ಧಾರವಾಡ (ನ.15): ರೈತನ ಮನೆಯಲ್ಲಿ  ಗ್ರಾಮ ದೇವತೆ ದ್ಯಾಮವ್ವ ಉದ್ಭವವಾದ ಘಟನೆ ಧಾರವಾಡದಲ್ಲಿ ನಡೆದಿದೆ. 

ಧಾರವಾಡ ಜಿಲ್ಲೆಯ ಹೊಸ ಯಲ್ಲಾಪುರದ ರೈತ ಯಲ್ಲನಗೌಡ ಪಾಟೀಲ ಮನೆಯಲ್ಲಿ ದೀಪಾವಳಿ ಪಾಡ್ಯದ ದಿನದಂದು ದೇವಿಯ ಮೂರ್ತಿಯು ಪತ್ತೆಯಾಗಿದೆ.

ಅಪರಿಚಿತ ಮಹಿಳೆಯೋರ್ವಳು  ಆಗಮಿಸಿ ನಿಮ್ಮ ಮನೆಯಲ್ಲಿ ದೇವಿ ನೆಲೆಸಿದ್ದಾಳೆ. ಮನೆಯ ದನದ ಕೊಟ್ಟಿಗೆಯಲ್ಲಿ ಇದ್ದಾಳೆಂದು ಸೂಚಿಸಿ ತೆರಳಿದ್ದಳು. ಅಪರಿಚಿತ ಮಹಿಳೆಯ ಸೂಚನೆಯಂ ತೆ ಮನೆಯ ಕೊಟ್ಟಿಗೆಯನ್ನು ಅಗೆದಾದ ದೇವಿಯ ಮೂರ್ತಿ ಪತ್ತೆಯಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೇವಿಯ ಮೂರ್ತಿ ಸಿಕ್ಕ ಜಾಗದಲ್ಲಿ ಬೆಳ್ಳಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಉದ್ಭವವಾದ ದೇವಿಯ ದರ್ಶನಕ್ಕೆ ನೂರಾರು ಭಕ್ತರು ಆಗಮಿಸುತ್ತಿದ್ದಾರೆ. 

ಯಲ್ಲಾಪುರ ಗ್ರಾಮದ ಗ್ರಾಮದೇವತೆಯಾದ ದ್ಯಾಮವ್ವನ ಪವಾಡ ನಡೆದಿದೆ ಎಂದು ಚಿಕ್ಕ ಗುಡಿ ನಿರ್ಮಿಸಿ ಪೂಜೆ ಸಲ್ಲಿಸಲಾಗುತ್ತಿದೆ.