ಧಾರವಾಡ[ನ.8]: ಆಡಿಯೋ, ವಿಡಿಯೋ ವಿಷಯಗಳನ್ನು ಇಟ್ಟುಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಲು ಯಾವುದೇ ವಿಚಾರ ಇಲ್ಲ ಎಂದು ಬೃಹತ್ ಕೈಗಾರಿಕೆ ಸಚಿವ  ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ. 

ಶುಕ್ರವಾರ ನಗರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡೀಯೋ ಲೀಕ್ ವಿಚಾರದ ಬಗ್ಗೆ ಮಾತನಾಡಿದ ಅವರು, ಆಡಿಯೋ ಲೀಕ್ ಮಾಡಿದ ಬ್ರಹ್ಮ ಯಾರು ಅಂತಾ ನಾನು ಕೇಳಿದ್ದೆ, ಸುಪ್ರೀಂ ಕೋರ್ಟ್ ಗೆ ಆಡಿಯೋ ತೆಗೆದುಕೊಂಡು ಹೋಗಿದ್ದರು. ಇದೀಗ ರಾಷ್ಟ್ರಪತಿಗಳ ಬಳಿ ತೆಗೆದುಕೊಂಡು ಹೋಗಿದ್ದಾರೆ. ಇದರ ಬಗ್ಗೆ ‌ಈಗಾಗಲೇ ಸುಪ್ರೀಂ ತನ್ನ ನಿಲುವು ಸ್ಪಷ್ಟಪಡಿಸಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಿಜೆಪಿಯವರೇ ಆಡಿಯೋ ಬಿಡುಗಡೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಗರಂ ಆದ ಸಚಿವ ಜಗದೀಶ್ ಶೆಟ್ಟರ್ ಅವರು,  ಸಿದ್ದರಾಮಯ್ಯರಿಗೆ ಹಿಂದೆ-ಮುಂದು, ತಾಳ, ತಂತಿ ಇಲ್ಲ ಹಾಗೆಯೇ ಮಾತನಾಡುತ್ತ ಹೋಗುತ್ತಾರೆ. ಅದಕ್ಕೆ ಏನಾದರೂ ಒಂದು ಬೇಸ್ ಬೇಕು,ಯಾರದ್ದೋ ಹೆಸರು ಹೇಳಿದ್ದಾರೆ ಅದಕ್ಕೆ ಪ್ರೂಫ್ ಬೇಕಲ್ವೆ? ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.  ಇಂತಹವರೇ ಬಿಡುಗಡೆ ಮಾಡಿದ್ದಾರೆ ಅಂತಾ ಹೇಳತ್ತಿದ್ದಾರೆ. ಅವರ ಹತ್ತಿರ ಹೇಗೆ ಬಂತು ಆಡಿಯೋ, ನಿಮ್ಮನೇ ನಾಲ್ಕು ಜನರ ಹೆಸರು ಬಿಟ್ಟು ಬಿಡುವ ಕೆಲಸ ಮಾಡುತ್ತಾರೆ. ಏನಿಲ್ಲದೇ ದೇಶದ್ಯಾಂತ ಸುದ್ದಿ ಮಾಡುತ್ತಿದ್ದಾರೆ. ಇದರಿಂದಲೇ ಕಾಂಗ್ರೆಸ್ ಅದೋಗತಿಗೆ ಸೇರಿದೆ ಎಂದು ಹೇಳಿದ್ದಾರೆ.