Asianet Suvarna News Asianet Suvarna News

ಹುಬ್ಬಳ್ಳಿಯಲ್ಲಿ ರೌಡಿ ಶೀಟರ್‌ ಮನೆಗಳ ಮೇಲೆ ದಾಳಿ: ಮಾ​ರ​ಕಾ​ಸ್ತ್ರ​ ವ​ಶ​

ರೌಡಿಗಳನ್ನು ಹೆಡೆಮುರಿ ಕಟ್ಟಲು ನಡೆಸುತ್ತಿರುವ ರೌಡಿಶೀಟರ್‌ ಮನೆಗಳ ಮೇಲಿನ ದಾಳಿ ನಡೆಸಿದ ಪೊಲೀಸರು| ದಸರಾ ಹಬ್ಬದಂದು ದಾಳಿ ನಡೆಸುವ ಮೂಲಕ ರೌಡಿಗಳಿಗೆ ಶಾಕ್‌ ನೀಡಿದ ಪೊಲೀಸರು| ಈ ವೇಳೆ ಕೆಲವೆಡೆ ಮಾರಕಾಸ್ತ್ರ ಕೂಡ ಪತ್ತೆಯಾಗಿವೆ| 

Hubballi Police Attack on Rowdy Sheeter Houses
Author
Bengaluru, First Published Oct 9, 2019, 7:49 AM IST

ಹುಬ್ಬಳ್ಳಿ(ಅ.9): ಗಣೇಶ ವಿಸರ್ಜನೆ ವೇಳೆ ನಡೆದ ಗಲಾಟೆಯಿಂದ ಎಚ್ಚೆತ್ತುಕೊಂಡಿರುವ ಪೊಲೀಸರು, ರೌಡಿಗಳನ್ನು ಹೆಡೆಮುರಿ ಕಟ್ಟಲು ನಡೆಸುತ್ತಿರುವ ರೌಡಿಶೀಟರ್‌ ಮನೆಗಳ ಮೇಲಿನ ದಾಳಿ ಮಂಗಳವಾರವೂ ಮುಂದುವರಿಯಿತು. ದಸರಾ ಹಬ್ಬದಂದು ದಾಳಿ ನಡೆಸುವ ಮೂಲಕ ರೌಡಿಗಳಿಗೆ ಪೊಲೀಸ್‌ ಕಮಿಷನರೇಟ್‌ ಶಾಕ್‌ ನೀಡಿದೆ. ಈ ವೇಳೆ ಕೆಲವೆಡೆ ಮಾರಕಾಸ್ತ್ರ ಕೂಡ ಪತ್ತೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಲವರ ಮೇಲೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

ಪೊ​ಲೀಸ್‌ ಆ​ಯುಕ್ತ ಆ​ರ್‌.​ದಿ​ಲೀಪ್‌ ನಿ​ರ್ದೇ​ಶ​ನ​ದಲ್ಲಿ ಮಂಗ​ಳ​ವಾರ ಮಹಾನ​ಗ​ರದ 15 ರೌ​ಡಿಶೀಟರ್‌ ಮ​ನೆ​ಗಳ ಮೇಲೆ ದಾಳಿ ನ​ಡೆಸಲಾಗಿದೆ. 4 ರೌ​ಡಿ​ಗಳ ವಿ​ರುದ್ಧ ಪ್ರ​ಕ​ರಣ ದಾ​ಖ​ಲಿ​ಸಿ​ಕೊಳ್ಳಲಾಗಿದೆ. ಕಾ​ನೂನು ಮತ್ತು ಸು​ವ್ಯ​ವಸ್ಥೆಯ ಡಿ​ಸಿಪಿ ಡಿ.​ಎ​ಲ್‌. ​ನಾ​ಗೇಶ, ದ​ಕ್ಷಿಣ ಉಪ ವಿ​ಭಾ​ಗದ ಸ​ಹಾ​ಯಕ ಪೊ​ಲೀಸ್‌ ಆ​ಯುಕ್ತ ಎ​ಸ್‌.​ಎಂ. ​ಸಂದಿ​ಗ​ವಾಡ ಸೇ​ರಿ​ದಂತೆ ವಿ​ವಿಧ ಪೊ​ಲೀಸ್‌ ಠಾ​ಣೆ​ಗಳ ಸಿ​ಪಿಐ, ಪಿ​ಎ​ಸ್‌​ಐ​ಗಳು ದಾ​ಳಿ​ಯ​ಲ್ಲಿ​ದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಧಾ​ರ​ವಾ​ಡ​ದ ಉಪ ವಿಭಾಗದ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ಉಪ ಆ​ಯುಕ್ತ ಡಾ. ಶಿವಕುಮಾರ ಗುಣಾರೆ ನಿ​ರ್ದೇ​ಶ​ನ​ದಲ್ಲಿ ಎ​ಸಿ​ಪಿ ಎಂ.ಎನ್‌. ರುದ್ರಪ್ಪ ನೇ​ತೃ​ತ್ವ​ದಲ್ಲಿ ವಿ​ವಿಧ ಪೊ​ಲೀಸ್‌ ಠಾ​ಣೆ​ಗಳ ವ್ಯಾ​ಪ್ತಿ​ಯ​ಲ್ಲಿನ 7 ರೌಡಿ ಶೀ​ಟ​ರ್‌​ಗಳ ಮನೆ​ಗಳ ಮೇಲೆ ದಾಳಿ ನ​ಡೆಸಿ, ತ​ಲಾಶ್‌ ನ​ಡೆ​ಸಿ, ಅ​ಪಾರ ಪ್ರ​ಮಾ​ಣದ ಮಾ​ರ​ಕಾ​ಸ್ತ್ರ​ಗ​ಳನ್ನು ವ​ಶ​ಪ​ಡಿ​ಸಿ​ಕೊಂಡಿ​ದ್ದಾರೆ.

ಕಳೆದ ಒಂದು ತಿಂಗಳಿಂದ ಮಹಾನಗರದಲ್ಲಿ ಚೂರಿ ಇರಿತ, ಶೂಟೌಟ್‌, ಕೊಲೆಗಳಂಥ ಅಪರಾಧ ಕೃತ್ಯಗಳು ಆಗಾಗ ನಡೆಯುತ್ತಿದೆ. ಇದರಿಂದಾಗಿ ಪೊಲೀಸ್‌ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಪ್ರಶ್ನಿಸುವಂತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಇತ್ತೀಚಿಗೆ ಸಭೆಯನ್ನೂ ನಡೆಸಿ ರೌಡಿಗಳನ್ನು ಮಟ್ಟಹಾಕುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಹಳೆ ರೌಡಿ ಶೀಟರ್‌ಗಳ ಮನೆಗಳ ಮೇಲೆ ಪೊಲೀಸ್‌ ಕಮಿಷನರೇಟ್‌ ದಾಳಿ ನಡೆಸುತ್ತಿದೆ.
 

Follow Us:
Download App:
  • android
  • ios