ಹುಬ್ಬಳ್ಳಿ[ನ.13]: ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್‌ ಯೋಜನೆಗೆ ರಾಷ್ಟ್ರೀಯ ಮಟ್ಟದಲ್ಲಿ ನಗರ ಸಮೂಹ ಸಾರಿಗೆ ವ್ಯವಸ್ಥೆಯ ವರ್ಗದಲ್ಲಿ ನೀಡಲಾಗುವ ಉತ್ತಮ ನಗರ ಸಮೂಹ ಸಾರಿಗೆ ಯೋಜನೆ ಪ್ರಶಸ್ತಿ ದೊರೆತಿದ್ದು, ನ. 17 ರಂದು ಲಕ್ನೋದಲ್ಲಿ ಪ್ರಶಸ್ತಿ ಪ್ರದಾನವಾಗಲಿದೆ.

ಭಾರತ ಸರ್ಕಾರ ಉತ್ತಮ ನಗರ ಸಮೂಹ ಸಾರಿಗೆ ಯೋಜನೆ ವರ್ಗದಡಿ ಪ್ರಶಸ್ತಿ ಘೋಷಿಸುತ್ತಿದ್ದು ಬಿಆರ್‌ಟಿಎಸ್ ಯೋಜನೆಯು ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಇತ್ತೀಚಿಗೆ ಕೇಂದ್ರೀಯ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ವಿವಿಧ ರಾಜ್ಯಗಳಲ್ಲಿ ಅನುಷ್ಠಾನಗೊಂಡಿರುವ ಉತ್ತಮ ನಗರ ಸಮೂಹ ಸಾರಿಗೆ ವ್ಯವಸ್ಥೆಯ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್ ಯೋಜನೆಯು ಉತ್ತಮ ನಗರ ಸಮೂಹ ಸಾರಿಗೆ ಯೋಜನೆ ಎಂದು ಪರಿಗಣಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಮೀಕ್ಷೆಯಲ್ಲಿ ಭಾರತದ 10 ನಗರಗಳ ಮೆಟ್ರೋ ಹಾಗೂ 9 ನಗರಗಳ ಬಿಆರ್‌ಟಿಎಸ್‌ ಯೋಜನೆಗಳನ್ನು ಸಮೀಕ್ಷೆ ಮಾಡಲಾಗಿತ್ತು. ಎಚ್‌ಡಿ ಬಿಆರ್‌ಟಿಎಸ್‌ನ ಸಮಗ್ರ ಮಾಹಿತಿ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಮೂಲಭೂತಸೌಕರ್ಯ, ಐಟಿಎಸ್, ಬಸ್ ಕಾರ್ಯಾಚರಣೆ, ಬಸ್‌ ನಿಲ್ದಾಣಗಳು, ಸಂಚಾರಿ ಸೂಚನೆಗಳ ವ್ಯವಸ್ಥೆ, ಪಾದಚಾರಿ ಮಾರ್ಗ, ಮೇಲ್ಸೇತುವೆಗಳು, ಹಸಿರು ಬಿಆರ್‌ಟಿಎಸ್‌ ವ್ಯವಸ್ಥೆಗಳನ್ನು ಮಾನದಂಡವಾಗಿ ಪರಿಗಣಿಸಲಾಗಿತ್ತು ಎಂದು ಎಚ್‌ಡಿಬಿಆರ್‌ಟಿಎಸ್ ನಿರ್ದೇಶಕ ರಾಜೇಂದ್ರ ಚೋಳನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.