Asianet Suvarna News Asianet Suvarna News

ಕಾರವಾರದಲ್ಲಿ ಮುಸ್ಲಿಂ ಕುಟುಂಬಗಳಿಗೆ ಬಹಿಷ್ಕಾರ, ದೂರು ನೀಡಿದರೂ ಜಿಲ್ಲಾಡಳಿತ ಮೌನ

ಶಾಂತಿಪ್ರಿಯ ಜಿಲ್ಲೆ, ಸೌಹಾರ್ದತೆಗೆ ಹೆಸರುವಾಸಿಯಾಗಿದ್ದ ಜಿಲ್ಲೆ ಈಗ ಬಹಿಷ್ಕಾರದ ಮೂಲಕ ಸುದ್ದಿಯಾಗಿದೆ. ಧರ್ಮದ ಹೆಸರನ್ನು ಬಳಸಿ ಕ್ಷುಲಕ್ಕ ಕಾರಣಕ್ಕೆ 25 ವರ್ಷಗಳಿಂದ ಬಹಿಷ್ಕಾರ ಹಾಕಲಾಗಿದೆ ಇದೆಲ್ಲಿ  ಅಂತೀರಾ? ಈ ಸ್ಟೋರಿ ಓದಿ

12 Muslim Families Banned In Karwar
  • Facebook
  • Twitter
  • Whatsapp

ಕಾರವಾರ(ಎ.18): ಶಾಂತಿಪ್ರಿಯ ಜಿಲ್ಲೆ, ಸೌಹಾರ್ದತೆಗೆ ಹೆಸರುವಾಸಿಯಾಗಿದ್ದ ಜಿಲ್ಲೆ ಈಗ ಬಹಿಷ್ಕಾರದ ಮೂಲಕ ಸುದ್ದಿಯಾಗಿದೆ. ಧರ್ಮದ ಹೆಸರನ್ನು ಬಳಸಿ ಕ್ಷುಲಕ್ಕ ಕಾರಣಕ್ಕೆ 25 ವರ್ಷಗಳಿಂದ ಬಹಿಷ್ಕಾರ ಹಾಕಲಾಗಿದೆ ಇದೆಲ್ಲಿ  ಅಂತೀರಾ? ಈ ಸ್ಟೋರಿ ಓದಿ

ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾಮದ ಮುಸ್ಲಿಂ ಸಮುದಾಯದವರೆಲ್ಲ ಕಳೆದ 25 ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಆಂಧ್ರ ಮೂಲದ ದಾವರ್ ಅಲಿ ಶಾ ಎಂಬ ಗುರುವಿನ ಶಿಷ್ಯರೆಂಬ ಒಂದು ಕಾರಣಕ್ಕೆ ಕಳೆದ 25 ವರ್ಷಗಳಿಂದ ಬಹಿಷ್ಕಾರಕ್ಕೊಳಗಾಗಿದ್ದಾರೆ. ಇದರಿಂದ ಬೇಸತ್ತ ಇವರೆಲ್ಲ ಈ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

ಇನ್ನೂ ಈ 12 ಕುಟುಂಬದವರಿಗೆ ಅವರ ಸಮುದಾಯದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೂ ಪ್ರವೇಶವಿಲ್ಲ. ದೊಡ್ಡವರಿಗಷ್ಟೇ ಅಲ್ಲ, ಪುಟಾಣಿ ಮಕ್ಕಳು ಬಹಿಷ್ಕಾರದ ಸಂಕೋಲೆ ಸುತ್ತಿಕೊಂಡಿದೆ. ಅವರು ಶಾಲೆಗಳಲ್ಲಿ ಇತರ ಮಕ್ಕಳ ಜೊತೆ ಮಾತನಾಡುವಂತೆಯೂ ಇಲ್ಲ, ಆಟವನ್ನೂ ಆಡುವಂತಿಲ್ಲ.. ಇನ್ನೂ ಈ ಬಗ್ಗೆ ಜಿಲ್ಲಾಡಳಿತಕ್ಕೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲವಂತೆ ಇದರಿಂದ ಇವರು ಇನ್ನಷ್ಟು ಕಿನ್ನತೆಗೆ ಒಳಗಾಗಿದ್ದಾರೆ. 

ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು, ಇವರ 25 ವರ್ಷಗಳ ನರಕಯಾತನೆಗೆ ಇತಿಶ್ರೀ ಹೇಳುತ್ತಾ ಕಾದು ನೋಡಬೇಕಿದೆ.

 

Follow Us:
Download App:
  • android
  • ios