Asianet Suvarna News Asianet Suvarna News

ಮುಂಗಾರು ಬೆಳೆ ಹೋಯ್ತು.. ಹಿಂಗಾರು ಕೈ ಹತ್ತಲಿಲ್ಲ! ಕಂಗಾಲಾದ ರೈತರು

ವರ್ಷದ ಎರಡೂ ಹಂಗಾಮು ಬೆಳೆ ಕಳೆ​ದು​ಕೊಂಡು ರೈತನ ಬದುಕು ಮಸು​ಕಾಯಿತು| ಆಗ​ಸ್ಟ್‌​ನಲ್ಲಿ ಮುಂಗಾರು, ಅಕ್ಟೋ​ಬ​ರ್‌​ನಲ್ಲಿ ಹಿಂಗಾರು ಬೆಳೆ ಹಾನಿ| ಕಳೆದ 5 ದಿನ​ಗ​ಳಲ್ಲಿ ವಾಡಿಕೆ 18 ಮಿ.ಮೀ. ಪೈಕಿ 156 ಮಿ.ಮೀ. ಮಳೆ| 2,565 ಹೆಕ್ಟೇರ್‌ ಹಿಂಗಾ​ರು ಬಿತ್ತನೆ ಪ್ರದೇ​ಶ​ದಲ್ಲಿ 500ಕ್ಕೂ ಹೆಚ್ಚು ಹೆಕ್ಟೇರ್‌ ಬೆಳೆ ಹಾನಿ| ಹಿಂಗಾರು ಬಿತ್ತ​ನೆಗೂ ಅವ​ಕಾಶ ನೀಡು​ತ್ತಿಲ್ಲ ಈ ಮಳೆ​ರಾ​ಯ|

Dharwad District Farmers Anxiety For Heavy Rain
Author
Bengaluru, First Published Oct 26, 2019, 7:47 AM IST

ಬಸ​ವ​ರಾಜ ಹಿರೇ​ಮ​ಠ

ಧಾರ​ವಾ​ಡ(ಅ.26): ಆಗ​ಸ್ಟ್‌​ನಲ್ಲಿ ಸುರಿದ ಭಾರಿ ಮಳೆಗೆ ಮುಂಗಾರು ಬೆಳೆ ಹೋಯ್ತು... ಅಕ್ಟೋ​ಬ​ರ್‌​ನಲ್ಲಿ ಸುರಿದ ಮಹಾ ಮಳೆಗೆ ಹಿಂಗಾರು ಬೆಳೆಯೂ ಹೋಯ್ತು. ವರ್ಷದ ಗಂಜಿಗೆ ಆಧಾ​ರ​ವಾ​ಗಿದ್ದ ಬೆಳೆ​ಗಳು ಬರದೇ ಧಾರವಾಡ ಜಿಲ್ಲೆಯ ರೈತರ ಬದುಕು ಮಸು​ಕಾ​ಗಿದೆ...

ಕಳೆದ ಆಗ​ಸ್ಟ್‌​ನ​ಲ್ಲಾದ ಅತಿ​ವೃ​ಷ್ಟಿ​ಯಿಂದಾಗಿ 1.32 ಲಕ್ಷ ಹೆಕ್ಟೇರ್‌ ಕೃಷಿ ಬೆಳೆ ಹಾಗೂ 40 ಸಾವಿರ ಹೆಕ್ಟೇರ್‌ ತೋಟ​ಗಾ​ರಿಕೆ ಬೆಳೆ ಸೇರಿ 1.70 ಲಕ್ಷ ಹೆಕ್ಟೇರ್‌ ಮುಂಗಾರು ಬೆಳೆ ಹಾನಿಯಾದ ಪರಿ​ಣಾ​ಮ,​ ಹಿಂಗಾರು ಬೆಳೆ​ಗಳ ಮೇಲೆ ರೈತರು ತುಂಬ ನಿರೀಕ್ಷೆ ಇಟ್ಟಿದ್ದರು. ಆದರೆ, ಇದೀಗ ಬಿಟ್ಟು ಬಿಡದೇ ಸುರಿ​ಯು​ತ್ತಿ​ರುವ ಮಳೆ​ಯಿಂದ ಬಿತ್ತನೆ ಆದ ಅಲ್ಪ ಪ್ರಮಾ​ಣದ ಹಿಂಗಾರು ಬೆಳೆಯೂ ನೀರಿ​ನಲ್ಲಿ ನಿಂತಿದೆ. ಅ​ಲ್ಲದೇ ಇನ್ನೂ ಬಿತ್ತ​ನೆಗೆ ಬಾಕಿ ಉಳಿದ ಒಂದು ಲಕ್ಷಕ್ಕೂ ಹೆಚ್ಚು ಹೆಕ್ಟೇರ್‌ ಪ್ರದೇ​ಶ ಬಿತ್ತ​ನೆಯೇ ಆಗ​ದಂತಹ ಸ್ಥಿತಿ ಉಂಟಾ​ಗಿದೆ.

ಶೇ. 799 ರಷ್ಟು ಮಳೆ:

ಕೃಷಿ ಇಲಾಖೆ ಅಂಕಿ ಅಂಶ​ಗಳ ಪ್ರಕಾರ ಅಕ್ಟೋ​ಬರ್‌ ಪೂರ್ಣ ತಿಂಗ​ಳಲ್ಲಿ ಜಿಲ್ಲೆ​ಯಲ್ಲಿ 96 ಮಿ.ಮೀ. ವಾಡಿಕೆ ಮಳೆ. ಆದರೆ, ಆಗಿದ್ದು ಬರೋ​ಬ್ಬರಿ 263 ಮಿ.ಮೀ. ಅದ​ರಲ್ಲೂ ಕಳೆದ ಐದು ದಿನ​ಗ​ಳಲ್ಲಿ ವಾಡಿಕೆ 18 ಮಿ.ಮೀ. ಪೈಕಿ ಆಗಿದ್ದು 156 ಮಿ.ಮೀ. (ಶೇ. 799 ರಷ್ಟು). ಈ ರೀತಿ​ ನಿರಂತ​ರ ಸುರಿ​ಯು​ತ್ತಿ​ರುವ ಮಳೆ​ಯಿಂದ ಇನ್ನೇನು ಕೈಗೆ ಬಂದಿದ್ದ ಮುಂಗಾ​ರಿ​ನ ಶೇಂಗಾ, ಹತ್ತಿ, ಗೋವಿನ ಜೋಳ ಹಾಳಾ​ಗಿ​ರು​ವು​ದ​ಲ್ಲದೇ ಹಿಂಗಾ​ರಿ​ನಲ್ಲಿ ಬಿತ್ತನೆ ಮಾಡಿದ್ದ 500 ಹೆಕ್ಟೇ​ರ್‌​ನ​ಲ್ಲಿದ್ದ ಕಡಲೆ, ಜೋಳ ಹಾಳಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಧಾರ​ವಾಡ, ನವ​ಲ​ಗುಂದ, ಕುಂದ​ಗೋಳ ತಾಲೂ​ಕು​ಗ​ಳಲ್ಲಿ ಸಾಂಪ್ರ​ದಾ​ಯಿಕ ಬೆಳೆ​ಗಳು ಹಾಳಾ​ದರೆ, ಕಲ​ಘ​ಟಗಿ ಹಾಗೂ ಅಳ್ನಾ​ವರ ಭಾಗ​ದಲ್ಲಿ ವಾಣಿಜ್ಯ ಬೆಳೆ​ಯಾದ ಕಬ್ಬು ಸಂಪೂರ್ಣ ನೆಲ​ಕ​ಚ್ಚಿದೆ. ಅದ​ರಲ್ಲೂ ಅಳ್ನಾ​ವ​ರ​ದಲ್ಲಿ ಸಂಪೂರ್ಣ ಕಬ್ಬು ಬೆಳೆ ಮಳೆಗೆ ಬಿದ್ದು ಹೋಗಿದೆ. ಆಗಸ್ಟ್‌ ತಿಂಗ​ಳಲ್ಲೂ ತುಂಬ ಹಾನಿ ಕಂಡಿ​ರುವ ಅಳ್ನಾ​ವರ ಈ ಬಾರಿಯೂ ಹೆಚ್ಚಿನ ಪ್ರಮಾ​ಣ​ದಲ್ಲಿ ಕೃಷಿ ಹಾಗೂ ತೋಟ​ಗಾ​ರಿಕೆ ಬೆಳೆ​ಹಾ​ನಿ​ಯಾ​ಗುವ ಮೂಲಕ ರೈತ​ರಿಗೆ ಬರ​ಸಿ​ಡಿಲು ಬಡಿ​ದಂತಾ​ಗಿ​ದೆ.
ಅತಿ​ಯಾದ ಮಳೆ​ಯಿಂದ ಬಹು​ತೇಕ ಎಲ್ಲ ಹೊಲ​ಗ​ಳಲ್ಲಿ ನೀರು ನಿಂತಿದ್ದು ಬಿತ್ತ​ನೆಗೂ ಹೊಲ​ಗಳು ಯೋಗ್ಯ​ವ​ಲ್ಲದ ಸ್ಥಿತಿಗೆ ಬಂದಿವೆ. ಇದ​ರೊಂದಿಗೆ ಹಳ್ಳಗಳು ಹರಿದು, ಕೆರೆ ಕಟ್ಟೆ​ಗಳು, ಒಡ್ಡು​ಗ​ಳು ಒಡೆದು ಹೊಲ​ಗಳಲ್ಲಿನ ಫಲ​ವ​ತ್ತಾದ ಮಣ್ಣು ಕೊಚ್ಚಿ ಹೋಗಿದೆ. ಹೊಲ​ಗ​ಳನ್ನು ಗುರು​ತಿ​ಸುವ ಕಲ್ಲು, ಒಡ್ಡು​ಗಳು ಕಿತ್ತು ಹೋಗಿದ್ದ ಹೊಲ​ಗಳ ನಕಾ​ಶೆಯೇ ಬದ​ಲಾ​ಗಿದ್ದು ರೈತ​ರಲ್ಲಿ ಆತಂಕ ಮೂಡಿದೆ.

ಪ್ರತಿ ವರ್ಷ ಸಂಭ್ರ​ಮ​ದಿಂದ ಆಚ​ರಿ​ಸು​ತ್ತಿದ್ದ ದೀಪಾ​ವಳಿ ಈ ಬಾರಿ ರೈತರ ಪಾಲಿಕೆ ಮಂಕಾ​ಗ​ಲಿದೆ. ಮುಂಗಾರು ಬೆಳೆ ಇಷ್ಟೊ​ತ್ತಿಗೆ ಕೈಗೆ ಬಂದು ಕೈಯಲ್ಲಿ ದುಡ್ಡಿ​ರು​ತ್ತಿತ್ತು. ಜತೆಗೆ ಹಿಂಗಾರು ಸಹ ಬಿತ್ತನೆ ಆಗಿ​ರು​ತ್ತಿ​ತ್ತು. ಈಗ ಏನೂ ಇಲ್ಲದೇ ಖಾಲಿ ಕೈಯಲ್ಲಿ ರೈತರು ಕುಳಿ​ತು​ಕೊಂಡಿ​ದ್ದಾರೆ. ಸರ್ಕಾ​ರದ ಬೆಳೆ​ವಿಮೆ, ಬೆಳೆ​ಹಾನಿ ಪರಿ​ಹಾರ ಯಾವುದೂ ಕೈಗೆ ಸಿಗು​ತ್ತಿಲ್ಲ. ಸರ್ಕಾ​ರದ ಮೇಲೂ ಭರ​ವಸೆ ಹೋಗಿದ್ದು, ರೈತರ ಭವಿಷ್ಯ ಬರ​ಬ​ರುತ್ತಾ ಮಂಕಾ​ಗು​ತ್ತಿದೆ ಎಂದು ಯಾದ​ವಾಡ ರೈತ ವಿಠ್ಠಲ ದಿಂಡ​ಲ​ಕೊಪ್ಪ ಬೇಸರ ವ್ಯಕ್ತ​ಪ​ಡಿ​ಸು​ತ್ತಾರೆ.

ಹಿಂಗಾರು ಬಿತ್ತ​ನೆಗೆ ಇನ್ನೂ ಇದೆ ಅವ​ಕಾ​ಶ

ಅತಿ​ಯಾದ ಮಳೆ​ಯಿಂದ ಮುಂಗಾ​ರಿ​ನಲ್ಲಿ 1.72 ಲಕ್ಷ ಹೆಕ್ಟೇರ್‌ ಬೆಳೆ​ಹಾ​ನಿ​ಯಾ​ಗಿತ್ತು. ಈ ಕುರಿತು ಸರ್ಕಾ​ರಕ್ಕೆ ವರದಿ ಸಹ ಸಲ್ಲಿ​ಸ​ಲಾ​ಗಿದೆ. ಪ್ರಸ್ತುತ ಕಳೆದ ಹಿಂಗಾರು ಹಾನಿಯ ಪರಿ​ಹಾರ ಧನ ವಿತ​ರಣೆ ನಡೆ​ಯು​ತ್ತಿದೆ. ಜತೆಗೆ ಪ್ರಸ್ತು​ತ ಮುಂಗಾ​ರಿನ ಬೆಳೆ​ಹಾನಿ ದಾಖ​ಲೀ​ಕರಣ ಆಗು​ತ್ತಿ​ದೆ. ಸದ್ಯ 2,565 ಹೆಕ್ಟೇರ್‌ ಹಿಂಗಾರು ಬಿತ್ತ​ನೆ​ಯಾ​ಗಿದ್ದು, ಇನ್ನೂ ನವೆಂಬರ್‌ ವರೆಗೂ ಕಡಲೆ ಹಾಗೂ ಜೋಳ ಬಿತ್ತ​ನೆಗೆ ರೈತ​ರಿಗೆ ಅವ​ಕಾ​ಶ​ವಿದೆ. ಬಿತ್ತನೆ ಬೀಜ ಹಾಗೂ ಗೊಬ್ಬ​ರಕ್ಕೆ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇ​ಶ​ಕ​ ಅಬೀದ್‌ ಎಸ್‌.​ಎಸ್‌ ಅವರು ಹೇಳಿದ್ದಾರೆ. 

Follow Us:
Download App:
  • android
  • ios