ಟಾಟಾ ಮೋಟಾರ್ಸ್‌ನಿಂದ ಬಿಗ್ ಆಫರ್, ದೇಶಾದ್ಯಂತ ಕಸ್ಟಮರ್ ಕೇರ್ ಮಹೋತ್ಸವ!

ಟಾಟಾ ಮೋಟಾರ್ಸ್ ತನ್ನ ಗ್ರಾಹಕರಿಗೆ ಅತೀ ದೊಡ್ಡ ಕಸ್ಟಮರ್ ಕೇರ್ ಮಹೋತ್ಸವ ಆಯೋಜಿಸಿದೆ. ಇದು ಒಂದು ತಿಂಗಳ ನಡೆಯಲಿದೆ. ವಾಹನ ತಪಾಸಣೆ, ಸರ್ವೀಸ್, ಚಾಲಕ ತರಬೇತಿ ಸೇರಿದಂತೆ ಹಲವು ಸೇವೆಗಳನ್ನು ಟಾಟಾ ಮೋಟಾರ್ಸ್ ನೀಡುತ್ತಿದೆ.

Tata Motors organize customer car festival for commercial vehicle ckm

ನವದೆಹಲಿ(ಅ.30) ದೇಶದ ಅತೀ ದೊಡ್ಡ ಹಾಗೂ ಹೆಮ್ಮೆಯ ಆಟೋಮೊಬೈಲ್ ಕಂಪನಿ ಟಾಟಾ ಮೋಟಾರ್ಸ್ ಇದೀಗ ತನ್ನ ಗ್ರಾಹಕರಿಗೆ ಮತ್ತೊಂದು ಕೊಡುಗೆ ನೀಡಿದೆ. ದೇಶಾದ್ಯಂತ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ಕಸ್ಟಮರ್ ಕೇರ್ ಮಹೋತ್ಸವ ಆಯೋಜಿಸಿದೆ. ಒಟ್ಟು 2,500 ಸರ್ವೀಸ್ ಸೆಂಟರ್‌ಗಳಲ್ಲಿ ಈ ಮಹೋತ್ಸವ ನಡೆಯಲಿದೆ. ವಾಹನ ಮಾಲಕರು, ಚಾಲಕರ ಜೊತೆ ಸಂವಾದ, ತರಬೇತಿ, ಸರ್ವೀಸ್ ಸೇರಿದಂತೆ ಹಲವು ಪ್ರಯೋಜನಗಳು ಸಿಗಲಿದೆ. ತರಬೇತಿ ಪಡೆದ ತಂತ್ರಜ್ಞರು ವಾಹನ ತಪಾಸಣೆ ನಡೆಸಲಿದ್ದಾರೆ. ಜೊತೆಗೆ ಗ್ರಾಹಕರು ಮೌಲ್ಯವರ್ಧಿತ ಸೇವೆಗಳನ್ನು ಪಡೆಯಲಿದ್ದಾರೆ. ಅವೆಲ್ಲದರ ಜೊತೆಗೆ ಚಾಲಕರು ಸಂಪೂರ್ಣ ಸೇವಾ 2.0 ಯೋಜನೆಯ ಅಡಿಯಲ್ಲಿ ಹಲವು ಪ್ರಯೋಜನ ಪಡೆಯುವುದರ ಜೊತೆಗೆ ಸುರಕ್ಷಿತ ಚಾಲನೆ ಮತ್ತು ಇಂಧನ ಉಳಿಸುವ ಚಾಲನೆ ತರಬೇತಿ ಪಡೆಯಲಿದ್ದಾರೆ. ಈ ಕಸ್ಟಮರ್ ಮಹೋತ್ಸವ ಆಫರ್ ಡಿಸೆಂಬರ್ 24ರ ವರೆಗೆ ಆಯೋಜಿಸಲಾಗಿದೆ. 

ಉತ್ತಮ ರೀತಿಯ ವಾಹನ ತಪಾಸಣೆಯ ಮೂಲಕ ಮತ್ತು ಹಲವಾರು ಪ್ರಯೋಜನಗಳನ್ನು ಒದಗಿಸುವ ಮೂಲಕ ಅತ್ಯುತ್ತಮ ದರ್ಜೆಯ ಸೇವೆಯನ್ನು ಟಾಟಾ ಮೋಟಾರ್ಸ್ ನೀಡಲಿದೆ.  ಮಹೋತ್ಸವದ ಸಂದರ್ಭದಲ್ಲಿ ದೇಶದಾದ್ಯಂತ ಇರುವ ಎಲ್ಲಾ ಟಚ್‌ ಪಾಯಿಂಟ್‌ ನಲ್ಲಿಯೂ ನಮ್ಮ ಗ್ರಾಹಕರು ಸಂಪೂರ್ಣವಾಗಿ ಸಂತುಷ್ಠರಾಗುತ್ತಾರೆ ಅನ್ನೋ ಭರವಸೆ ಇದೆ ಎಂದು ಟಾಟಾ ಮೋಟಾರ್ಸ್ ನಿರ್ದೇಶಕ ಗಿರೀಶ್ ವಾಘ್ ಹೇಳಿದ್ದಾರೆ. ಎಲ್ಲಾ ಗ್ರಾಹಕರನ್ನು ಅವರ ಹತ್ತಿರದ ಟಾಟಾದ ಅಧಿಕೃತ ಸರ್ವೀಸ್ ಸೆಂಟರ್ ಗೆ ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇವೆ ಎಂದರು.

ಟಾಟಾ ನಡೆಗೆ ಬೆಚ್ಚಿದ ಇವಿ ಕಂಪನಿ, 270 ಕಿ.ಮೀ ಮೈಲೇಜ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್‌ಗೆ ತಯಾರಿ!

ಟಾಟಾ ಮೋಟಾರ್ಸ್‌ ನ ದೊಡ್ಡದಾದ ವಾಣಿಜ್ಯ ವಾಹನ ಪೋರ್ಟ್‌ಫೋಲಿಯೋಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲೆಂದೇ ಆರಂಭಿಲಾಗಿರುವ ಸಂಪೂರ್ಣ ಸೇವಾ 2.0 ಯೋಜನೆಯು ಅದಕ್ಕಾಗಿಯೇ ಹಲವಾರು ಮೌಲ್ಯವರ್ಧಿತ ಸೇವೆಗಳನ್ನು ಗ್ರಾಹಕರಿಗೆ ಒದಗಿಸುತ್ತದೆ. ಆ ಮೂಲಕ ವಾಹನ ಖರೀದಿಯಿಂದ ಹಿಡಿದು ಅದರ ಜೀವನಚಕ್ರದ ಎಲ್ಲಾ ಸಂದರ್ಭಗಳಲ್ಲಿಯೂ ಉತ್ತಮ ಸೇವೆ ನೀಡಲಾಗುತ್ತದೆ. ಬ್ರೇಕ್ ಡೌನ್ ಅಸಿಸ್ಟೆನ್ಸ್, ನಿಗದಿತ ಸಮಯದಲ್ಲಿ ನಿರ್ವಹಣೆ, ಆನ್ಯುವಲ್ ಮೇಂಟೆನೆನ್ಸ್ ಕಾಂಟ್ರಾರ್ಕ್ಟ್ಸ್ (ಎಎಂಸಿ) ಮತ್ತು ನಿಜವಾದ ಬಿಡಿಭಾಗಗಳ ಒದಗಿಸುವಿಕೆ ಸೇರಿದಂತೆ ಎಲ್ಲಾ ರೀತಿಯ ಸೇವೆ ನೀಡಲಾಗುತ್ತದೆ. ಜೊತೆಗೆ ಟಾಟಾ ಮೋಟಾರ್ಸ್ 

ವಾಹನಗಳ ನಿರ್ವಹಣೆಗೆ ಅದರ ಕನೆಕ್ಟೆಡ್ ವೆಹಿಕಲ್ ಪ್ಲಾಟ್ ಫಾರ್ಮ್ ಆದ ಫ್ಲೀಟ್ ಎಡ್ಜ್ ಅನ್ನು ಹೊಂದಿದ್ದು, ಅದು ವಾಹನಗಳ ಕಾರ್ಯಾಚರಣೆ ಅವಧಿಯನ್ನು ಹೆಚ್ಚಿಸುತ್ತದೆ ಮತ್ತು ವಾಹನ ನಿರ್ವಹಣೆಯ ವೆಚ್ಚವನ್ನು ಕಡಿಮೆಗೊಳಿಸುತ್ತದೆ.

ಭಾರತದಲ್ಲಿ ಲಭ್ಯವಿರುವ ಟಾಪ್ 6 ಪ್ರಿಮಿಯಂ ಎಲೆಕ್ಟ್ರಿಕ್ ಕಾರು, ಟಾಟಾದ್ದೇ ಮೇಲುಗೈ!
 

Latest Videos
Follow Us:
Download App:
  • android
  • ios