Dharwad ಕೆಐಎಡಿಬಿ ಇಲಾಖೆಯಿಂದ ಭೂಸ್ವಾಧೀನ, ಗ್ರಾಮಸ್ಥರ ಆಕ್ರೋಶ

ಉದ್ಯೋಗದ ಭರವಸೆ ನೀಡಿ ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ 3,500 ಎಕರೆ ಜಮೀನನ್ನು ಕೆಐಎಡಿಬಿ ಇಲಾಖೆಯವರು ಭೂ ಸ್ವಾಧೀನ ಪಡಿಸಿಕೊಂಡಿದೆ. ಆದರೆ ಈವರೆಗೆ ಉದ್ಯೋಗ ನೀಡಿಲ್ಲ. ಹೀಗಾಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

Land Acquisition by the KIADB Department people Protest in front of Dharwad DC Office gow

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ಎ.7) : ಧಾರವಾಡ (Dharwad) ತಾಲೂಕಿನ ಮುಮ್ಮಿಗಟ್ಟಿ (Mummigatti ) ಗ್ರಾಮದ 3,500 ಎಕರೆ ಜಮೀನನ್ನು ಕೆಐಎಡಿಬಿ (Karnataka Industrial Areas Development Board) ಇಲಾಖೆಯವರು ಭೂ ಸ್ವಾಧೀನ ಪಡಿಸಿಕ್ಕೊಂಡಿದ್ದಾರೆ. ವಶಪಡಿಸಿಕ್ಕೊಂಡ ರೈತರ ಮಕ್ಕಳಿಗೆ ಕೆಲಸವನ್ನು ಕೊಡುವುದಾಗಿ ಭರವಸೆಯನ್ನೂ ಕೊಟ್ಟಿದ್ದರು. ಆದರೆ ಸದ್ಯ ಕೈಗಾರಿಕೆ ನಡೆಸುತ್ತಿರುವವರು ಕೆಲಸ ಕೊಡಲೂ ಮುಂದಾಗುತ್ತಿಲ್ಲ ಎಂದು ಆಕ್ರೋಶವನ್ನು ಗ್ರಾಮಸ್ಥರು ಹೊರ ಹಾಕಿದರು.

ಧಾರವಾಡದ ಜಿಲ್ಲಾಧಿಕಾರಿಗಳ (Dharwad DC Office) ಕಚೇರಿ ಎದುರು ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿದರು. ಮುಮ್ಮಿಗಟ್ಟಿ ಗ್ರಾಮದಲ್ಲಿ ನಿರುದ್ಯೋಗಿ ಯುವಕರಿಗೆ ಕೈಗಾರಿಕಾ ಪ್ರದೇಶದಲ್ಲಿ ಉದ್ಯೋಗ ನೀಡುವಂತೆ ಎಲ್ಲ ಕೈಗಾರಿಕೋದ್ಯಮಿಗಳಿಗೆ ಆದೇಶ ನೀಡಿಬೇಕಿದೆ ಎಂದು ಕಿಡಿಕಾರಿದರು.

Costal Fishing Boats ಡೀಸೆಲ್ ದರ ಏರಿಕೆ , ಮೀನೂಟ ಪ್ರಿಯರ ಕಣ್ಣೀರು!

1984ರಲ್ಲಿ ಮುಮ್ಮಿಗಟ್ಟಿ ಗ್ರಾಮದ ಒಟ್ಟು ಕೃಷಿ ಭೂಮಿ 3000 ಎಕರೆ ಇದ್ದು, ಪ್ರಸ್ತುತ 2022ರ ವೇಳೆಗೆ 100 ಎಕರೆಗಿಂತಲೂ ಕಡಿಮೆ ಕೃಷಿ ಭೂಮಿ ಉಳಿದಿದ್ದು 1984 ರಿಂದ 2009ರವರೆಗೆ ಕೃಷಿ ಅವಲಂಬಿಸಿ ಕುಟುಂಬಗಳು ಹಾಗೂ ಕೃಷಿ ಕೂಲಿ ಕಾರ್ಮಿಕರ ಕುಟುಂಬಗಳು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿ ಜೀವನವನ್ನು ಸಾಗಿಸುತ್ತಿದ್ದಾರೆ. ಪ್ರಸ್ತುತ ಮುಮ್ಮಿಗಟ್ಟಿ ಗ್ರಾಮದಲ್ಲಿ 600 ಕ್ಕೂ ಹೆಚ್ಚು ನಿರುದ್ಯೋಗಿಗಳು ಇದ್ದಾರೆ. ಈ ನಿರುದ್ಯೋಗಿಗಳಿಗೆ ಬೇಲೂರ ಹಾಗೂ ಮುಮ್ಮಿಗಟ್ಟಿ, ಕೈಗಾರಿಕಾ ಪ್ರದೇಶದಲ್ಲಿ ಇರುವ ಕೈಗಾರಿಕೆಗಳಲ್ಲಿ, ಅವರವರ ವಿದ್ಯಾರ್ಹತೆಗೆ ತಕ್ಕಂತೆ ಖಾಯಂ ಉದ್ಯೋಗವನ್ನು ನೀಡಬೇಕೆಂದು ಆಗ್ರಹ ಮಾಡಿದರು.

ನೆಲೆ ಕಳೆದುಕೊಂಡು ತ್ರಿಶಂಕು ಸ್ಥಿತಿಯಲ್ಲಿ ಹಾವೇರಿಯ ನಲವಾಗಲು ಗ್ರಾಮಸ್ಥರು!

ಈ ವಿಷಯವಾಗಿ ದಿನಾಂಕ  17/12/2021ರಂದು ಮಾನ್ಯ ಧಾರವಾಡ ಗ್ರಾಮೀಣ ಶಾಸಕರು ವಿಧಾನಸಭೆ ಅಧಿವೇಶನ ಪ್ರಶ್ನೆ ಸಂಖ್ಯೆ 12/25 ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಉತ್ತರಿಸಿ. ಸ್ಥಳೀಯರಿಗೆ ಉದ್ಯೋಗ ಒದಗಿಸುವ ಭರವಸೆ ನೀಡಿದ್ದನ್ನು ಮಾನದಂಡವಾಗಿಟ್ಟುಕೊಂಡು ಕೈಗಾರಿಕೋದ್ಯಮಿಗಳನ್ನು ಶೀಘ್ರ ಸಭೆ ಕರೆದು ಭೂಮಿ ಕಳೆದುಕೊಂಡವರಿಗೆ ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೆ ಅವರು ವಿದ್ಯಾರ್ಹಣೆ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಎಷ್ಟು ಪ್ರಮಾಣದಲ್ಲಿ ಉದ್ಯೋಗ ನೀಡಬೇಕೆಂದು ಸರಕಾರದ ಮಾರ್ಗಸೂಚಿ ಇದು ಮತ್ತು ಪಾಲಿನೆ ಆಗಿದೆಯೇ ಎಂದು ಪರಿಶೀಲಿಸಿ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಮತ್ತು, ನಿರುದ್ಯೋಗ ಹೋಗಲಾಡಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು‌.

Tamil Nadu ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ.7.5 ವೈದ್ಯಕೀಯ ಕೋಟಾ: ಮದ್ರಾಸ್ ಹೈಕೋರ್ಟ್

 

Latest Videos
Follow Us:
Download App:
  • android
  • ios