 200 ಕೋಟಿ ಅನುದಾನ

--

ಬೆಂಗಳೂರಿನ ಚರಂಡಿಗಳ ಅಭಿವೃದ್ಧಿಗೆ 300 ಕೋಟಿ

1 ಸಾವಿರ ಪಬ್ಲಿಕ್​ ಟಾಯ್ಲೆಟ್​'ಗಳ ನಿರ್ಮಾಣಕ್ಕೆ 50 ಕೋಟಿ

ಬೆಂಗಳೂರಿನ ಎಲ್ಲಾ 198 ವಾರ್ಡ್​ಗಳಲ್ಲಿ ನಮ್ಮ ಕ್ಯಾಂಟೀನ್​

ರಾಜ್ಯ ಸರ್ಕಾರದಿಂದ ಬಿಬಿಎಂಪಿಗೆ 100 ಕೋಟಿ

--------------

ಖಾಸಗಿ ಸಹಭಾಗಿತ್ವದಲ್ಲಿ ಹೈಟೆಕ್​ ಪಾರ್ಕಿಂಗ್​ ವ್ಯವಸ್ಥೆ

ಜಯನಗರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ

ಬಿಬಿಎಂಪಿ ಶಾಲೆ ಅವರಣದ ಕೈತೋಟಕ್ಕಾಗಿ 1 ಕೋಟಿ ಮೀಸಲು

ಬೆಂಗಳೂರು ನಗರದ ಕೆರೆ ನಿರ್ವಹಣೆಗೆ 5 ಕೋಟಿ ಮೀಸಲು

--

ಬೆಂಗಳೂರಲ್ಲಿ ಬೀದಿ ನಾಯಿ ಸಂತಾನ ನಿಯಂತ್ರಣಕ್ಕೆ 3 ಕೋಟಿ   

ಬೆಂಗಳೂರಲ್ಲಿ ಶವ ಸಾಗಾಣಿಕೆ ವಾಹನಕ್ಕೆ 2 ಕೋಟಿ ಅನುದಾನ ಮೀಸಲು

ಶಿವಾಜಿನಗರ , ಸರ್ವಜ್ಞನಗರ , ಬಿಟಿಎಂ ಲೇಔಟ್​​ಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ

ಬೆಂಗಳೂರಿನ ಎಲ್ಲಾ ಶಾಲಾ ಕಾಲೇಜು ಗಳಲ್ಲಿ ಸಿಸಿಟಿವಿ ಅಳವಡಿಕೆ

---------

ನಮ್ಮ ಸ್ವಂತ‌ ಮನೆ ಯೋಜನೆಯಡಿ SC, ST ಸಮುದಾಯಕ್ಕೆ100 ಕೊಟಿ ಮೀಸಲು

ಟೈಲರಿಂಗ್ ಯಂತ್ರ ವಿತರಿಸಲು ಪ್ರತಿ ವಾರ್ಡ್'​​ಗೆ 50ರಂತೆ 8 ಕೋಟಿ ಮೀಸಲು

ಪ್ರತಿ ವಾರ್ಡ್ ಗೆ 50 ಸೈಕಲ್​​ ನೀಡಲು 4 ಕೋಟಿ ಮೀಸಲು

ಬೆಂಗಳೂರಿನ 32 ಪ್ರೌಢಶಾಲೆಯಲ್ಲಿ ಟೆಲಿ ಎಜುಕೇಷನ್ ವ್ಯವಸ್ಥೆ ಆರಂಭ

----------

ಎಲ್ಲಾ ಶಾಲೆ ಕಾಲೇಜುಗಳಲ್ಲಿ ಮಳೆ ನೀರು ಕೊಯ್ಲು ಗೆ 1 ಕೋಟಿ ಅನುದಾನ

ಬೆಂಗಳೂರಿನ ಕಸ ನಿರ್ವಹಣೆಗೆ 751 ಕೋಟಿ ಮೀಸಲು

ಎಲ್ಲ 198 ವಾರ್ಡ್ ಗಳಲ್ಲಿ ಕಾಂಪೋಸ್ಟ್ ಕೇಂದ್ರ ತೆರೆಯಲಾಗುವುದು

198 ವಾರ್ಡ್ ಗಳಿಗೂ ಚಿಂದಿ ಹಾಯುವವರ ನೇಮಕಕ್ಕೆ ಯೋಜನೆ

-----------

ಅನಧಿಕೃತವಾಗಿ ರಸ್ತೆ ಅಗೆದರೆ 10 ಲಕ್ಷ ರೂಪಾಯಿ ದಂಡ

ಮಹಾನಗರ ಆಸ್ತಿಪಾಸ್ತಿ ನಿರ್ವಹಣೆಗೆ ಡಿಜಿಟಲ್​ ವ್ಯವಸ್ಥೆ

ಅಮೃತ್​ ಯೋಜನೆಯಡಿ ಉದ್ಯಾನವನಗಳಿಗೆ 10 ಕೋಟಿ

ಬೆಂಗಳೂರಿನಲ್ಲಿ 210 ಹೊಸ ಉದ್ಯಾನವನಗಳ ಘೋಷಣೆ

ಖಾಸಗಿ ಸಹಭಾಗಿತ್ವದಲ್ಲಿ ಹೈಟೆಕ್​ ಪಾರ್ಕಿಂಗ್​ ವ್ಯವಸ್ಥೆ

-----------------

ರುದ್ರ ಭೂಮಿ ವಿದ್ಯುತ್ ಚಿತಾಗಾರದಿಂದ ಸ್ವಚ್ಛತೆ ಕಾಪಾಡುವುದು

ಬೆಂಗಳೂರು ನಗರದ ಬೀದಿ ದೀಪ ಎಲ್'ಇಡಿಯಾಗಿ ಪರಿವರ್ತನೆ                    

ಅಲ್ಪಾವಧಿ, ದೀರ್ಘಾವಧಿ ಕಾಮಗಾರಿ ಯೋಜನೆ ಜಾರಿ

ಆಡಳಿತದಲ್ಲಿ ಪಾರದರ್ಶಕತೆ, ಅಧಿಕಾರ ವಿಕೇಂದ್ರಿಕರಣ ಆರ್ಥಿಕ ಶಿಸ್ತಿಗೆ ಚಾಲನೆ

ಶಿಕ್ಷಣ, ಆರೋಗ್ಯ, ಕಲ್ಯಾಣ ಕಾರ್ಯಕ್ರಮ, ಘನತ್ಯಾಜ್ಯ ತೋಟಗಾರಿಕೆ ಆದ್ಯತೆ

ಮಾಹಿತಿ ತಂತ್ರಜ್ಞಾನ, ಇ- ಆಡಳಿತಕ್ಕೆ ಹೆಚ್ಚಿನ ಪ್ರಾಮುಖ್ಯತೆ

Follow Us:
Download App:
  • android
  • ios