ಚಳ್ಳಕೆರೆ (ಅ.13): ನಗರದ ಬೆಂಗಳೂರು ರಸ್ತೆಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನ ಲಾಕರ್‌ ಒಡೆದು ಕಳವಿಗೆ ಯತ್ನಿಸಿರುವ ಘಟನೆ ನಡೆದಿದೆ.
ಚಳ್ಳಕೆರೆ (ಅ.13): ನಗರದ ಬೆಂಗಳೂರು ರಸ್ತೆಯ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ನ ಲಾಕರ್ ಒಡೆದು ಕಳವಿಗೆ ಯತ್ನಿಸಿರುವ ಘಟನೆ ನಡೆದಿದೆ.
ದಸರಾ ಹಬ್ಬದ ಹಿನ್ನೆಲೆಯಲ್ಲಿ ಕಳೆದ ಶನಿವಾರದಿಂದ ಬುಧವಾರದ ತನಕ ಒಟ್ಟು 5 ದಿನಗಳ ಕಾಲ ಬ್ಯಾಂಕ್ಗೆ ರಜೆ ಇತ್ತು. ಈ ಅವಧಿಯಲ್ಲೇ ಬ್ಯಾಂಕಿನಲ್ಲಿ ಕಳ್ಳರು ಕಳವಿಗೆ ಯತ್ನಿಸಿದ್ದಾರೆ. ಬ್ಯಾಂಕ್ನ ಕೆಳಭಾಗದ ರೋಲಿಂಗ್ ಶೆಟರ್ ಬೀಗವನ್ನು ಒಡೆದು ಒಳನುಗ್ಗಿರುವ ಕಳ್ಳರು ಹಿಂಬದಿಯಿಂದ ಮೇಲೆ ಹತ್ತಿ ಕಿಟಕಿಯ ಗ್ರೀಲ್ ಕತ್ತರಿಸಿದ್ದಾರೆ. ಬ್ಯಾಂಕ್ನ ಸುರಕ್ಷಿತ ಲಾಕರ್ ಇರುವ ಜಾಗವನ್ನು ತಲುಪಿದ್ದಾರೆ. ಆದರೆ, ಲಾಕರ್ ಒಡೆಯಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿ ವಿಫಲರಾಗಿ ಬರಿಗೈಯಲ್ಲಿ ಹಿಂದಿರುಗಿದ್ದಾರೆ.
ಗುರುವಾರ ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾಗ ಕಳ್ಳರು ಬ್ಯಾಂಕಿನಲ್ಲಿ ಕಳವಿಗೆ ಯತ್ನಿಸಿರುವುದು ಗಮನಕ್ಕೆ ಬಂದಿದೆ. ಕೂಡಲೇ ಬ್ಯಾಂಕ್ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದರು. ಸುದ್ದಿ ತಿಳಿದ ಕೂಡಲೇ ವೃತ್ತ ನಿರೀಕ್ಷಕ ಕೆ.ಸಮೀವುಲ್ಲಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಪಿಎಸ್ಐ ಎನ್.ವೆಂಕಟೇಶ್ ಪ್ರಕರಣ ಬಗ್ಗೆ ವಿಚಾರಣೆ ಮುಂದುವರಿಸಿದ್ದಾರೆ.
ಬೇಜವಾಬ್ದಾರಿ: ಯಾವುದೇ ಬ್ಯಾಂಕ್ಗಳಲ್ಲಿ ಕಡ್ಡಾಯವಾಗಿ ಸಿ.ಸಿ. ಟಿ.ವಿ. ಕ್ಯಾಮೆರಾ ವ್ಯವಸ್ಥೆ ಹೊಂದಿರಬೇಕು ಎಂಬ ನಿಯಮವಿದೆ. ಸೈರನ್ ಸಹ ಅಳವಡಿಸಬೇಕಿದೆ. ಆದರೆ, ಬ್ಯಾಂಕ್ನಲ್ಲಿ ಇಂಥ ವ್ಯವಸ್ಥೆಗಳೇ ಇಲ್ಲ. ಇದೇ ಕಳ್ಳರು ಕಳವಿಗೆ ಯತ್ನಿಸಲು ಕಾರಣವಾಗಿದೆ.
