ಕುಟುಂಬಕ್ಕೆ ಆಧಾರವಾಗಿದ್ದ ಬಿಜೆಪಿ ಕಾರ್ಯಕರ್ತನ ಹತ್ಯೆ. ಸಾಮಾಜಿಕ ಜಾಲತಾಣಗಳ ಮೂಲಕ ನೆರವು ನೀಡಲು ಕೋರಿ ಆರಂಭವಾದ ಅಭಿಯಾನಕ್ಕೆ ಅತ್ಯುತ್ತಮ ಪ್ರತಿಕ್ರಿಯೆ. 

ಮಂಗಳೂರು: ಇಲ್ಲಿ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್‌ಗೆ ಎಲ್ಲೆಡೆಯಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ.

ಆಧಾರವಾಗಿದ್ದ ದೀಪಕ್ ಸಾವಿನಿಂದ ಕುಟುಂಬ ದಿಕ್ಕು ತೋಚದಂತಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ದೀಪಕ್‌ಗೆ ನೆರವು ಕೋರಿ ಅಭಿಯಾನವೊಂದನ್ನು ಆರಂಭಿಸಲಾಗಿತ್ತು. ನೆರವಿನ ಕರೆಗೆ ಓಗೊಟ್ಟ ಜನತೆ, ತಮ್ಮ ಧನ ಸಹಾಯ ಮಾಡುತ್ತಿದ್ದಾರೆ.

ಸಿಂಡಿಕೇಟ್ ಬ್ಯಾಂಕ್‌ನ ಕಾಟಿಪಳ್ಯ ಶಾಖೆಯಲ್ಲಿ ದೀಪಕ್ ತಾಯಿ ಪ್ರೇಮಾ ಹೆಸರಲ್ಲಿ ಖಾತೆ ಇದ್ದು, ಇದುವೆರೆಗೆ 24 ಲಕ್ಷ ರೂ. ಸಂಗ್ರವಾಗಿದೆ.