ಹುಬ್ಬಳ್ಳಿ(ಅ.08): ವಿರೋಧ ಪಕ್ಷದವರಿಗೆ ಟೀಕೆ ಮಾಡೋಕೆ ಏನೂ ವಿಚಾರಗಳಿಲ್ಲ. ಅದಕ್ಕಾಗಿ ನೆರೆ ವಿಷಯವನ್ನು ತೆಗೆದುಕೊಂಡು ಟೀಕೆ ಮಾಡ್ತಾರೆ, ಅವರಿಗೆ ಅಂಕಿ ಸಂಖ್ಯೆ ಗೊತ್ತಿಲ್ಲ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಟೀಕೆ ಮಾಡಿದ್ದಾರೆ.

ವಿರೋಧ ಪಕ್ಷಗಳಲ್ಲಿ ಒಗ್ಗಟ್ಟಿಲ್ಲ‌. ನಮ್ಮ ಸರಕಾರದ ಬಗ್ಗೆ ಟೀಕೆ ಮಾಡೊಕೆ ಬೇರೆ ವಿಷಯವಿಲ್ಲ. ನೆರೆ ವಿಚಾರ ಇಟ್ಟುಕೊಂಡು ಟೀಕೆ ಮಾಡುತ್ತಿದ್ದಾರೆ.ನರೇಂದ್ರ ಮೋದಿ ಅವರ ಸರ್ಕಾರ ನೆರೆ ಪರಿಹಾರ ಬಿಡುಗಡೆ ಮಾಡಿದೆ ಅಂಕಿ ಸಂಖ್ಯೆ ಗೊತ್ತಿಲ್ಲದೆ ಟೀಕೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ಬಿಡುಗಡೆಯಾಗಿರುವ ಹಣ ತಾತ್ಕಾಲಿಕ:

ಈಗ ಬಿಡುಗಡೆಯಾಗಿರುವ ಹಣ ತಾತ್ಕಾಲಿಕ. ಎನ್‌ಡಿಆರ್‌ಎಫ್‌ ರೂಲ್ಸ್ ಪ್ರಕಾರ ಪರಿಹಾರ ನೀಡುತ್ತಾರೆ. ನಿರಾಶ್ರಿತರಿಂದ ಯಾವುದೇ ದೂರು ಬಂದಿಲ್ಲ. ಕೇವಲ  ರಾಜಕಾರಣ ಮಾಡುವರು ಮಾತ್ರ ಟೀಕೆ ಮಾಡುತ್ತಿದ್ದಾರೆ ಎಂದಿದ್ದಾರೆ.

ಮೈಸೂರಿಗೆ ಹೋಗಕ್ಕಾಗಿಲ್ವಾ? ಇಲ್ಲೇ ದಸರಾ ಸಂಭ್ರಮ ನೋಡಿ ಕಣ್ತುಂಬಿಕೊಳ್ಳಿ!

ಮಹಾರಾಷ್ಟ್ರದಲ್ಲಿ ವಿಧಾನ ಸಭೆ ಚುನಾವಣೆ ನಡಿಯುತ್ತಿದೆ.ಈಗಾಗಲೇ ಕಾಂಗ್ರೆಸ್ ನಾಯಕರೇ ಕಾಂಗ್ರೆಸ್ ಆಡಳಿತಕ್ಕೆ ಬರುವುದಿಲ್ಲ ಎಂದು ಭವಿಷ್ಯ‌ ನುಡಿಯುತ್ತಿದ್ದಾರೆ. ಕಾಂಗ್ರೆಸನಲ್ಲಿ ಒಗ್ಗಟ್ಟಿನ ಕೊರತೆ ಇದೆ ಹಾಗೂ ಕಾಂಗ್ರೆಸ್ ಮುಕ್ತವಾಗುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

JDSನಿಂದ ಇನ್ನಷ್ಟು ಶಾಸಕರು ಹೊರಕ್ಕೆ, ಶೆಟ್ಟರ್ ಹೊಸ ಬಾಂಬ್..!