ಚಿಕ್ಕಮಗಳೂರಿನಲ್ಲಿ ಅವಲಕ್ಕಿ ಗಂಟಲಲ್ಲಿ ಸಿಲುಕಿ ಮಗು ಸಾವು

First Published 13, Feb 2018, 1:02 PM IST
Baby Death in Chikkamagaluru
Highlights

ರಾಗಿ ಸರಿ ಗಂಟಲಲ್ಲಿ ಸಿಲುಕಿ ಮಗು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಚಿನ್ನಮಗಳೂರಿನಲ್ಲಿ ಇದೇ ರೀತಿಯಾದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು :  ರಾಗಿ ಸರಿ ಗಂಟಲಲ್ಲಿ ಸಿಲುಕಿ ಮಗು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಚಿನ್ನಮಗಳೂರಿನಲ್ಲಿ ಇದೇ ರೀತಿಯಾದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಗ್ತಿಹಳ್ಳಿ ಸಮೀಪದ ಶಿರಗುಂದದಲ್ಲಿ ಮಗುವೊಂದು ಅವಲಕ್ಕಿ ಗಂಟಲಲ್ಲಿ ಸಿಲುಕಿ ಮೃತಪಟ್ಟಿದೆ. ಇಲ್ಲಿನ ದುರ್ಗಾಪ್ರಸಾದ್ ಅವರ ಮಗ ಅನೀಶ್ (3) ಎಂಬ ಮಗು ಮೃತಪಟ್ಟಿದೆ.

ನಿನ್ನೆ ಅವಲಕ್ಕಿ ತಿನ್ನುವಾಗ ಗಂಟಲಲ್ಲಿ ಸಿಲುಕಿದ್ದರಿಂದ ಜಿಲ್ಲಾಸ್ಪತ್ರೆ ಮಗುವನ್ನು ಕರೆತರಲಾಗಿತ್ತು.  ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಇಲ್ಲಿನ ವೈದ್ಯರು ಸೂಚಿಸಿದ್ದರು.

ಆದರೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಮಗುವು ಮೃತಪಟ್ಟಿದೆ. ಕೆಲ ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯಲ್ಲೇ ಮೊಬೈಲ್ ಚಾರ್ಜರ್’ನಿಂದ ವಿದ್ಯುತ್ ಶಾಕ್ ತಗುಲಿ ಮಗುವೊಂದು ಮೃತಪಟ್ಟಿತ್ತು.  

loader