ಮನೆ ನಿರ್ಮಾಣದ ವೇಳೆ ಚಿನ್ನದ ನಾಣ್ಯಗಳು ಪತ್ತೆಯಾದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದು, ಮನೆ ನಿರ್ಮಾಣ ಮಾಡಲು ಅಡಿಪಾಯಕ್ಕಾಗಿ ಭೂಮಿ ಅಗೆಯುತ್ತಿದ್ದಾಗ ನಾಣ್ಯಗಳು ಪತ್ತೆಯಾಗಿವೆ.

ಮಂಡ್ಯ(ಮೆ.18): ಮನೆ ನಿರ್ಮಾಣದ ವೇಳೆ ಚಿನ್ನದ ನಾಣ್ಯಗಳು ಪತ್ತೆಯಾದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದು, ಮನೆ ನಿರ್ಮಾಣ ಮಾಡಲು ಅಡಿಪಾಯಕ್ಕಾಗಿ ಭೂಮಿ ಅಗೆಯುತ್ತಿದ್ದಾಗ ನಾಣ್ಯಗಳು ಪತ್ತೆಯಾಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಳವಳ್ಳಿ ತಾಲೂಕಿನ, ಹಲಗೂರು ಹೋಬಳಿಯ ಬಾಣಸಮುದ್ರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮಮ್ಮ ಎಂಬುವರಿಗೆ ಸೇರಿದ ಜಾಗದಲ್ಲಿ ಮನೆ ನಿರ್ಮಿಸುವ ವೇಳೆ, ಮನೆ ಅಡಿಪಾಯದಲ್ಲಿ 435 ಚಿನ್ನದ ನಾಣ್ಯಗಳು ಪತ್ತೆಯಾಗಿವೆ.

ಭೂಮಿಯಲ್ಲಿ ಸಿಕ್ಕ ಚಿನ್ನದ ನಾಣ್ಯಗಳನ್ನು ಲಕ್ಷ್ಮಮ್ಮ ಸರ್ಕಾರದ ವಶಕ್ಕೆ ನೀಡಿದ್ದು, ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.