ಮಧ್ಯಾಹ್ನ 3 ರಿಂದ ರಾತ್ರಿ 9ರ ವರೆಗಿನ ಪ್ರಯಾಣದಲ್ಲಿ ಇರಲಿ ಎಚ್ಚರ, ಇಲ್ಲಿದೆ ಕಾರಣ!
ಕಾರು ಅಥವಾ ಇನ್ಯಾವುದೇ ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದೀರಾ? ನೀವು ಪ್ರಯಾಣ ಮಾಡುತ್ತಿರುವ ಸಮಯ ಮಧ್ಯಾಹ್ನ3 ರಿಂದ ರಾತ್ರಿ 9 ಗಂಟೆ ಒಳಗಿದ್ದರೆ ಅತೀವ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.
ನವದೆಹಲಿ(ಜ.02): ಉದ್ಯೋಗದ ಕಾರಣಕ್ಕಾಗಿ, ಕುಟುಂಬಕ್ಕಾಗಿ, ಪ್ರವಾಸ, ಅನಿವಾರ್ಯವಾಗಿ ಸೇರಿದಂತೆ ಹಲವು ಕಾರಣಗಳಿಗೆ ಪ್ರಯಾಣ ಅನಿವಾರ್ಯ. ಒಂದು ಸ್ಥಳದಿಂದ ಮತ್ತೊಂಡೆದೆ ಪ್ರಯಾಣಕ್ಕಾಗಿ ಹಲವು ಸಾರಿಗೆಗಳಿವೆ. ಸಾರ್ವಜನಿಕ ಸಾರಿಗೆ, ಕಾರು ಸೇರಿದಂತೆ ಐಷಾರಾಮಿ ವ್ಯವಸ್ಥೆಗಳಿವೆ. ಆದರೆ ಪ್ರಯಾಣ ಯಾವ ಸಮಯದಲ್ಲಿ ಮಾಡುತ್ತೀರಿ? ಜೊತೆಗೆ ಹೇಗೆ ಮಾಡುತ್ತೀರಿ ಅನ್ನೋದು ಅಷ್ಟೇ ಮುಖ್ಯ. ನೀವ ಪ್ರಯಾಣ ಮಾಡುವಾಗ ಎಷ್ಟು ಜಾಗರೂಕರಾಗಿದ್ದೀರಿ ಅನ್ನೋದು ಮತ್ತೂ ಮುಖ್ಯ. ಈ ಮಾತು ಹೇಳಲು ಕೆಲ ಕಾರಣಗಳಿವೆ. ನೀವು ಕಾರಿನ ಮೂಲಕ ಅಥವಾ ಇನ್ಯಾವುದೇ ವಾಹನ ಮೂಲಕ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆ ಒಳಗೆ ಪ್ರಯಾಣ ಮಾಡುತ್ತೀದ್ದೀರಾ? ಹಾಗಾದರೆ ಅತೀವ ಎಚ್ಚರಿಕೆ ವಹಿಸಬೇಕು. ಹಾಗಂತ ಉಳಿದ ಸಮಯದಲ್ಲಿ ಬೇಕಾಬಿಟ್ಟಿ ಪ್ರಯಾಣಿಸದರೆ ಒಕೆ ಎಂದರ್ಥವಲ್ಲ. 3 ರಿಂದ ರಾತ್ರಿ 9ರವರೆಗೆ ಭಾರತದ ಯಾವುದೇ ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರ ಅಗತ್ಯ. ಕಾರಣ ಈ ಸಮಯದಲ್ಲಿ ಭಾರತದಲ್ಲಿ ಅತೀ ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸಿದೆ. ಈ ಕುರಿತು ಕೇಂದ್ರ ರಸ್ತೆ ಸಾರಿಗೆ ಇಲಾಖೆ ಮಹತ್ವದ ಅಂಕಿ ಅಂಶ ಬಿಡುಗಡೆ ಮಾಡಿದೆ.
2021ರ ಸಾಲಿನ ರಸ್ತೆ ಅಪಘಾತದ ಅಂಕಿ ಅಂಶ ಬಿಡುಗಡೆಯಾಗಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಈ ದಾಖಲೆ ಬಿಡುಗಡೆ ಮಾಡಿದೆ. ಈ ದಾಖಲೆ ಪ್ರಕಾರ ಭಾರತದಲ್ಲಿ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆ ವರೆಗಿನ ಪ್ರಯಾಣದಲ್ಲಿ ಅತೀ ಹೆಚ್ಚು ಅಪಘಾತ ನಡೆದಿದೆ. ಅತೀ ಹೆಚ್ಚು ಸಾವು ನೋವು ಸಂಭವಿಸಿದೆ. ಇನ್ನು ಭಾರತದ ರಸ್ತೆಗಳಲ್ಲಿನ ಪ್ರಯಾಣದಲ್ಲಿ ಮಧ್ಯರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ಗಂಟೆ ವೆರಗಿನ ಪ್ರಯಾಣ ಸೇಫ್ ಎಂದು ಅಂಕಿ ಅಂಶಗಳು ಹೇಳುತ್ತಿದೆ.
ಚಾಲಕನ ನಿಯಂತ್ರಣ ತಪ್ಪಿ 19,400 ವಾಹನ ಅಪಘಾತ: ರಿಷಭ್ ಪಂತ್ ಅಪಘಾತದ ಸುದ್ದಿ ಬೆನ್ನಲ್ಲೇ ವರದಿ
2021ರಲ್ಲಿ ಒಟ್ಟು 4.12 ಲಕ್ಷ ರಸ್ತೆ ಅಪಘಾತಗಳು ಸಂಭವಿಸಿದೆ. ಇದರಲ್ಲಿ 1.58 ಲಕ್ಷ ರಸ್ತೆ ಅಪಘಾತಗಳು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆ ಒಳಗೆ ನಡೆದಿದೆ. ಅದರಲ್ಲೂ ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆ ವರೆಗೆ ಶೇಕಡ 21 ರಷ್ಚು ರಸ್ತೆ ಅಪಘಾತಗಳು ನಡೆದಿದೆ. ಇನ್ನು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 6 ಗಂಟೆ ಒಳಗೆ ಶೇಕಾಡ 18 ರಷ್ಟು ಅಪಘಾತಗಳು ಸಂಭವಿಸಿದೆ.
3 ರಿಂದ ರಾತ್ರಿ 9 ಗಂಟೆ ಒಳಗಡೆ ಅತೀ ಹೆಚ್ಚು ಅಪಘಾತ ಸಂಭವಿಸಿ ಭಾರತದ ರಾಜ್ಯಗಳ ಪೈಕಿ ಕರ್ನಾಟಕ ಹಾಗೂ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ಈ ಎರಡು ರಾಜ್ಯಗಳಲ್ಲಿ ಒಟ್ಟು 82,879 ರಸ್ತೆ ಅಪಘಾತ ಪ್ರಕರಣಗಳು ಸಂಭವಿಸಿದೆ. 2017ರಿಂದ ಮಧ್ಯಾಹ್ನ 3 ರಿಂದ ರಾತ್ರಿ 9 ಗಂಟೆ ವರೆಗೆ ಸಂಭವಿಸುವ ಅಪಘಾತ ಪ್ರಮಾಣ ಹೆಚ್ಚಿದೆ. 2017ರಿಂದ ಇಲ್ಲೀವರೆಗೆ ಅಪಘಾತ ಪ್ರಮಾಣದ ಸರಾಸರಿ ಶೇಕಡಾ 35. ಇದರಲ್ಲಿ 2020ರಲ್ಲಿ ಅತೀ ಕಡಿಮೆ ಅಪಘಾತ ಪ್ರಕರಣಗಳು ದಾಖಲಾಗಿದೆ. ಇದಕ್ಕೆ ಪ್ರಮುಖ ಕಾರಣ ಲಾಕ್‌ಡೌನ್. 2021ರಲ್ಲಿ ನಡೆದ 4,996 ಅಪಘಾತ ಪ್ರಕರಣಗಳು ಯಾವ ಸಮಯದಲ್ಲಿ ನಡೆದಿದೆ ಅನ್ನೋದು ಇನ್ನೂ ಪತ್ತೆಯಾಗಿಲ್ಲ.
ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ : 1040 ಜನ ಬಲಿ
2021ರ ಜನವರಿ ತಿಂಗಳಲ್ಲಿ ಅತೀ ಹೆಚ್ಚು ರಸ್ತೆ ಅಪಘಾತ ಪ್ರಕರಣ ದಾಖಲಾಗಿದೆ. ಜನವರಿಯಲ್ಲಿ 40,305 ರಸ್ತೆ ಅಪಘಾತ ಸಂಭವಿಸಿದೆ. ಇನ್ನು ಮಾರ್ಚ್ ತಿಂಗಳಲ್ಲಿ 39,491 ಅಪಘಾತ ಪ್ರಕರಣ ದಾಖಲಾಗಿದೆ. ಈ ಎರಡು ತಿಂಗಳ ಪೈಕಿ ಅತೀ ಹೆಚ್ಚು ಸಾವು ಮಾರ್ಚ್ ತಿಂಗಳಲ್ಲಿ ಸಂಭವಿಸಿದೆ. ಮಾರ್ಚ್ ತಿಂಗಳಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 14,579 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಜನವರಿ ತಿಂಗಳಲ್ಲಿ 14,575 ಸಾವು ಸಂಭವಿಸಿದೆ.