ಗ್ರಾಹಕನಿಗೆ ದೋಷಪೂರಿತ ಕಾರು ನೀಡಿದ BMWಗೆ ಸಂಕಷ್ಟ, 50 ಲಕ್ಷ ರೂ ಪರಿಹಾರಕ್ಕೆ ಸುಪ್ರೀಂ ಕೋರ್ಟ್ ಆದೇಶ!
ಡಿಫೆಕ್ಟೀವ್ ಕಾರು ನೀಡಿದ BMW ಡೀಲರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೂ ಸತತ ಹೋರಾಟದಿಂದ ಫಲ ಸಿಕ್ಕಿದ. ಇದೀಗ ಸುಪ್ರೀಂ ಕೋರ್ಟ್, ಗ್ರಾಹಕನಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.
ಹೈದರಾಬಾದ್(ಜು.15) ಐಷಾರಾಮಿ ಹಾಗೂ ದುಬಾರಿ ಕಾರುಗಳ ಪೈಕಿ BMW ಮುಂಚೂಣಿಯಲ್ಲಿದೆ. ಭಾರತದಲ್ಲಿ BMW ಕಾರಿಗೆ ಬಾರಿ ಬೇಡಿಕೆ ಇದೆ. ಹೀಗೆ ಐಷಾರಾಮಿ ಕಾರು ಖರೀದಿಸಿದ ಗ್ರಾಹಕನಿಗೆ ಸಮಸ್ಯೆ ಎದುರಾಗಿದೆ.ದೋಷಪೂರಿತ ಕಾರು ನೀಡಿದ BMW ವಿರುದ್ಧ ಗ್ರಾಹಕರ ದೂರು ದಾಖಲಿಸಿದ್ದಾನೆ. ಆಂಧ್ರ ಪ್ರದೇಶ ಹೈಕೋರ್ಟ್ ಬಳಿಕ ಈ ಪ್ರಕರಣ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ ಇದೀಗ ಗ್ರಾಹಕನ ಪರವಾಗಿ ತೀರ್ಪು ನೀಡಿದೆ. ಗ್ರಾಹಕನಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಸೆಪ್ಟೆಂಬರ್ 25, 2009ರಲ್ಲಿ ಹೈದರಾಬಾದ್ ಗ್ರಾಹಕ ಹೊಚ್ಚ ಹೊಸ BMW 7 ಸೀರಿಸ್ ಕಾರು ಖರೀದಿಸಿದ್ದರು. 4 ದಿನಗಳ ಬಳಿಕ ಮಾಲೀಕ ಕಾರು ಡ್ರೈವಿಂಗ್ ವೇಳೆ ಕಾರಿನಲ್ಲಿ ಕೆಲ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿದೆ. ಈ ವೇಳೆ ಕಾರು ಸರ್ವೀಸ್ ಸಿಬ್ಬಂದಿಗಳು ಕಾರು ತಪಾಸಣೆ ಮಾಡಿದ್ದಾರೆ. ಬಳಿಕ ನೆವೆಂಬರ್ 13, 2009ರಂದೂ ಇದೇ ರೀತಿ ಸಮಸ್ಯೆ ಕಾಣಿಸಿಕೊಂಡಿದೆ. ಈ ವೇಳೆ ದೋಷಪೂರಿತ ಕಾರನ್ನು ತನಗೆ ನೀಡಲಾಗಿದೆ ಅನ್ನೋದು ಮನದಟ್ಟವಾಗಿದೆ.
ಪ್ರಯಾಣಿಕನ ಜೊತೆ ಚಾಲಕನ ಗೂಂಡಾ ವರ್ತನೆ, 1 ಲಕ್ಷ ರೂ ಪರಿಹಾರ ನೀಡಲು ಓಲಾಗೆ ಸೂಚನೆ!
ನವೆಂಬರ್್ 16, 2009ರಂದು ಮಾಲೀಕ BMW ವಿರುದ್ಧ ದೂರು ದಾಖಲಿಸಿದ್ದಾನೆ. 2012ರಲ್ಲಿ ಆಂಧ್ರ ಪ್ರದೇಶ ಹೈಕೋರ್ಟ್, BMW ವಿರುದ್ಧದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸಿತ್ತು. ಇಷ್ಟೇ ಅಲ್ಲ ಗ್ರಾಹಕನಿಗೆ ದೋಷಪೂರಿತ ಕಾರು ನೀಡಿರುವ ಕಾರಣ ಹೊಚ್ಚ ಹೊಸ BMW ಕಾರು ನೀಡುವಂತೆ ಕೋರ್ಟ್ ಸೂಚಿಸಿತ್ತು. ಅತ್ತ BMW ಡೀಲರ್ ಕೂಡ ಇದಕ್ಕೆ ಒಪ್ಪಿಕೊಂಡಿದ್ದರು. ಗ್ರಾಹಕನಿಗೆ ಹೊಸ ಕಾರು ನೀಡಲು BMW ಡೀಲರ್ ತಯಾರಿ ನಡೆಸಿತ್ತು. ಆದರೆ ಹೈಕೋರ್ಟ್ ಆದೇಶವನ್ನು ಗ್ರಾಹಕ ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಹೀಗಾಗಿ ತನ್ನ ವಕೀಲರ ಮೂಲಕ BMW ಕಾರು ಡೀಲರ್ಗೆ ನೋಟಿಸ್ ಸಲ್ಲಿಸಲಾಯಿತು. ಈ ಆದೇಶವನ್ನು ಗ್ರಾಹಕ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ತಾನು BMW ಕಾರು ಸ್ವೀಕರಿಸಲು ಸಾಧ್ಯವಿಲ್ಲ. ತಾನು ಕಾರು ಖರೀದಿಸುವಾಗ ನೀಡಿದ ಮೊತ್ತ, ಅದಕ್ಕೆ ಬಡ್ಡಿ ಸೇರಿಸಿ ವಾಪಸ್ ನೀಡುವಂತೆ ಆಗ್ರಹಿಸಲಾಗಿತ್ತು.
ಹೀಗಾಗಿ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇದೀಗ ಗ್ರಾಹಕನ ಪರವಾಗಿ ತೀರ್ಪು ನೀಡಿದೆ. ಗ್ರಾಹಕನಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
8 ಕಿ.ಮಿಗೆ 1,334 ರೂ ಚಾರ್ಜ್ ಮಾಡಿ ಉಬರ್, ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ ಸಿಕ್ತು 10 ಸಾವಿರ ರೂ!