ಶ್ರೀಮಂತರು, ಉದ್ಯಮಿಗಳು, ಸೆಲೆಬ್ರೆಟಿಗಳು ತಮಗಿಷ್ಟವಾದ ರೀತಿಯಲ್ಲಿ ಕಾರು, ಕಾರಾವಾನ್, ವ್ಯಾನಿಟಿ ವ್ಯಾನ್ ಮಾಡಿಫಿಕೇಶನ್ ಮಾಡುವ ಭಾರತದ ಅತ್ಯಂಜ ಜನಪ್ರಿಯ ಕಂಪನಿ ಡಿಸಿ ಡಿಸೈನ್ ಅಧ್ಯಕ್ಷ  ದಿಲೀಪ್ ಚಾಬ್ರಿಯಾ ಅರೆಸ್ಟ್ ಆಗಿದ್ದಾರೆ.

ಮುಂಬೈ(ಡಿ.29): ಡಿಸಿ ಡಿಸೈನ್ ಕಂಪನಿ ಭಾರತದಲ್ಲಿ ಅತ್ಯಂತ ಜನಪ್ರೀಯವಾಗಿದೆ. ಬಾಲಿವುಡ್ ಸೇರಿದಂತೆ ಭಾರತೀಯ ಚಿತ್ರರಂಗದ ಸೆಲೆಬ್ರೆಟಿಗಳ ಕಾರವಾನ್, ವ್ಯಾನಿಟಿ ವ್ಯಾನ್ ಸೇರಿದಂತೆ ಐಷಾರಾಮಿ ಕಾರುಗಳನ್ನು ಮಾಡಿಫಿಕೇಶನ್ ಮಾಡಿದ ಹೆಗ್ಗಳಿಗೆ ಡಿಸಿ ಡಿಸೈನ್ ಕಂಪನಿಗಿದೆ. ಮುಂಬೈನಲ್ಲಿ ಈ ಡಿಸಿ ಡಿಸೈನ್, ವಿಶ್ವಮಟ್ಟದಲ್ಲೇ ಭಾರೀ ಸದ್ದು ಮಾಡಿದೆ. ಆದರೆ ಇದೀಗ ಇದೇ ಕಂಪನಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿ ಸಂಕಷ್ಟಕ್ಕೆ ಸಿಲುಕಿದೆ.

View post on Instagram

ಕಿಚನ್, ಬಾಥ್‌ರೂಂ, ಟಾಯ್ಲೆಟ್; ಈ ಇನೋವಾ ಕಾರಿನಲ್ಲಿ ಎಲ್ಲವೂ ಇದೆ!.

ಡಿಸಿ ಡಿಸೈನ್ ಕಂಪನಿ ಕಾರಿನ ಒಳವಿನ್ಯಾಸ, ಹೊರವಿನ್ಯಾಸ ಸೇರಿದಂತೆ ಎಲ್ಲಾ ರೀತಿಯಲ್ಲಿ ಮಾಡಿಫಿಕೇಶ್ ಮಾಡಲಿದೆ. ಆದರೆ ಈ ಕಂಪನಿ ಅಧ್ಯಕ್ಷ ದಿಲೀಪ್ ಚಾಬ್ರಿಯಾ ವಿರುದ್ಧ ಇದೀಗ ವಂಚನೆ ಪ್ರಕರಣ ದಾಖಲಾಗಿದೆ. ಹೀಗಾಗಿ ಮುಂಬೈ ಅಪರಾಧ ತನಿಖಾ ದಳ ವಿಭಾಗದ ಪೊಲೀಸರು ದಿಲೀಪ್ ಚಾಬ್ರಿಯಾರನ್ನು ಬಂಧಿಸಿದ್ದಾರೆ.

View post on Instagram

ಮಾಡಿಫೈ ಮಾಡಿ Isuzu V Max ಕಾರಿಗೆ 48 ಸಾವಿರ ರೂ ದಂಡ; ಕೋರ್ಟ್ ಮೆಟ್ಟಿಲೇರಿದ ಮಾಲೀಕ!

ಬಂಧನ ಮಾತ್ರವಲ್ಲ, ಡಿಸಿ ಡೈಸನ್ ಮಾಡಿಫಿಕೇಶ್ ಮಾಡಿದ್ದ ಕೋಟ್ಯಾಂತರ ರೂಪಾಯಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ದಿಲೀಪ್ ಚಾಬ್ರಿಯಾ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿದೆ. ಆದರೆ ಈ ಕುರಿತು ಹಚ್ಚಿನ ಮಾಹಿತಿಯನ್ನು ಮುಂಬೈನ ಅಪರಾಧ ತನಿಖಾ ವಿಭಾಗದ ಪೊಲೀಸರು ನೀಡಲು ನಿರಾಕರಿಸಿದ್ದಾರೆ.

View post on Instagram

ಡಿಸಿ ಡಿಸೈನ್ ಕಂಪನಿ ಹಾಗೂ ಅಧ್ಯಕ್ಷ ದಿಲೀಪ್ ಚಾಬ್ರಿಯಾ ಮೇಲೆ ವಂಚನೆ ಪ್ರಕರಣ ದಾಖಲಾಗುತ್ತಿರುವುದು ಇದೇ ಮೊದಲಲ್ಲ. ಹಲವು ಬಾಲಿವುಡ್ ನಟರು, ಟೀಂ ಇಂಡಿಯಾ ಕ್ರಿಕೆಟಿಗರು ಸೇರಿದಂತೆ ಉದ್ಯಮಿಗಳು ಡಿಸಿ ಡಿಸೈನ್ ಕಂಪನಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಕೂದಲೆಳೆಯುವ ಅಂತರಿಂದ ಬಚಾವ್ ಆಗಿದ್ದ ಅಧ್ಯಕ್ಷ ದಿಲೀಪ್ ಚಾಬ್ರಿಯಾ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.