ಮಳೆಗಾಲದಲ್ಲಿ ಮಾತ್ರ ಸೊಳ್ಳೆ ಹೆಚ್ಚಾಗುತ್ತೆ, ಡೆಂಗ್ಯೂ, ಮಲೇರಿಯಾ ಹರಡೋ ಸೊಳ್ಳೆ ಹಗಲಲ್ಲಿ ಮಾತ್ರ ಕಡಿಯುತ್ತೆ....ಹೀಗೆ ಅಪಾಯಕಾರಿ ರೋಗಗಳು ಹಾಗೂ ಅವುಗಳನ್ನು ಹರಡುವ ಸೊಳ್ಳೆಗಳ ಬಗ್ಗೆ ಸಾಕಷ್ಟು ಸತ್ಯ ಹಾಗೂ ಮಿಥ್ಯಗಳು ಹರಿದಾಡುತ್ತಲೇ ಇರತ್ತವೆ. ಅಷ್ಟಕ್ಕೂ ಈ ಬಗ್ಗೆ ಇರೋ ಸತ್ಯ-ಮಿಥ್ಯಗಳೇನು?

ಹಗಲಲ್ಲಿ ಮಾತ್ರ ಡೆಂಗ್ಯೂ ಸೊಳ್ಳೆ ಕಚ್ಚುತ್ತೆ...
ಏಡಸ್ ಸೊಳ್ಳೆಯಿಂದ ಡೆಂಗ್ಯೂ ಎಂಬ ಮಹಾಮಾರಿ ಹರಡುತ್ತೆ. ಸಾಮಾನ್ಯವಾಗಿ ಇದು ಹಗಲಲ್ಲೇ ಮನುಷ್ಯನನ್ನು ಕಚ್ಚುತ್ತೆ. ಈ ಸೊಳ್ಳೆ ಮೊಣಕೈ ಹಾಗೂ ಮೊಣಕಾಲಿನ ಕೆಳಗೇ ಕಚ್ಚುವುದೇ ಹೆಚ್ಚು. ಹಾಗಂತ ರಾತ್ರಿ ಕಚ್ಚುವುದೇ ಇಲ್ಲವಂತಲ್ಲ. ಸಾದ್ಯವಾದಷ್ಟು ಕೇರ್‌ಪುಲ್ ಆಗಿರುವುದು ಬೆಸ್ಟ್.

ಚಳಿಯಲ್ಲಿ ಡೆಂಗ್ಯೂ ಹರಡೋ ಸೊಳ್ಳೆ ಸಾಯುತ್ತೆ...
ಹೌದು. ವಾತಾವರಣದ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇದ್ದಾಗ ಈ ಸೊಳ್ಳೆಗಳು ಉತ್ಪತ್ತಿಯಾಗೋಲ್ಲ. ಸಾಮಾನ್ಯವಾಗಿ ಆಗಸ್ಟ್-ಅಕ್ಬೋಬರ್‌ನಲ್ಲಿ ಮಾತ್ರ ಈ ಸೊಳ್ಳೆಗಳು ಆ್ಯಕ್ಟಿವ್ ಆಗಿರುತ್ತೆ. ಇದೇ ಸಮಯದಲ್ಲಿ ಮಲೇರಿಯಾ ಹಾಗೂ ಡೆಂಗ್ಯೂ ಹರಡೋದೂ ಹೆಚ್ಚು. ಚಳಿಗಾಲದಲ್ಲಿ ಸೊಳ್ಳೆ ಉತ್ಪತ್ತಿಯಾಗುವುದು ಕಡಿಮೆ.

ಡೆಂಗ್ಯೂ ತಡೆಯಲು ಚುಚ್ಚುಮದ್ದು ಇದೆಯೇ?
ಇಲ್ಲ. ಇದುವರೆಗೂ ಈ ಮಹಾಮಾರಿಯನ್ನು ತಡೆಯಲು ಯಾವುದೇ ಔಷಧಿಯನ್ನೂ ಕಂಡು ಹಿಡಿದಿಲ್ಲ. ಸೊಳ್ಳೆಯಿಂದ ಹರಡುವ ಈ ರೋಗಕ್ಕೆ ಔಷಧಿ ಕಂಡು ಹಿಡಿಯುವ ಸಂಶೋಧನೆಗಳು ನಡೆಯುತ್ತಿದ್ದು, ಇದುವರೆಗೂ ಇನ್ನೂ ಪೂರ್ತಿ ಯಶಸ್ವಿಯಾಗಿಲ್ಲ. ಸೊಳ್ಳೆ ಕಚ್ಚದಂತೆ ಎಚ್ಚರಿಕೆ ವಹಿಸುವುದೇ ಬೆಸ್ಟ್ ಸೊಲ್ಯೂಷನ್.

ಈ ಮಾತ್ರೆ ಸೇವಿಸಿದರೆ ಡೆಂಗ್ಯೂ 48 ಗಂಟೆಯಲ್ಲಿ ವಾಸಿಯಾಗುತ್ತಾ?

ಪಪ್ಪಾಯ ಎಲೆ ರಸ ಕುಡಿದರೆ ಡೆಂಗ್ಯೂ ವಾಸಿಯಾಗುತ್ತೆ...
ಅಂಥದ್ದೊಂದು ನಂಬಿಕೆ ಜನರಲ್ಲಿದ್ದು, ಇದನ್ನು ಸಾಬೀತು ಮಾಡುವ ಯಾವುದೇ ವೈಜ್ಞಾನಿಕ ಸಂಶೋಧನೆಗಳೂ ಇನ್ನೂ ನಡೆದಿಲ್ಲ. 

ಏನಿದು ಡೆಂಗ್ಯೂ ಜ್ವರ?
ಸೊಳ್ಳೆಯಿಂದ ಹರಡುವ ಜ್ವರವಾಗಿದ್ದು, ಭಾರತದಲ್ಲಿ ಬಹಳ ಮಂದಿಯನ್ನು ಕಾಡುತ್ತಿದೆ. ನಾಲ್ಕು ರೀತಿಯ ವೈರಸ್‌ನಿಂದ ಹರಡೋ  ಜ್ವರ ಇದಾಗಿದ್ದು, ಇದನ್ನು ಬ್ರೇಕ್ ಬೋನ್ ಜ್ವರವೆಂದೂ ಕರೆಯುತ್ತಾರೆ. ಮೂಳೆಗಳ ಸಂಧು ಹಾಗೂ ಮಾಂಸಖಂಡ ನೋವಿನಿಂದ ಈ ಜ್ವರ ಪೀಡಿತರು ಬಳಲುತ್ತಾರೆ. ಸುಮಾರು 200 ವರ್ಷಗಳಿಂದಲೂ ಇಂಥದ್ದೊಂದು ಜ್ವರ ಮಾನವನನ್ನು ಕಾಡುತ್ತಿದೆ. ಆದರೆ, ಇತ್ತೀಚೆಗೆ ಕಾಟ ವಿಪರೀತವಾಗುತ್ತಿದೆ. 

ಸೊಳ್ಳೆಯಿಂದ ಮುತ್ತು ಕೊಡಿಸಿಕೊಳ್ಳುವ ಮುನ್ನ ತಿಳಿದುಕೊಳ್ಳಿ ಈ ಅಂಶಗಳು

ಎಂಥ ಪ್ರದೇಶಗಳಲ್ಲಿ ಈ ಜ್ವರ ಹರಡುತ್ತೆ?
ಕಳೆದ ಹಲವು ವರ್ಷಗಳಿಂದಲೂ ಡೆಂಗ್ಯೂವಿನಿಂದ ಬಳಲುವವರು ಭಾರತದಲ್ಲಿ ಹೆಚ್ಚಾಗುತ್ತಲೇ ಇದ್ದಾರೆ. ಆದರೆ, ದೇಶದ ಯಾವ ಭಾಗದಲ್ಲಿ ಈ ರೋಗ ಹೆಚ್ಚು ಎಂಬುದರ ಬಗ್ಗೆ ಇದುವರೆಗೂ ಯಾವುದೇ ನಿರ್ದಿಷ್ಟ ಅಂಕಿ ಅಂಶಗಳು ದಾಖಲಾಗಿಲ್ಲ. ಆದರೆ, 1996ರಲ್ಲಿ ದಿಲ್ಲಿಯಲ್ಲಿ  ಡೆಂಗ್ಯೂ ಮಹಾಮಾರಿ ಸುಮಾರು ಹತ್ತು ಸಾವಿರ ಮಂದಿಯನ್ನು ಕಾಡಿದ್ದು, 400ಕ್ಕೂ ಹೆಚ್ಚು ಮಂದಿ ಅಸು ನೀಗಿದ್ದರು, ಎಂದು ಇತ್ತೀಚೆಗೆ ಬಿಡುಗಡೆಯಾಗಿರುವ ವರದಿಯೊಂದು ಹೇಳಿದೆ.

ಒಂದೇ ಒಂದು ಸೊಳ್ಳೆಯೂ ಅಪಾಯಕಾರಿ. ಅದು ನಿಮ್ಮನ್ನು ಸಾಯಿಸೋ ಮುನ್ನು ಅದನ್ನು ಸಾಯಿಸಿಬಿಡಿ.