ಆಟವಾಡುತ್ತಿದ್ದ ಬಾಲಕರಿಬ್ಬರ ಮೇಲೆ ಆ್ಯಸಿಡ್‌ ದಾಳಿ

First Published 14, Feb 2018, 7:20 AM IST
Acid Attack On Boys
Highlights

ಮನೆ ಮುಂದೆ ಆಟವಾಡುತ್ತಿದ್ದ ಬಾಲಕರಿಬ್ಬರ ಮೇಲೆ ಪುಂಡರ ತಂಡವೊಂದು ಆ್ಯಸಿಡ್‌ ಎರಚಿ ಪರಾರಿಯಾದ ಘಟನೆ ತುಮಕೂರು ಜಿಲ್ಲೆ ತಿಪಟೂರಿನ ಕೆ.ಆರ್‌.ಬಡಾವಣೆಯಲ್ಲಿ ಮಂಗಳವಾರ ನಡೆದಿದೆ.

ತಿಪಟೂರು: ಮನೆ ಮುಂದೆ ಆಟವಾಡುತ್ತಿದ್ದ ಬಾಲಕರಿಬ್ಬರ ಮೇಲೆ ಪುಂಡರ ತಂಡವೊಂದು ಆ್ಯಸಿಡ್‌ ಎರಚಿ ಪರಾರಿಯಾದ ಘಟನೆ ತುಮಕೂರು ಜಿಲ್ಲೆ ತಿಪಟೂರಿನ ಕೆ.ಆರ್‌.ಬಡಾವಣೆಯಲ್ಲಿ ಮಂಗಳವಾರ ನಡೆದಿದೆ.

ಬಡಾವಣೆಯ ಆನಂದ್‌ ಎಂಬುವರ ಪುತ್ರರಾದ ದರ್ಶನ್‌(11) ಮತ್ತು ಆತನ ಸಹೋದರ ವಿನಯ್‌(4) ಎಂಬುವರೇ ಆ್ಯಸಿಡ್‌ ದಾಳಿಗೆ ತುತ್ತಾದವರು. ಮಕ್ಕಳಿಬ್ಬರಿಗೂ ಮುಖ ಮತ್ತಿತರೆ ಸುಟ್ಟಗಾಯಗಳಾಗಿದ್ದು, ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಲ್ಲಿನ ಪಾರ್ಕ್ನಲ್ಲಿ ಕಳೆದವಾರ ಗಾಯಾಳು ಬಾಲಕರು ಹಾಗೂ ಮತ್ತಿಬ್ಬರು ಮಕ್ಕಳ ನಡುವೆ ಆಟವಾಡುವಾಗ ಮಾತಿನ ಚಕಮಕಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಆ್ಯಸಿಡ್‌ ದಾಳಿ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

loader