Asianet Suvarna News Asianet Suvarna News

ಬರೋಬ್ಬರಿ ಮೊತ್ತಕ್ಕೆ ಹರಾಜಾದ ಗುರುವಾಯೂರು ಶ್ರೀಕೃಷ್ಣನ ಥಾರ್‌ ಗಾಡಿ

ಕೇರಳದ ತ್ರಿಶೂರ್‌ನಲ್ಲಿರುವ ಗುರುವಾಯೂರು ಶ್ರೀಕೃಷ್ಣ (Krishna temple)ದೇವಸ್ಥಾನಕ್ಕೆ ಮಹೀಂದ್ರಾ ಸಮೂಹವು ಉಡುಗೊರೆಯಾಗಿ ನೀಡಿದ ಥಾರ್ ಜೀಪ್‌ ಬರೋಬರಿ ಮೊತ್ತಕ್ಕೆ ಹರಾಜಾಗಿದೆ. 

Mahindra Thar Gifted to Keralas Guruvayur Krishna Temple Fetches Rs 43 Lakh in Re auction akb
Author
Bangalore, First Published Jun 7, 2022, 11:13 AM IST

ತ್ರಿಶೂರ್: ಕೇರಳದ ತ್ರಿಶೂರ್‌ನಲ್ಲಿರುವ ಗುರುವಾಯೂರು ಶ್ರೀಕೃಷ್ಣ (Krishna temple)ದೇವಸ್ಥಾನಕ್ಕೆ ಮಹೀಂದ್ರಾ ಸಮೂಹವು ಉಡುಗೊರೆಯಾಗಿ ನೀಡಿದ ಥಾರ್ ಜೀಪ್‌ ಬರೋಬರಿ ಮೊತ್ತಕ್ಕೆ ಹರಾಜಾಗಿದೆ. ಈ ಗಾಡಿಯ ಬಹಿರಂಗ ಮರು ಹರಾಜು ಸೋಮವಾರ (ಜೂನ್‌ 6) ನಡೆದಿತ್ತು. ಈ ಮರು ಸುಮಾರು 14 ಜನರು ಭಾಗವಹಿಸಿದ್ದರು ಮತ್ತು ಹಲವಾರು ಸುತ್ತಿನ ನಂತರ ಅಂತಿಮವಾಗಿ ಅದನ್ನು ದುಬೈ ಮೂಲದ ಉದ್ಯಮಿ ವಿಘ್ನೇಶ್ ವಿಜಯ್‌ಕುಮಾರ್ ಅವರು ತಮ್ಮ ತಂದೆ ವಿಜಯಕುಮಾರ್ ಪರವಾಗಿ 43 ಲಕ್ಷ ನೀಡಿ ಖರೀದಿಸಿದರು. 

ಥಾರ್‌ನ ಹೊಸ ಮಾಲೀಕರು ಅದನ್ನು ತಮ್ಮ ಸ್ವಾಧೀನಪಡಿಸಿಕೊಳ್ಳುವ ಮೊದಲು 12 ಪ್ರತಿಶತ ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ. ನವೆಂಬರ್ 2021 ರಲ್ಲಿ ಆನಂದ್ ಮಹೀಂದ್ರಾ (Anand mahindra) ಮಾಲೀಕತ್ವದ ಮಹೀಂದ್ರಾ ಗ್ರೂಪ್‌ (Mahindra Group ) ಈ ವಾಹನವನ್ನು ಪ್ರಸಿದ್ಧ ಗುರುವಾಯೂರು ದೇವಾಲಯಕ್ಕೆ ಉಡುಗೊರೆಯಾಗಿ ನೀಡಿದ್ದರು. ಡಿಸೆಂಬರ್‌ನಲ್ಲಿ ಇದನ್ನು ರೂ 1.5 ಮಿಲಿಯನ್ ಮೂಲ ಬೆಲೆಗೆ ಹರಾಜಿಗೆ ಇಡಲಾಗಿತ್ತು. ಆದರೆ ಆ ವೇಳೆ ಕೇವಲ ಒಬ್ಬರಷ್ಟೇ ಖರೀದಿಸಲು ಮುಂದೆ ಬಂದು ಅದರ ಬೆಲೆಯನ್ನು  10,000 ರೂಪಾಯಿಗೆ ಹೆಚ್ಚಿಸಿದರು.

ಬೇರೆ ಯಾವುದೇ ಖರೀದಿದಾರರಿಲ್ಲದ ಕಾರಣ, ಅವರು ಆ ವಾಹನವನ್ನು ಗೆದ್ದರು, ಆದರೆ ನಂತರ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ದೇವಸ್ಥಾನದ ಆಡಳಿತ ಮಂಡಳಿಯು ಹರಾಜನ್ನು ರದ್ದುಗೊಳಿಸಲು ನಿರ್ಧರಿಸಿತು. ಕಾನೂನು ಹೋರಾಟ ನಡೆಸುವೆ ಎಂದ ಏಕಾಂಗಿ ಖರೀದಿದಾರನ ತೀವ್ರ ಪ್ರತಿರೋಧದ ನಡುವೆಯೂ  ದೇಗುಲ ಮಂಡಳಿ ಈ ವಾಹನದ ಹರಾಜು ಪ್ರಕ್ರಿಯೆಯನ್ನು ತಡೆ ಹಿಡಿದಿತ್ತು. 

ಇದಾಗಿ ಈ ವರ್ಷ ನಿನ್ನೆ (ಜೂನ್‌ 6) ವಿಜಯ್‌ಕುಮಾರ್ (Vijaykumar) 43 ಲಕ್ಷ ನೀಡಿ ಈ ವಾಹನವನ್ನು ಹರಾಜಿನಲ್ಲಿ ಖರೀದಿಸಲು ಯಶಸ್ವಿಯಾದರು. ಹರಾಜಿನಲ್ಲಿ ವಿಜೇತರಾದ ಬಳಿಕ  ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯ್‌ಕುಮಾರ್, ದುಬೈನಲ್ಲಿರುವ ತಮ್ಮ ಮಗ ಗುರುವಾಯೂರಪ್ಪನವರ (Guruvayoorappan) ವಾಹನವಾಗಿರುವುದರಿಂದ ಅದನ್ನು ಖರೀದಿಸಬೇಕು ಎಂದು ತುಂಬಾ ನಿರ್ದಿಷ್ಟವಾಗಿ ಹೇಳಿದ್ದ ಎಂದು ಹೇಳಿದರು. ಎಷ್ಟೇ ಬೆಲೆ ಆದರೂ ಈ ಥಾರ್ ಗಾಡಿಯನ್ನು ಖರೀದಿಸುವಂತೆ ನನ್ನ ಮಗ ನನಗೆ ಸೂಚಿಸಿದರು ಎಂದು ವಿಜಯ್‌ಕುಮಾರ್ ಹೇಳಿದರು.

ಕಡಿಮೆ ಬೆಲೆಗೆ ಹರಾಜನ್ನು ವಿರೋಧಿಸಿ ಕೇರಳದ ಹಿಂದೂ ಸೇವಾ ಕೇಂದ್ರ ಎಂಬ ಸಂಸ್ಥೆ ಹೈಕೋರ್ಟ್‌ ಮೆಟ್ಟಿಲೇರಿತ್ತು. ಬಳಿಕ ದೇಗುಲದ ಕಮೀಷನರ್‌  ಹೈಕೋರ್ಟ್ ನಿರ್ದೇಶನದಂತೆ ಮರು ಹರಾಜಿಗೆ ನಿರ್ಧರಿಸಿತ್ತು

ತ್ರಿಸ್ಸೂರ್ ಜಿಲ್ಲೆಯಲ್ಲಿರುವ ಕಳೆ ತುಂಬಿದ ಪಟ್ಟಣ ಗುರುವಾಯೂರ್. ಗುರುವಾಯೂರು  ಭಗವಂತನಾದ ಶ್ರೀ ಕೃಷ್ಣ ಪರಮಾತ್ಮನ ಹಾಗೂ ಭಗವಾನ್ ಶ್ರೀ ಮಹಾ ವಿಷ್ಣುವಿನ ತವರು ಎಂದೇ ಗುರುತಿಸಲ್ಪಟ್ಟಿದೆ. ಕೇರಳದಲ್ಲಿ ಹಲವಾರು ಯಾತ್ರಾಸ್ಥಳಗಳಿದ್ದು ಅವುಗಳಲ್ಲಿ ಗುರುವಾಯೂರು ಕೂಡಾ ಅತ್ಯಂತ ಪ್ರಸಿದ್ಧವಾದ ಯಾತ್ರಾಸ್ಥಳ ಎನಿಸಿದೆ. ಇಲ್ಲಿ ಭಕ್ತಾದಿಗಳ ಮಹಾಪೂರವೇ ಹರಿದು ಬರುತ್ತದೆ. ಗುರುವಾಯೂರು ಎಂಬ ಹೆಸರು ಮೂರು ಶಬ್ದಗಳ ಸಂಯೋಜನೆ ಯಾಗಿದ್ದು  ಮೂರು ಅರ್ಥಗಳಿಂದ ಕೂಡಿದೆ. 'ಗುರು' ಎಂದರೆ ಗುರು ಬೃಹಸ್ಪತಿ, 'ವಾಯು' ಈ ಪದವು ಗಾಳಿ ದೇವತೆ ಎಂಬ ಅರ್ಥವನ್ನು ಹೊಂದಿದ್ದು ಇನ್ನು 'ಉರ್' ಎಂದರೆ ಮಲಯಾಳಂ ನಲ್ಲಿ ಭೂಮಿ, ವಸುಂಧರೆ ಎಂಬ ಅರ್ಥವನ್ನು ಕೊಡುತ್ತದೆ. ಈ ಸ್ಥಳವು ಪುರಾಣದ ಹೆಸರನ್ನು ಹೊಂದಿದೆ. ಪುರಾಣ ಕಾಲದ ಕಥೆಗಳಲ್ಲಿ ದೇವಾಲಯದ ಬಗ್ಗೆ ಉಲ್ಲೇಖಿಸಲಾಗಿದೆ. 

Follow Us:
Download App:
  • android
  • ios