ರೈತರ ಆತ್ಮಹತ್ಯೆಗೆ ಜೂಜು, ಕುಡಿತ ಕಾರಣವೆಂದ ಖೇಣಿ ಕಾಂಗ್ರೆಸ್ ಸೇರ್ಪಡೆಗೆ ವಿರೋಧ

First Published 5, Mar 2018, 3:01 PM IST
Ashok Kheny joins congress opposed by party  workers
Highlights

ನೈಸ್ ಅಕ್ರಮ ಬಹಿರಂಗವಾಗಿದ್ದು, ನಿರ್ದೇಶಕ ಅಶೋಕ್ ಖೇಣಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸದನ ಸಮಿತಿ ವರದಿ ನೀಡಿದೆ. ಈ ಸಂದರ್ಭದಲ್ಲಿಯೇ ಖೇಣಿಯಂಥವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದು, ಪಕ್ಷದಲ್ಲಿಯೇ ಅಸಮಾಧಾನ ಭುಗಿಲೇಳಲು ಕಾರಣವಾಗಿದೆ.

ಬೆಂಗಳೂರು: ನೈಸ್ ಅಕ್ರಮ ಬಹಿರಂಗವಾಗಿದ್ದು, ನಿರ್ದೇಶಕ ಅಶೋಕ್ ಖೇಣಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸದನ ಸಮಿತಿ ವರದಿ ನೀಡಿದೆ. ಈ ಸಂದರ್ಭದಲ್ಲಿಯೇ ಖೇಣಿಯಂಥವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದು, ಪಕ್ಷದಲ್ಲಿಯೇ ಅಸಮಾಧಾನ ಭುಗಿಲೇಳಲು ಕಾರಣವಾಗಿದೆ.

ಅದರಲ್ಲಿಯೂ ಬೀದರ್ ಕ್ಷೇತ್ರದಲ್ಲಿ ಅಪಾರ ವಿರೋಧ ವ್ಯಕ್ತವಾಗಿದ್ದು, ಮಾಜಿ ಮುಖ್ಯಮಂತ್ರಿ ಧರ್ಮ್‌ಸಿಂಗ್ ಅವರು ಪುತ್ರ ಅಜಯ್ ಸಿಂಗ್ ಹಾಗೂ ಅಳಿಯ ಚಂದ್ರ ಸಿಂಗ್ ಆಕ್ರೋಶ ಹೊರ ಹಾಕಿದ್ದಾರೆ.

'ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆಂದ ಕೂಡಲೇ, ಬೀದರ್ ದಕ್ಷಿಣದ ಟೆಕೆಟ್ ನೀಡುತ್ತಾರೆ ಎಂದೇನಿಲ್ಲ. ಈ ಕ್ಷೇತ್ರವನ್ನು ಪ್ರತಿನಿಧಿಸಿದ ಖೇಣಿ ಯಾವ ಕೆಲಸವನ್ನೂ ಮಾಡಿಲ್ಲ. ಇಂಥವರನ್ನು ಮುಂದಿಟ್ಟುಕೊಂಡು ಮತ ಹಾಕಿ ಎಂದ ಕೇಳುವುದಾದರೂ ಹೇಗೆ? ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆದು, ಈ ಕ್ಷೇತ್ರದ ಅಭ್ಯರ್ಥಿಯನ್ನು ಅಂತಿಮಗೊಳಿಸುತ್ತೇವೆ,' ಎಂದು ಹೇಳಿದ್ದಾರೆ.

'ಬೀದರ್ ದಕ್ಷಿಣ ಕ್ಷೇತ್ರದಿಂದ ನಾನು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ. ಖೇಣಿ ಕಾಂಗ್ರೆಸ್ ಸೇರಿಸಿಕೊಂಡಿರೋದು ಪಕ್ಷಕ್ಕೆ ಧಕ್ಕೆಯಾಗಲಿದೆ.
 ಕಾರ್ಯಕರ್ತರೊಂದಿಗೆ ಸೇರಿ ನಾನು ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನ ಜ‌ರಿಗೆ ತಲುಪಿಸಿದ್ದೆ. 

ಕಾಂಗ್ರೆಸ್ ಮುಖಂಡರೊಂದಿಗೆ ಬೀದರ್ ದಕ್ಷಿಣದ ಎಲ್ಲ ಕಾರ್ಯಕರ್ತರು ಮಾತನಾಡ್ತೇವೆ,' ಎಂದು ಅರ್ಜುನ್ ಸಿಂಗ್ ಹೇಳಿದ್ದಾರೆ.
 

loader