Asianet Suvarna News Asianet Suvarna News

ಖಾಸಗಿ ಕಟ್ಟಡದಲ್ಲಿ ಸರ್ಕಾರಿ ಹಾಸ್ಟೆಲ್: ದುಪ್ಪಟ್ಟು ಬಾಡಿಗೆ ಕಟ್ಟುತ್ತಿದೆ ಸರ್ಕಾರ!

ನಗರದಲ್ಲಿ ಖಾಸಗಿ ಕಟ್ಟಡದಲ್ಲಿ ದುಪ್ಪಟ್ಟು ಬಾಡಿಗೆ ತೆತ್ತು ಸರ್ಕಾರ ಹಾಸ್ಟೆಲ್ ಗಳನ್ನು ನಡೆಸುತ್ತಿದೆ| ಹಲವರು ಸರ್ಕಾರಿ ಹಾಸ್ಟೆಲ್‌ಗಳ ಅಲಭ್ಯತೆ, ಮೂಲಸೌಕರ್ಯ ಸಮಸ್ಯೆ ಕಾರಣಕ್ಕಾಗಿ ವಿದ್ಯಾರ್ಥಿಗಳು ಖಾಸಗಿ ಹಾಸ್ಟೆಲ್‌ಗಳ ಮೊರೆ ಹೋಗುತ್ತಿದ್ದಾರೆ| ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಉನ್ನತ ಶಿಕ್ಷಣಕ್ಕಾಗಿ ನಗರಕ್ಕೆ ಆಗಮಿಸುವವರಿಗೆ ಅನುಕೂಲವಾಗಲೆಂದು ನಗರದಲ್ಲಿ 20 ಕ್ಕೂ ಹೆಚ್ಚು ಹಾಸ್ಟೆಲ್‌ಗಳನ್ನು ಸರ್ಕಾರ ನಡೆಸುತ್ತಿದೆ| 

Government Pay Rent Hostels to Private Buildings in Hubballi
Author
Bengaluru, First Published Oct 9, 2019, 12:15 PM IST

ಮಯೂರ ಹೆಗಡೆ 

ಹುಬ್ಬಳ್ಳಿ(ಅ.9): ಸಾಕಷ್ಟು ವಿದ್ಯಾಸಂಸ್ಥೆಗಳಿರುವ ನಗರದಲ್ಲಿ ಖಾಸಗಿ ಕಟ್ಟಡದಲ್ಲಿ ದುಪ್ಪಟ್ಟು ಬಾಡಿಗೆ ತೆತ್ತು ಸರ್ಕಾರ ಹಾಸ್ಟೆಲ್ ಗಳನ್ನು ನಡೆಸುತ್ತಿದೆ. ಆದರೂ ಹಲವರು ಸರ್ಕಾರಿ ಹಾಸ್ಟೆಲ್‌ಗಳ ಅಲಭ್ಯತೆ, ಮೂಲಸೌಕರ್ಯ ಸಮಸ್ಯೆ ಕಾರಣಕ್ಕಾಗಿ ಖಾಸಗಿ ಹಾಸ್ಟೆಲ್‌ಗಳ ಮೊರೆ ಹೋಗುತ್ತಿದ್ದಾರೆ. ನಾಯಿಕೊಡೆಗಳಂತೆ ಎದ್ದಿರುವ ಹಾಸ್ಟೆಲ್‌ಗಳು ಕೆಲವೆಡೆ ಎಗ್ಗಿಲ್ಲದೆ ಅಕ್ರಮದ ಘಮಲನ್ನು ಹೊರಸೂಸುತ್ತಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಾಗೂ ಉನ್ನತ ಶಿಕ್ಷಣಕ್ಕಾಗಿ ನಗರಕ್ಕೆ ಆಗಮಿಸುವವರಿಗೆ ಅನುಕೂಲವಾಗ ಲೆಂದು ನಗರದಲ್ಲಿ 20 ಕ್ಕೂ ಹೆಚ್ಚು ಹಾಸ್ಟೆಲ್‌ಗಳನ್ನು ಸರ್ಕಾರ ನಡೆಸುತ್ತಿದೆ. ಸ್ವಂತ ಕಟ್ಟಡ ಲಭ್ಯವಿಲ್ಲದೆ ಖಾಸಗಿ ಕಟ್ಟಡಕ್ಕೆ ಬಾಡಿಗೆ ನೀಡಿ ಹಾಸ್ಟೆಲ್ ನಡೆಸುತ್ತಿದೆ. ಬೇರೆಡೆ ಸ್ಥಳ ಗುರುತಿಸುವ ಕಟ್ಟಡ ನಿರ್ಮಿಸುವ ಕುರಿತು ಯೋಜನೆಗಳು ಸಿದ್ಧವಾಗಿದ್ದರೂ ಇವೆಲ್ಲ ಕೇವಲ ಕಡತದಲ್ಲಿರುವುದರಿಂದ ಲಕ್ಷಾಂತರ ರುಪಾಯಿ ಬಾಡಿಗೆಗೆ ವ್ಯಯವಾಗುತ್ತಿದೆ. 

ಹೆಚ್ಚಿನ ಬಾಡಿಗೆ: 

ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಬಾಲಕರಿಗೆ 14, ಬಾಲಕಿಯರಿಗೆ 7 ಸೇರಿ ಒಟ್ಟಾರೆ 21 ಹಾಸ್ಟೆಲ್‌ಗಳಿವೆ. ಇದರಲ್ಲಿ 12 ಹಾಸ್ಟೆಲ್‌ಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಮೆಟ್ರಿಕ್ ನಂತರದ ಬಾಲಕ ಬಾಲಕಿಯರಿಗಾಗಿ 8 ಹಾಸ್ಟೆಲ್‌ಗಳಿವೆ. 

ಇದರಲ್ಲಿ ಲಿಂಗರಾಜ ನಗರದಲ್ಲಿರುವ ಬಾಲಕಿಯರ ವಸತಿ ನಿಲಯ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಉಳಿದೆಲ್ಲ ಹಾಸ್ಟೆಲ್‌ಗಳು ಸ್ವಂತ ಕಟ್ಟಡದಲ್ಲಿವೆ. ಇಲ್ಲಿನ ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ಹಾಸ್ಟೆಲ್ ಕಳೆದ 10 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿದೆ. 2014ರಿಂದ ನಡೆಯುತ್ತಿರುವ ಜಯ ನಗರದಲ್ಲಿ ದಿ. ದೇವರಾಜ ಅರಸು ತಾಂತ್ರಿಕ ಮತ್ತು ವೈದ್ಯಕೀಯ ಮೆಟ್ರಿಕ್ ನಂತರದ ಬಾಲಕಿಯರ ನಿಲಯ ಹಾಗೂ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿ ಯರ ವಸತಿ ನಿಲಯಗಳು ಒಂದೆ ಕಟ್ಟಡದಲ್ಲಿ ನಡೆಯುತ್ತಿದ್ದು, ಪ್ರತಿ ತಿಂಗಳು 2 ಲಕ್ಷ ಬಾಡಿಗೆ ನೀಡಲಾಗುತ್ತಿದೆ. 

ಅಕ್ರಮ ಚಟುವಟಿಕೆ: 

ನಗರದಲ್ಲಿ ಹಲವರು ಪರವಾನಗಿ ಇಲ್ಲದೆಯೂ ಪಿಜಿಗಳನ್ನು ನಡೆಸುತ್ತಿದ್ದಾರೆ. ಇಲ್ಲಿ, ಭದ್ರತೆಗೂ ಅಗತ್ಯ ಕ್ರಮಗಳಾದ ಸಿಸಿ ಕ್ಯಾಮೆರಾ, ಸೆಕ್ಯೂರಿಟಿ, ಬೆರಳಚ್ಚು ಹಾಜರಿಯಂತಹ ಕ್ರಮ ಕೈಗೊಳ್ಳುತ್ತಿಲ್ಲ. ಬೈರಿದೇವರಕೊಪ್ಪದ ಬಳಿಯ ಖಾಸಗಿ ಹಾಸ್ಟೆಲ್ ಗಳಲ್ಲಿ ಗಾಂಜಾ, ಅಫೀಮು, ಡ್ರಗ್ಸ್‌ನಂತಹ ಕಾನೂನು ಬಾಹಿರ ವಹಿವಾಟುಗಳೂ ನಡೆಯುತ್ತಿವೆ ಎನ್ನುವ ದೊಡ್ಡ ಆರೋಪವಿದೆ. ಇನ್ನು, ಕೆಲ ಪಿಜಿಗಳಲ್ಲಿ ಅನೈತಿಕ ಚಟುವ ಟಿಕೆಗಳು ನಡೆಯುತ್ತಿರುವುದು ತಿಳಿಯದ ಸಂಗತಿಗಳಲ್ಲ. ಆದರೆ, ಇವ್ಯಾವವೂ ಬಹಿರಂಗಗೊಂಡಿಲ್ಲ, ತಿಳಿದ ಇಲಾಖೆಗಳು ಕ್ರಮ ಜರುಗಿಸುತ್ತಿಲ್ಲ ಎಂಬ ದೂರು ಕೂಡ ಇದೆ. ಮೂಲಸೌಕರ್ಯ 

ಸಮಸ್ಯೆ: 

ನಗರದಲ್ಲಿನ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಇಂದಿಗೂ ಮೂಲಸೌಕರ್ಯ ಸಮಸ್ಯೆಗಳಿವೆ. ನೂರಾರು ಮಕ್ಕಳಿರುವ ಹಾಸ್ಟೆಲ್‌ಗಳಲ್ಲಿ ಕೇವಲ ಒಂದೆರಡು ಶೌಚಾಲಯ, ಬಟ್ಟೆ ತೊಳೆಯಲು ಅಗತ್ಯ ಸ್ಥಳ, ಬೆಳಗೆದ್ದು ಶೌಚಾಲಯಕ್ಕಾಗಿ ಕಾದು ನಿಲ್ಲುವ ಪರಿಸ್ಥಿತಿ ಇದೆ. ಸ್ವಂತ ಕಟ್ಟಡ ಇರುವೆಡೆ ಈ ಸಮಸ್ಯೆ ಹೆಚ್ಚಾಗಿ ಇಲ್ಲದಿದ್ದರೂ ಖಾಸಗಿ ಕಟ್ಟಡದಲ್ಲಿ ಕೆಲವೆಡೆ ಸಮಸ್ಯೆಗಳಿವೆ. ಇದೆ ಕಾರಣಕ್ಕೆ ಒಂದೆರಡು ತಿಂಗಳಿದ್ದು ಹೊಂದಿಕೊಳ್ಳಲಾಗದೆ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಿಂದ ಹೊರಬಂದು ಬೇರೆಡೆ ಕಡಿಮೆ ಬಾಡಿಗೆಯ ರೂಂನಲ್ಲಿ ನೆಲೆಸಿ ಶಾಲಾ ಕಾಲೇಜಿಗೆ ಹೋಗಿ ಬರುತ್ತಿದ್ದಾರೆ.
 

Follow Us:
Download App:
  • android
  • ios