Asianet Suvarna News Asianet Suvarna News

ಟಾಟಾ ಮೋಟಾರ್ಸ್ Yodha 2.0 ಬಿಡುಗಡೆ, ದೇಶಾದ್ಯಂತ 750 ವಾಹನ ವಿತರಿಸಿ ದಾಖಲೆ!

ಅತ್ಯಧಿಕ ಹೊರೆ-ಸಾಗಿಸುವ ಸಾಮಥ್ರ್ಯ, ಸುರಕ್ಷಿತ ಮತ್ತು ಆರಾಮದಾಯಕ ಚಾಲನೆಗೆ ಅಗತ್ಯವಾದ ಎಲ್ಲಾ ಫೀಚರ್ಸ್ ಹೊಂದಿರುವ ಪಿಕಪ್ ವಾಹನ ಬಿಡುಗಡೆಯಾಗಿದೆ. ಬಿಡುಗಡೆ ದಿನವೇ ದೇಶಾದ್ಯಂತ 750 ವಾಹನ ವಿತರಿಸಲಾಗಿದೆ.

Tata Motors sets new benchmarks in pickups with Yodha 2 0 Intra V20 bi fuel and Intra V50 vehicle ckm
Author
First Published Sep 27, 2022, 8:50 PM IST

ಹೈದರಾಬಾದ್(ಸೆ.27): ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ಇಂದು Yodha 2.0, ಇಂಟ್ರಾ V20 ಬೈ-ಫ್ಯುಯಲ್ ಮತ್ತು ಇಂಟ್ರಾ V50 ಪಿಕಪ್ ಬಿಡುಗಡೆ ಮಾಡಿದೆ. ಅತ್ಯಧಿಕ ಹೊರೆ-ಸಾಗಿಸುವ ಸಾಮಥ್ರ್ಯ, ದೀರ್ಘವಾದ ಡೆಕ್ ಉದ್ದ, ದೀರ್ಘ ವ್ಯಾಪ್ತಿಯನ್ನು ನೀಡುತ್ತವೆ ಮತ್ತು ಸುರಕ್ಷಿತ ಮತ್ತು ಆರಾಮದಾಯಕ ಚಾಲನೆಗೆ ಅಗತ್ಯವಾದ ಹಲವಾರು ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿವೆ. ವಿವಿಧ ರೀತಿಯ ನಗರ ಮತ್ತು ಗ್ರಾಮೀಣ ಅಪ್ಲಿಕೇಶನ್‍ಗಳನ್ನು ಪೂರೈಸಲು ವಿನ್ಯಾಸಗೊಳಿಸಿ ತಯಾರಿಸಲಾಗಿರುವ  ಹೊಸ Yodha 2.0,, ಇಂಟ್ರಾ V20 ಬೈ-ಫ್ಯುಯಲ್ ಮತ್ತು ಇಂಟ್ರಾ V50 ಗಳು ವೇಗವಾಗಿ ಬೆಳೆಯುತ್ತಿರುವ ಕೃಷಿ, ಕೋಳಿ ಮತ್ತು ಡೈರಿ ವಲಯಗಳ ವೈವಿಧ್ಯಮಯ ಚಲನಶೀಲತೆಯ ಅಗತ್ಯಗಳನ್ನು ಪೂರೈಸಲು ಹಾಗೂ ವಿಸ್ತೃತಗೊಳ್ಳುತ್ತಿರುವ FMCG, ಇ-ಕಾಮರ್ಸ್ ಮತ್ತು ಲಾಜಿಸ್ಟಿಕ್ಸ್ ವಲಯಗಳ ವಿತರಣಾ ಅಗತ್ಯತೆಗಳನ್ನು ಪೂರೈಸಲು ಸೂಕ್ತವಾಗಿವೆ. ಈ ಪ್ರತಿಯೊಂದು ಪಿಕಪ್‍ಗಳು ನಮ್ಮ ಗ್ರಾಹಕರು ಗರಿಷ್ಠ ಲಾಭವನ್ನು ಗಳಿಸಲು ತಮ್ಮ ವಿಭಾಗದಲ್ಲಿ ಮಾಲೀಕತ್ವದ ಬಹಳ ಕಡಿಮೆ ಒಟ್ಟಾರೆ ವೆಚ್ಚವನ್ನು ನೀಡುತ್ತವೆ. ಟಾಟಾ ಮೋಟಾರ್ಸ್ ದೇಶದಾದ್ಯಂತ ಗ್ರಾಹಕರಿಗೆ ಅಂತಹ 750 ವಾಹನಗಳನ್ನು ವಿತರಿಸುವ ಮೂಲಕ ಭಾರತದ ಅತ್ಯುತ್ತಮ ಪಿಕಪ್‍ಗಳ ಬಿಡುಗಡೆಯನ್ನು ಆಚರಿಸಿತು.

Yodha 2.0  ಅತ್ಯುತ್ತಮ ಆಫ್-ರೋಡ್ ಸಾಮಥ್ರ್ಯದೊಂದಿಗೆ ಅತ್ಯಧಿಕ 2000 kg ಪ್ರಮಾಣದ ಪೇಲೋಡ್ ಸಾಮಥ್ರ್ಯವನ್ನು ನೀಡುತ್ತದೆ . ಅದರ ಒರಟಾದ ಸಂಯೋಜಗೆಗಳೊಂದಿಗೆ, ಹೊಸ Yodha 2.0  ಕಠಿಣವಾದ ಭೂಪ್ರದೇಶವನ್ನು ಸುಲಭವಾಗಿ ನಿಭಾಯಿಸಬಲ್ಲದು, ಈ ಮೂಲಕ ದೇಶದ ದೂರದ ಭಾಗಗಳಲ್ಲಿ ತಡೆರಹಿತ ಮತ್ತು ವೇಗವಾದ ಸರಕು ಸಾಗಣೆಯನ್ನು ಖಚಿತಪಡಿಸುತ್ತದೆ. Yodha 2.0  ಸಹ ಒರಟಾದ ನೋಟ, ಟಾಟಾ ಸಿಗ್ನೇಚರ್ 'ಟ್ರಸ್ಟ್ ಬಾರ್' ಮತ್ತು ಇತರ ಕ್ರಿಯಾತ್ಮಕ ನವೀಕರಣಗಳ ನಡುವೆ ಸೊಗಸಾದ ಗ್ರಿಲ್‍ನೊಂದಿಗೆ ನವೀಕರಿಸಿದ ವಿನ್ಯಾಸವನ್ನು ಹೊಂದಿದೆ.

 

ಹಬ್ಬದ ಋತುವಿಗೆ ಟಾಟಾದಿಂದ ಭರ್ಜರಿ ಕೊಡುಗೆ, JET ಎಡಿಶನ್ ಕಾರು ಬಿಡುಗಡೆ!

Yodha, 1200, 1500  ಮತ್ತು 1700 kg  ಪ್ರಮಾಣದ ಪೇಲೋಡ್ ಆಯ್ಕೆಗಳಲ್ಲಿ ಲಭ್ಯವಿದ್ದು, 4x4 ಮತ್ತು 4x2 ಕಾನ್ಫಿಗರೇಶನ್‍ಗಳೊಂದಿಗೆ ಬರುತ್ತದೆ ಮತ್ತು ಸಿಂಗಲ್ ಕ್ಯಾಬ್ ಮತ್ತು ಕ್ರೂ ಕ್ಯಾಬ್ ಆಯ್ಕೆಗಳಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ತಮ್ಮ ಪರಿಪೂರ್ಣ ಮಾದರಿ ಮತ್ತು ಕ್ಯಾಬ್ ಪ್ರಕಾರವನ್ನು ಆಯ್ಕೆ ಮಾಡಲು ಸಬಲೀಕರಿಸುತ್ತದೆ.

ಇಂಟ್ರಾ V50 ಸ್ಮಾರ್ಟ್ ಪಿಕಪ್, ಅತ್ಯಧಿಕ 1500 kg  ಪ್ರಮಾಣದ ಪೇಲೋಡ್ ಸಾಮಥ್ರ್ಯ ಮತ್ತು ದೊಡ್ಡ ಡೆಕ್ ಉದ್ದವನ್ನು ನೀಡುತ್ತದೆ 
ಹೊಸ ಇಂಟ್ರಾ V50 ತನ್ನ ಹೆಚ್ಚಿನ ಪೇಲೋಡ್ ಸಾಮಥ್ರ್ಯ, ಅತ್ಯಾಧುನಿಕ ಕ್ಯಾಬಿನ್ ಸೌಕರ್ಯ, ಉದ್ದವಾದ ಲೋಡ್ ಡೆಕ್ ಮತ್ತು ನಗರ ಮತ್ತು ಅರೆ-ನಗರ ಪ್ರದೇಶಗಳಲ್ಲಿನ ಎಲ್ಲಾ-ಭೂಪ್ರದೇಶದ ಕಾರ್ಯಾಚರಣೆಗಳಿಗಾಗಿ ಚಿಂತೆ-ರಹಿತ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್‍ಗಳೊಂದಿಗೆ ವಿಭಾಗದಲ್ಲಿ ಹೊಸ ಮಾದರಿಗಳನ್ನು ಹೊಂದಿಸುತ್ತದೆ.

ಟಾಟಾ ಟಿಯಾಗೊ NRG ವಾರ್ಷಿಕೋತ್ಸವ, ಹೊಚ್ಚ ಹೊಸ XT ಕಾರು ಬಿಡುಗಡೆ!

1)ಇಂಟ್ರಾ V20, 1000 kg ಪೇಲೋಡ್ ಮತ್ತು 600 km ಗಿಂತಲೂ ಹೆಚ್ಚು ಉದ್ದದ ವ್ಯಾಪ್ತಿ ಗಳೊಂದಿಗೆ ಭಾರತದ ಮೊದಲ ಬೈ-ಫ್ಯುಯಲ್ ಪಿಕಪ್ ಆಗಿದೆ 
2)ಟಾಟಾ ಮೋಟಾರ್ಸ್, ಹೆಚ್ಚಿನ ಮೌಲ್ಯಕ್ಕಾಗಿ 1000 kgಯ ಪೇಲೋಡ್ ಜೊತೆಗೆ ಸಾಬೀತಾದ ಇಂಟ್ರಾ V20 ಸಾಮಥ್ರ್ಯಗಳ ದೃಢತೆಯನ್ನು CNG ಯ ಕಾರ್ಯಾಚರಣೆಯ ಕಡಿಮೆ ವೆಚ್ಚದೊಂದಿಗೆ ಸಂಯೋಜಿಸಿದ ದೇಶದ ಮೊದಲ ಬೈ-ಫ್ಯುಯಲ್ (CNG+ಪೆಟ್ರೋಲ್) ವಾಣಿಜ್ಯ ವಾಹನವಾದ ಇಂಟ್ರಾ V20 ಅನ್ನು ಪ್ರದರ್ಶಿಸಿತು,

1 ಲಕ್ಷಕ್ಕೂ ಹೆಚ್ಚು ಸಂತೋಷದ ಗ್ರಾಹಕರ ಆದ್ಯತೆಯ ಪಿಕಪ್, ಇಂಟ್ರಾ, ಅನೇಕ ಅಪ್ಲಿಕೇಶನ್‍ಗಳಿಗೆ ಸೂಕ್ತವಾಗಿದೆ. ಟಾಟಾ ಮೋಟಾರ್ಸ್‍ನ ಯಶಸ್ವಿ 'ಪ್ರೀಮಿಯಂ ಟಫ್' ವಿನ್ಯಾಸದ ತತ್ವಶಾಸ್ತ್ರದ ಮೇಲೆ ನಿರ್ಮಿಸಲಾದ ಇಂಟ್ರಾ ಶ್ರೇಣಿಯು ವಾಕ್‍ಥ್ರೂ ಕ್ಯಾಬಿನ್, ಡ್ಯಾಶ್-ಮೌಂಟೆಡ್ ಗೇರ್ ಲಿವರ್‍ನಂತಹ ಆಧುನಿಕ ವೈಶಿಷ್ಟ್ಯಗಳೊಂದಿಗೆ ಬರುತ್ತದೆ ಮತ್ತು V10 ಮತ್ತು V30 ಸ್ಪೆಕ್ಸ್‍ಗಳನ್ನು ಸಹ ಒಳಗೊಂಡಿದ್ದು, ಇದು ವಿವಿಧ ಬಳಕೆಗಳಿಗೆ ಸ್ಮಾರ್ಟ್ ಪಿಕಪ್ ಆಯ್ಕೆಯಾಗಿದೆ.

ಹೆಚ್ಚುವರಿಯಾಗಿ, ಸಂಪೂರ್ಣ ಸೇವಾ 2.0 ಕಾರ್ಯಕ್ರಮದ ಅಡಿಯಲ್ಲಿ ಗ್ರಾಹಕರು ಉದ್ಯಮದಲ್ಲಿ ಅತ್ಯುತ್ತಮವಾದ ಮಾರಾಟಾ-ನಂತರದ ಸೇವೆ, ಬಿಡಿಭಾಗಗಳ ಸುಲಭ ಲಭ್ಯತೆ ಮತ್ತು ನೀಡಲಾಗುವ ಮೌಲ್ಯವರ್ಧಿತ ಸೇವೆಗಳ ಪ್ರಯೋಜನ ಪಡೆಯುತ್ತಾರೆ, ಇದರಲ್ಲಿ ಇವೆಲ್ಲವೂ ಸೇರಿವೆ:

ಟಾಟಾ ಜಿಪ್ಪಿ: 48 ಗಂಟೆಗಳ ಒಳಗಿನ ಸಮಸ್ಯೆ ಪರಿಹಾರ ಸಹಿತದ ದುರಸ್ತಿಯ ಸಮಯದ ಭರವಸೆ ಕಾರ್ಯಕ್ರಮ*
ಟಾಟಾ ಅಲರ್ಟ್: ವಾರಂಟಿ ಅಡಿಯಲ್ಲಿನ ವಾಹನಗಳಿಗೆ 24 ಗಂಟೆಗಳ ಒಳಗೆ ಸಮಸ್ಯೆ ಪರಿಹಾರದ ಭರವಸೆ ಸಹಿತದ ರೋಡ್ ಸೈಡ್ ಅಸಿಸ್ಟೆನ್ಸ್ ಕಾರ್ಯಕ್ರಮ
ಟಾಟಾ ಗುರು: ದೇಶದಾದ್ಯಂತ ದುರಸ್ತಿ ಮತ್ತು ಸೇವೆಗಳಿಗಾಗಿ ರೋಡ್ ಸೈಡ್ ಮತ್ತು ವರ್ಕ್‍ಶಾಪ್ ಸಹಾಯವನ್ನು ಒದಗಿಸಲು ತರಬೇತಿ ಪಡೆದ 50,000 ಕ್ಕೂ ಅಧಿಕ ತಂತ್ರಜ್ಞರು
ಟಾಟಾ ಬಂಧು: ಅಗತ್ಯವಿರುವಾಗ ಟಾಟಾ ಗುರುಗಳೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಲು ಎಲ್ಲಾ ಪಾಲುದಾರರನ್ನು-ಮೆಕ್ಯಾನಿಕ್‍ಗಳು, ಡ್ರೈವರ್‍ಗಳು ಮತ್ತು ಫ್ಲೀಟ್ ಮಾಲೀಕರನ್ನು ಒಂದೇ ವೇದಿಕೆಯಲ್ಲಿ ತರುವ ವಿಶಿಷ್ಟ ಅಪ್ಲಿಕೇಶನ್

ಹೊಸದಾಗಿ ಪರಿಚಯಿಸಲಾದ ಪಿಕಪ್‍ಗಳ ಬಹು ಮುಖಗಳು ಮತ್ತು ವೈಶಿಷ್ಟ್ಯಗಳಿಗೆ ಜೀವ ತುಂಬುವ ಭಾವನಾತ್ಮಕ ಕಥಾನಕದ ಮೂಲಕ ಪ್ರೇಕ್ಷಕರನ್ನು ತೊಡಗಿಸಿಕೊಳ್ಳಲು 360-ಡಿಗ್ರಿ, ರಾಷ್ಟ್ರೀಯ ಮಲ್ಟಿಮೀಡಿಯಾ ಮಾರ್ಕೆಟಿಂಗ್ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ ತರುವ ಇಂಜಿನಿಯರಿಂಗ್ ಸಾಮಥ್ರ್ಯ, ಸೇವಾ ಪರಿಸರ ವ್ಯವಸ್ಥೆ ಮತ್ತು ಪ್ರವೇಶದ ಸುಲಭತೆಯೊಂದಿಗೆ ವಿವಿಧ ಪಿಕಪ್‍ಗಳ ಪ್ರಮುಖ ಗುಣಲಕ್ಷಣಗಳನ್ನು ಈ ಅಭಿಯಾನಗಳು ಪರಿಣಾಮಕಾರಿಯಾಗಿ ಎತ್ತಿ ತೋರಿಸುತ್ತವೆ.

Follow Us:
Download App:
  • android
  • ios