ಹುಬ್ಬಳ್ಳಿಯಲ್ಲಿ ನಡೆದ ರೈತ ಸಮಾವೇಶದ ವಿವಾದ ಹಾಗೂ ಟೀಕೆಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಕಬ್ಬಿನ ಎಂಎಸ್‌ಪಿ ಕುರಿತು ಚರ್ಚಿಸಲು ಅಕ್ಟೋಬರ್ 12ರಂದು ದೆಹಲಿಯಲ್ಲಿ ರೈತರ ಸಭೆ ಕರೆಯಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ರಾಜ್ಯ ಸರ್ಕಾರದ ಬಳಿ ಹಣವಿಲ್ಲದ ಕಾರಣ ಎಸ್‌ಎಪಿ ಹೆಚ್ಚಿಸುತ್ತಿಲ್ಲ ಎಂದು ಟೀಕಿಸಿದ್ದಾರೆ.

ಕೆಲ ದಿನಗಳಿಂದ ಹಿಂದಷ್ಟೇ ಹುಬ್ಬಳ್ಳಿಯಲ್ಲಿ ಒಂದು ರೈ ಸಮಾವೇಶ ನಡೆಯಿತು, ಅದರಲ್ಲಿ ಇಡೀ ರೈತ ಬಳಗವೇ ಹುಬ್ಬಳ್ಳಿ ಚೆನ್ನಮ್ಮ ವೃತ್ತವನ್ನು ಆವರಿಸಿತತ್ತು. ಅದಕ್ಕೆ ಸಂಬಂಧಿಸಿದಂತೆ ಹಲವಾರು ವಿವಾದಕ್ಕೂ ಆ ಸಮಾವೇಶಕ್ಕೆ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ರೈತ ಮುಖಂಡ ಶಶಿಕಾಂತ ಗುರೂಜಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ವೈಯಕ್ತಿಕವಾಗಿ ಟೀಕಿಸಿದ್ದಾರೆ ಎಂದು ಈಗಾಗಲೇ ವಿವಾದ ಭುಗಿಲೆದ್ದಿತ್ತು. ಈ ಕುರಿತು ಜೋಶಿ ಮಾರ್ಮಿಕ ಹೇಳಿಕೆ ನೀಡಿದ್ದಾರೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಅಕ್ಟೊಬರ್ 12 ಕ್ಕೆ ದೆಹಲಿಯಲ್ಲಿ ರೈತರ ಸಭೆ!

ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಸಚಿವ ಜೋಶಿ ಈಗಾಗಲೇ ಕಬ್ಬಿನ ಎಂಎಸ್‌ಪಿ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ರೈತರು ಹೋರಾಟ ಕೈ ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಕ್ಟೋಬರ 12ರಂದು ರೈತ ಸಭೆಯನ್ನು ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಮುಂದುವರೆದು ಮಾತನಾಡಿದ ಅವರು ಮಾರ್ಮಿಕ ನುಡಿಗಳನ್ನಾಡಿದ್ದಾರೆ.

ಎಲ್ಲರೂ ನಮ್ಮವರೇ!

ಕೇಂದ್ರ ಸಚಿವ ಜೋಶಿ ಹೇಳಿಕೆ ಎಲ್ಲವನ್ನು ಒಳಗೊಳ್ಳುವಂತೆ ಕಂಡರೂ ಕೆಲ ಮೌನ ಆಕ್ರೋಶ ಹೊರ ಹಾಕಿದಂತೆ ಇದೆ. ಅವರು ಹೇಳಿದ್ದೇನೆಂದರೆ, ಬೈದವರೂ ನಮ್ಮವರೇ, ಹೊಗಳಿದವರು ನಮ್ಮವರೇ ಎಂದು ತಮ್ಮ ಫಸ್ಟ್‌ ರಿಯಾಕ್ಷನ್‌ ಹೊರ ಹಾಕಿದ್ದಾರೆ. ಎಲ್ಲವನ್ನು ಒಳಗೊಳ್ಳುವಂತೆ ಕಂಡರು ಆ ಭಾಷೆಯಲ್ಲಿ ಮೌನ ತಿರುಗೇಟು ನೀಡಿದಂತೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.

ಎಂಎಸ್‌ಪಿ ರೈತರಿಗೇ ಸಿಗುತ್ತೆ ಅಂತ ಹೇಳಲಿಕ್ಕೆ ಸಾಧ್ಯವಿಲ್ಲ!

ಹೌದು ಮುಂದುವರೆದು ಮಾತನಾಡಿದ ಅವರು, ಮಿನಿಮಮ್ ಸೆಲ್ಲಿಂಗ್ ಪ್ರೈಸ್ ಜಾಸ್ತಿ ಮಾಡಿಲ್ಲ ಅಂತಾರೆ, ಸಕ್ಕರೆ ದರ ತೀವ್ರ ಕುಸಿತವಾಗಿದ್ದರಿಂದ ಎಂ. ಎಸ್. ಪಿ. ಜಾರಿಗೆ ತರಲಾಗಿತ್ತು. ಅದಕ್ಕಿಂತಲೂ ಕಡಿಮೆ ದರಕ್ಕೆ ಮಾರುವಂತಿಲ್ಲ. ಎಂ.ಎಸ್.ಪಿ. ಗೂ ರೈತರಿಗೆ ಕಬ್ಬಿನ ದರ ಕಡಿಮೆ ಆಗುವುದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಅದರಲ್ಲೂ ಎಂ.ಎಸ್.ಪಿ ಜಾಸ್ತಿ ಮಾಡಿದ್ರೆ ಅದನ್ನು ರೈತರಿಗೆ ಕೊಡ್ತಾರೆ ಅಂತಿಲ್ಲ

ಸ್ವಾಮಿನಾಥನ್ ವರದಿ ಜಾರಿ ಮಾಡ್ತಿದೆ ಮೋದಿ ಸರ್ಕಾರ!

ಅಲ್ಲದೇ ರೈತರ ಮತ್ತೊಂದು ಪ್ರಮುಖ ಬೇಡಿಕೆಯಾದ ಸ್ವಾಮಮಿನಾಥನ್‌ ವರದಿ ಜಾರಿ ಮಾಡಲೂ ಮೋಡಿ ಸರ್ಕಾರ ಶ್ರಮಿಸುತ್ತಿದೆ. ಅಷ್ಟೇ ಅಲ್ಲದೆ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ಹೆಚ್ಚು ಎಥೆನಾಲ್ ಉತ್ಪಾದನೆಯಾಗುತ್ತೆ. ಕೇಂದ್ರ ಸರ್ಕಾರ 1200 ಕೋಟಿ ಲೀಟರ್ ಎಥೆನಾಲ್ ಖರೀದಿಸುತ್ತಿದೆ. ಇಷ್ಟೆಲ್ಲ ವಿಷಯದ ಸ್ಪಷ್ಟನೇ ಹಾಗೂ ರೈತರ ಬೇಡಿಕೆ ಏರಿಕೆ ಕುರಿತು ಅ. 12ಕ್ಕೆ ದೆಹಲಿಯಲ್ಲಿ ಸಭೆ ಮಾಡಲಾಗುತ್ತೆ ನಾವು ಸರ್ವಧಿಕಾರಿಗಳಲ್ಲ, ಅದಕ್ಕಾಗಿಯೇ ರೈತರ ಸಭೆ ಕರೆಯಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯದ ಖಜಾನೆ ಖಾಲಿ!

ಎಂಎಸ್‌ಪಿಯಂತೆ, ಎಸ್‌ಎಪಿ ಹೆಚ್ಚಿಸಲು ರಾಜ್ಯಕ್ಕೂ ಅಧಿಕಾರವಿದೆ. ಆದರೆ ಅದಕ್ಕೆ ಸರ್ಕಾರ ಮುಂದಾಗುವುದಿಲ್ಲ, ಎಸ್.ಎ.ಪಿ ಮಾಡಿದ್ರೆ ಕೊಡಲು ಹಣವಿಲ್ಲ, ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.