Asianet Suvarna News Asianet Suvarna News

‘ಇವರೊಬ್ಬರು ಸುಮ್ಮನೆ ಕುಳಿತ್ರೆ ಐದೇ ನಿಮಿಷದಲ್ಲಿ ಮಹಾದಾಯಿ ಬಗೆಹರಿಯುತ್ತದೆ’

ಮಹಾದಾಯಿ ವಿಚಾರ ಇತ್ಯರ್ಥದ ಬಗ್ಗೆ ಶೆಟ್ಟರ್ ವಿಚಿತ್ರ ಉತ್ತರ/ ಗೋವಾ ಕಾಂಗ್ರೆಸ್ ಸುಮ್ಮನಿದ್ದರೆ ಎಲ್ಲವೂ ಸಾಧ್ಯವಾಗುತ್ತದೆ/ ಕರ್ನಾಟಕದ ಸಚಿವರಿಂದ ವಿಚಿತ್ರ ಹೇಳಿಕೆ

Karnataka Minister Jagadish shettar reaction on Mahadayi Issue
Author
Bengaluru, First Published Oct 20, 2019, 5:14 PM IST

ಧಾರವಾಡ[ಅ. 20] ಮಹಾದಾಯಿ ನೀರಿಗಾಗಿ ರೈತರು ರಾಜಧಾನಿ ಬೆಂಗಳೂರಿಗೆ ಬಂದು ಪ್ರತಿಭಟನೆ ನಡೆಸಿ ಕೊನೆಗೂ ರಾಜ್ಯಪಾಲರ ಭೇಟಿ ಮಾಡಲು ಸಾಧ್ಯವಾಗದೆ ಹಿಂದಕ್ಕೆ ಮರಳಿದ್ದಾರೆ. ಇದೆಲ್ಲದರ ನಡುವೆ ಮಹಾದಾಯಿ ನೀರು ಸಿಗಲು ಏನು ಮಾಡಬೇಕು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಮಹದಾಯಿ ಇತ್ಯರ್ಥ ಆಗಬೇಕೆಂದರೆ ಗೋವಾ ಕಾಂಗ್ರೆಸ್ ಸುಮ್ಮನೆ ಕುಳಿತುಕೊಳ್ಳಬೇಕು. ಗೋವಾ ಕಾಂಗ್ರೆಸ್ ಸುಮ್ಮನಿದ್ರೆ ಮಾತ್ರ ಮಹದಾಯಿ ಇತ್ಯರ್ಥ ಸಾಧ್ಯ ಎಂದು ಜಗದೀಶ್ ಶೆಟ್ಟರ್ ವಿಚಿತ್ರ ಹೇಳಿಕೆ ನೀಡಿದ್ದಾರೆ.

ಉತ್ತರ ಕರ್ನಾಟಕವೇ ಈಗ ಪವರ್ ಸೆಂಟರ್

ಗೋವಾ ಕಾಂಗ್ರೆಸ್ ಸುಮ್ಮನೆ ಕುಳಿತ್ರೆ ಐದೇ ನಿಮಿಷದಲ್ಲಿ ಮಹದಾಯಿ ಸಮಸ್ಯೆ ಬಗೆ ಹರಿಯುತ್ತೆ. ಅಲ್ಲಿನ ನಮ್ಮ ಸಿಎಂ ಮಾತುಕತೆಗೆ ಒಪ್ಪಿದ್ರೆ ಕಾಂಗ್ರೆಸ್ ಧರಣಿ ಮಾಡುತ್ತಿದೆ ಇದು ನಿಲ್ಲಬೇಕು. ಮಹದಾಯಿಯಲ್ಲಿ ಸರ್ಕಾರದ ಪ್ರಶ್ನೆ ಬರುವುದಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಪ್ರಶ್ನೆ ಬರುತ್ತದೆ ಎಂದಿದ್ದಾರೆ.

ಈ ವಿಚಾರದಲ್ಲಿ ಗೋವಾ ಕಾಂಗ್ರೆಸ್ ನಿಲುವೇನು? ಎಂದು ಪ್ರಶ್ನೆ ಮಾಡಿದ ಶೆಟ್ಟರ್ ಬಿಜೆಪಿಯದ್ದು ಒಂದೇ ನಿಲುವು ಇದೆ. ಆದರೆ ಕಾಂಗ್ರೆಸ್ ವಿರೋಧ ಮಾಡುತ್ತ ಬಂದಿದೆ. ಗೋವಾ ಸಿಎಂ ಮಾತುಕತೆಗೆ ರೆಡಿ ಇದ್ದಾರೆ. ಇವತ್ತಿಲ್ಲ ನಾಳೆ ಕೆಲವೇ ದಿನಗಳಲ್ಲಿ ಮಹದಾಯಿ ನೋಟೀಫಿಕೆಷನ್ ಆಗಿಯೇ ಆಗುತ್ತದೆ ಎಂದಿದ್ದಾರೆ.

ಕರ್ನಾಟಕ, ಗೋವಾ ಮತ್ತು ಕೇಂದ್ರದಲ್ಲಿಯೂ ಒಂದೇ ಅಂದರೆ ಬಿಜೆಪಿ ಸರ್ಕಾರ ಇದ್ದರೂ ಮಹಾದಾಯಿ ಇತ್ಯರ್ಥ ಯಾಕೆ ವಿಳಂಬವಾಗುತ್ತಿದೆ ಎಂಬ ಪ್ರಶ್ನೆಗೆ ಶೆಟ್ಟರ್ ವಿಚಿತ್ರ ಉತ್ತರ ನೀಡಿದ್ದಾರೆ.

Follow Us:
Download App:
  • android
  • ios