ಜಿಂಕೆ ಕೊಂಬನ್ನೇ ಆನೆ ದಂತ ಎಂದು ಮಾರುತ್ತಿದ್ದವರ ಬಂಧನ!

First Published 21, Mar 2018, 7:08 AM IST
2 Arrest In Belagavi
Highlights

ಆನೆ ದಂತ ಎಂದು ನಂಬಿಸಿ ಜಿಂಕೆ ಕೊಂಬು ಮಾರಾಟ ಮಾಡುತ್ತಿದ್ದ ಮೂವರನ್ನು ಹಾಗೂ ಖರೀದಿಸುತ್ತಿದ್ದ ಇಬ್ಬರನ್ನು ಬೆಳಗಾವಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. 

ಬೆಳಗಾವಿ: ಆನೆ ದಂತ ಎಂದು ನಂಬಿಸಿ ಜಿಂಕೆ ಕೊಂಬು ಮಾರಾಟ ಮಾಡುತ್ತಿದ್ದ ಮೂವರನ್ನು ಹಾಗೂ ಖರೀದಿಸುತ್ತಿದ್ದ ಇಬ್ಬರನ್ನು ಬೆಳಗಾವಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. 

ನಾಗೇಶ ಮಾದರ, ರಾಮಚಂದ್ರ ದಳವಿ, ರವೀಂದ್ರ ಕೋಲಕಾರ ಜಿಂಕೆಗಳನ್ನು ಬೇಟೆಯಾಡಿ ಅವುಗಳ ಕೊಂಬುಗಳನ್ನು ಪಾಲಿಷ್‌ ಮಾಡಿದ್ದರು. ನಂತರ ಇವುಗಳನ್ನು ಆನೆ ದಂತಗಳು ಎಂದು ನಂಬಿಸಿ ಲಕ್ಷಾಂತರ ರುಪಾಯಿಗೆ ಪರಶುರಾಮ ನಿಲಜಕರ ಹಾಗೂ ಅಮನ ಕಣಬರ್ಗಿನಿಗೆ ಮಾರಾಟ ಮಾಡಲು ಮುಂದಾಗಿದ್ದರು.

ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

loader