ಹೊಸ ದಾಖಲೆಗೆ ಭಾರತದ ಆಟೋ ಮಾರ್ಕೆಟ್ ಸಜ್ಜು, ಬಿಡುಗಡೆಯಾಗಲಿದೆ RE ಎನ್‌ಫೀಲ್ಡ್ to ಹ್ಯುಂಡೈ ಟಕ್ಸನ್!
ಆಗಸ್ಟ್ ತಿಂಗಳು ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಯಾಗಲಿದೆ. ಕಾರಣ ಬೈಕ್, ಕಾರು ಸೇರಿದಂತೆ ಹಲವು ವಾಹನಗಳು ಈ ತಿಂಗಳು ಬಿಡುಗಡೆಯಾಗುತ್ತಿದೆ. ಕಡಿಮೆ ಬೆಲೆ, ಐಷಾರಾಮಿ ಕಾರು ಸೇರಿದಂತೆ ಹಲವು ವಿದಧ ವಾಹನಗಳಿವೆ. ಈ ತಿಂಗಳು ಬಿಡುಗಡೆಯಾಗಲಿರುವ ಕಾರು ಹಾಗೂ ಬೈಕ್ ವಿವರ ಇಲ್ಲಿದೆ.
ಬೆಂಗಳೂರು(ಆ.02): ಭಾರತದಲ್ಲಿ ಆಗಸ್ಟ್ ತಿಂಗಳು ಆಟೋಮೊಬೈಲ್ ಮಾರುಕಟ್ಟೆಗೆ ಅತ್ಯಂತ ಮುಖ್ಯ ತಿಂಗಳು. ಪ್ರತಿ ವರ್ಷ ಅಗಸ್ಟ್ ತಿಂಗಳಲ್ಲಿ ಅತೀ ಹೆಚ್ಚಿನ ವಾಹನಗಳು ಬಿಡುಗಡೆಯಾಗುತ್ತದೆ. ಇಷ್ಟೇ ಅಲ್ಲ ಮಾರಾಟದಲ್ಲೂ ಗರಿಷ್ಠ ದಾಖಲೆ ಬರೆದಿದೆ. ಈ ಬಾರಿಯೂ ಇದೀಗ ಆಗಸ್ಟ್ ತಿಂಗಳಲ್ಲಿ ಕಾರು, ಬೈಕ್ ಸೇರಿದಂತೆ ಹೊಸ ಹೊಸ ವಾಹನಗಳು ಬಿಡುಗಡೆಯಾಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ಕಾರು ಹಾಗೂ ಬೈಕ್ ವಿವರ ಇಲ್ಲಿವೆ.
ಹ್ಯುಂಡೈ ಟಕ್ಸನ್
ಹ್ಯುಂಡೈ ಟಕ್ಸನ್ ಅತ್ಯಾಧುನಿಕ ತಂತ್ರಜ್ಞಾನದ ನೂತನ ಹ್ಯುಂಡೈ ಟಕ್ಸನ್ ಕಾರು ಆಗಸ್ಟ್ 4 ರಂದು ಬಿಡುಗಡೆಯಾಗಲಿದೆ. ADAS ತಂತ್ರಜ್ಞಾನದಲ್ಲಿ ಬಿಡುಗಡೆಯಾಗುತ್ತಿರುವ ಭಾರತದ ಮೊದಲ ಕಾರು ಅನ್ನೋ ಹೆಗ್ಗಳಿಕೆಗೆ ಟಕ್ಸನ್ ಪಾತ್ರವಾಗಿದೆ. ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ ಇದಾಗಿದ್ದು, ಅಪಘಾತಗಳ ಪ್ರಮಾಣವನ್ನ ತಗ್ಗಿಸಲಿದೆ. ಜೀಪ್ ಕಂಪಾಸ್, ವೋಕ್ಸ್‌ವ್ಯಾಗನ್ ಟೈಗನ್, ಸಿಟ್ರೋನ್ ಸಿ5 ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.
ಆಗಸ್ಟ್ ತಿಂಗಳಲ್ಲಿ ಸಾಲು ಸಾಲು ಹೊಸ ಕಾರುಗಳ ಬಿಡುಗಡೆ
ರಾಯಲ್ ಎನ್‌ಫೀಲ್ಡ್ 350
ರಾಯಲ್ ಎನ್‌ಫೀಲ್ಡ್ 350 ಬೈಕ್ ಆಗಸ್ಟ್ 7 ರಂದು ಭಾರತದಲ್ಲಿ ಬಿಡುಗಡೆಯಾಲಿದೆ. ರೋಡ್‌ಸ್ಟರ್ ಸ್ಟೈಲ್ ಬೈಕ್ ಇದಾಗಿದ್ದು, ಜೆ ಪ್ಲಾಟ್‌ಫಾರ್ಮ್ ಅಡಿಯಲ್ಲಿ ನೂತನ ಬೈಕ್ ಬಿಡುಗಡೆಯಾಗುತ್ತಿದೆ. ಇದು ರಾಯಲ್ ಎನ್‌ಪೀಲ್ಡ್ ಬೈಕ್‌ಗಳ ಪೈಕಿ ಕೈಗೆಟುಕುವ ದರದ ಬೈಕ್ ಎನ್ನಲಾಗಿದೆ. ರೌಂಡ್ ಹೆಡ್‌ಲ್ಯಾಂಪ್ಸ್, ಟೈಲ್ ಲ್ಯಾಂಪ್ಸ್ ಹೊಂದಿದೆ. ಇನ್ನು ಬ್ಲಾಕ್ ಅಲೋಯ್ ವ್ಹೀಲ್ಸ್ ಸೇರಿದಂತೆ ಹಲವು ಹೊಸತನ ಈ ಬೈಕ್‌ನಲ್ಲಿದೆ.
ಹೊಂಡಾ ಬಿಂಗ್‌ವಿಂಗ್
ಹೊಂಡಾ ಈಗಾಗಲೇ ಆಗಸ್ಟ್ 8ರಂದು ಹೊಸ ಬೈಕ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಬಿಂಗ್‌ವಿಂಗ್ ಅಡಿಯಲ್ಲಿ ನೂತನ ಬೈಕ್ ಬಿಡುಗಡೆಯಾಗಲಿದೆ. ಆದರೆ ಯಾವ ಬೈಕ್ ಅನ್ನೋದು ಖಚಿತಪಡಿಸಿಲ್ಲ. ಮೂಲಗಳ ಪ್ರಕಾರ ಹೋಂಡಾ CB350 ಹಾಗೂ CB350RS ಬೈಕ್ ಬಿಡುಗಡೆಯಾಗುವ ಸಾಧ್ಯತೆ ಇದೆ. ರಾಯಲ್ ಎನ್‌ಫೀಲ್ಡ್ ಮಿಟಿಯೋರ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿದೆ.
ಟೋಯೋಟಾ ಅರ್ಬನ್ ಕ್ರೂಸರ್ ಹೈರೈಡರ್
ಆಗಸ್ಟ್ 16 ರಂದು ಟೋಯೋಚಾ ಅರ್ಬನ್ ಕ್ರೂಸರ್ ಹೈರೈಡರ್ ಕಾರು ಬಿಡುಗಡೆಯಾಗಲಿದೆ. 1.5 ಲೀಟರ್ ಎಂಜಿನ್ ಹೊಂದಿರುವ ಹೈರೈಡರ್ ಹೈಬ್ರಿಡ್ ಟೆಕ್ ಹೊಂದಿದೆ. ಮಾರುತಿ ವಿಟಾರಾ ಬ್ರಿಜಾ ಫೀಚರ್ಸ್ ಹೊಂದಿದ್ದು, ಕ್ರಾಸ್ ಬ್ಯಾಡ್ಜಿಂಗ್ ಮೂಲಕ ನಿರ್ಮಾಣವಾಗಿರುವ ಕಾರು ಇದಾಗಿದೆ. ಕ್ರಾಸ್ ಬ್ಯಾಡ್ಜಿಂಗ್ ಮೂಲಕ ಟೋಯೋಟಾ ಮಾರುತು ಬ್ರಿಜಾ ಹಾಗೂ ಮಾರುತಿ ಬಲೆನೋ ಕಾರನ್ನು ಬಿಡುಗಡೆ ಮಾಡಿದೆ.
ಕಾರು ಮಾರಾಟದಲ್ಲಿ ಹೊಸ ದಾಖಲೆ ಬರೆದ ಟಾಟಾ, ಜುಲೈ ತಿಂಗಳಲ್ಲಿ 81,790 ವಾಹನ ಸೇಲ್!
ಮಾರುತಿ ಸುಜುಕಿ ಅಲ್ಟೋ
ಹೊಸ ವಿನ್ಯಾಸದಲ್ಲಿ ಮಾರುತಿ ಸುಜುಕಿ ಅಲ್ಟೋ ಕಾರು ಆಗಸ್ಟ್ 18 ರಂದು ಬಿಡುಗಡೆಯಾಗಲಿದೆ. ನೂತನ ಕಾರು ಹಲವು ವಿಶೇಷತೆಗಳನ್ನು ಹೊಂದಿದೆ. ಹೊಸ ಕಾರಿನ ಮುಂಭಾಗ ಗ್ರೀಲ್ ಮಾರುತಿ ಬಲೆನೋ ಕಾರಿನ ವಿನ್ಯಾಸವನ್ನು ಹೋಲುತ್ತಿದೆ. ಇನ್ನು ಹೆಚ್ಚಿನ ಸ್ಥಳವಕಾಶ ನೀಡಲಾಗಿದೆ. ದಕ್ಷ ಎಂಜಿನ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.
ಮರ್ಸಡೀಸ್ AMG EQS 53 4ಮ್ಯಾಟಿಕ್ +
ಐಷಾರಾಮಿ ಕಾರಾಗಿರುವ ಮರ್ಸಿಡೀಸ್ ಆಗಸ್ಟ್ 24ಕ್ಕೆ AMG EQS 53 4ಮ್ಯಾಟಿಕ್ + ಸೆಡಾನ್ ಕಾರು ಬಿಡುಗಡೆ ಮಾಡುತ್ತಿದೆ. ಇದು ಸ್ಥಳೀಯಾವಾಗಿ ಜೋಡಣೆ ಮಾಡಿದ ಕಾರಾಗಿದೆ. ಈ ಕಾರಿನ ಬಳಿಕ ಮರ್ಸಿಡೀಸ್ EQS 450+ ಹಾಗೂ EQS 580 4MATIC ಕಾರು ಭಾರತದಲ್ಲಿ ಬಿಡುಗಡೆಯಾಗತ್ತಿದೆ.