Asianet Suvarna News Asianet Suvarna News

ನೆಮೊ ಆ್ಯಪ್ ಬಿಡುಗಡೆ ಮಾಡಿದ ಮಹೀಂದ್ರ ಎಲೆಕ್ಟ್ರಿಕ್ ಮೊಬಿಲಿಟಿ!

ಚಾಲಕರು ದೂರದಿಂದಲೇ ತಮ್ಮ ವಾಹನದ ಮೇಲೆ ನಿಗಾ ಇರಿಸಲು ಸಾಧ್ಯವಾಗುವ ಹಾಗೂ ನಿಯಂತ್ರಿಸಬಹುದಾದ ಆ್ಯಪ್‌ಗೆ ಮಹೀಂದ್ರ ಚಾಲನೆ ನೀಡಿದೆ.  ವಾಹನದ ಸೂಕ್ಷ್ಮ ಸ್ಥಿತಿಗತಿ ಕುರಿತು ತಕ್ಷಣಕ್ಕೆ ಮಾಹಿತಿ ಪಡೆಯಬಹುದಾದ ಈ ಆ್ಯಪ್ ಹೆಸರು ನೆಮೊ.

Mahindra Electric mobility launch Nemo App for for 3 wheelers Electric vehicle driver solution ckm
Author
First Published Jan 18, 2023, 7:19 PM IST

ನವದೆಹಲಿ(ಜ.18): ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್, ತನ್ನ ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಚಾಲಕರ ಬಳಕೆಗೆ ಹೊಸ ಆ್ಯಪ್ ಲಾಂಚ್ ಮಾಡಿದೆ. ನೆಮೊ(NEMO) ಹೆಸರಿನ ಈ ಆ್ಯಪ್ ಹಲವು ಸಮಸ್ಯೆಗಳಿಗೆ ಪರಿಹಾರವಾಗಲಿದೆ.  ಮಹೀಂದ್ರಾ ಮೂಲಸೌಕರ್ಯಗಳನ್ನು ಆಧರಿಸಿ  NEMO ಡ್ರೈವರ್ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಇದು ಎಲೆಕ್ಟ್ರಿಕ್ ವಾಹನವು ದೂರ ಕ್ರಮಿಸುವುದಕ್ಕೆ ಸಂಬಂಧಿಸಿದಂತೆ ಚಾಲಕರಲ್ಲಿ ಕಂಡು ಬರುವ ಆತಂಕದಂತಹ ಪ್ರಮುಖ ಸಮಸ್ಯೆಗಳನ್ನು ದೂರ ಮಾಡಲಿದೆ. ವಾಹನ  ಚಾರ್ಜಿಂಗ್ ಮಾಡುವುದನ್ನು ಸಮರ್ಪಕವಾಗಿ ನಿರ್ವಹಿಸಲು ಚಾಲಕರಿಗೆ ನೆರವಾಗಲಿದೆ. ಇದರಿಂದ ಚಾಲಕರ ಕಾರ್ಯನಿರ್ವಹಣೆಯ ದಕ್ಷತೆ ಹೆಚ್ಚಿಸಲಿದೆ. ಪರಸ್ಪರ ಸಂವಹನದ ಆ್ಯಪ್‌ ಇದಾಗಿದೆ.  ಚಾಲನೆ ಮತ್ತು ಚಾರ್ಜಿಂಗ್ ಮಾಹಿತಿ ಒಳಗೊಂಡಂತೆ ಮಹೀಂದ್ರಾ ಎಲೆಕ್ಟ್ರಿಕ್ 3-ಚಕ್ರ ವಾಹನಗಳ (ಟ್ರೆವೊ ಆಟೊ, ಟ್ರೆವೊ ಝೋರ್ ಮತ್ತು ಝೋರ್ ಗ್ರ್ಯಾಂಡ್)  ಪ್ರಮುಖ ಅಂಕಿಅಂಶಗಳ ಮಾಹಿತಿಯನ್ನು ತಕ್ಷಣಕ್ಕೆ ನೀಡುತ್ತದೆ. 

ಗ್ರಾಹಕರಿಂದ ವ್ಯಾಪಕ ಮಾಹಿತಿ ಪಡೆದ ನಂತರವೇ ಈ  ಚಾಲಕರ ಆ್ಯಪ್‌ NEMO  ಅಭಿವೃದ್ಧಿಪಡಿಸಿ ವಿನ್ಯಾಸಗೊಳಿಸಲಾಗಿದೆ. ವಿದ್ಯುತ್‌ಚಾಲಿತ ವಾಹನಗಳ ಬಳಕೆಯು ಹೆಚ್ಚು ಸಂಪರ್ಕಿತ, ಅನುಕೂಲಕರ ಮತ್ತು  ಅಡಚಣೆ-ಮುಕ್ತಗೊಳಿಸುವ ಉದ್ದೇಶ ಸಾಧನೆಗೆ ಕಂಪನಿಯು ಈ ಮೊಬೈಲ್‌ ಕಿರುತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಗ್ರಾಹಕರು ತಮ್ಮ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಪ್ಲೇಸ್ಟೋರ್ ಮೂಲಕ ಸುಲಭವಾಗಿ ಈ ಆ್ಯಪ್‌ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಆ್ಯಪಲ್‌ ಫೋನ್‌ಗಳಿಗಾಗಿ (iOS ) ಆ್ಯಪ್ ಪರಿಚಯಿಸಲಾಗುವುದು.

ಹೊಚ್ಚ ಹೊಸ ಮಹೀಂದ್ರ ಥಾರ್ 2WD ಬಿಡುಗಡೆ, ಅತ್ಯಾಕರ್ಷಕ ಬೆಲೆಯಲ್ಲಿ ಲಭ್ಯ!

ವಿದ್ಯುತ್‌ಚಾಲಿತ ತ್ರಿಚಕ್ರ ವಾಹನಗಳಿಗಾಗಿ ಅಭಿವೃದ್ಧಿಪಡಿಸಿರುವ ಮೊಬೈಲ್‌ ಆ್ಯಪ್‌ ಪರಿಚಯಿಸಿರುವುದರ ಬಗ್ಗೆ ಮಾಹಿತಿ ನೀಡಿರುವ  ಮಹೀಂದ್ರಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಸಿಇಒ ಸುಮನ್ ಮಿಶ್ರಾ ಅವರು, ‘ನಮ್ಮ ಚಾಲಕ ಸ್ನೇಹಿತರು ಪ್ರಯಾಣಿಕರಿಗೆ ಅನುಕೂಲಕರ ಸೇವೆ ಒದಗಿಸುವ ತಮ್ಮ ವಿದ್ಯುತ್‌ಚಾಲಿತ ಮಹೀಂದ್ರಾ 3–ಚಕ್ರ ವಾಹನಗಳನ್ನು (ಇವಿ) ತಮ್ಮ ಬೆರಳ ತುದಿಯಲ್ಲಿ ನಿಯಂತ್ರಿಸಲು ಅನುವು ಮಾಡಿಕೊಡುವ ಸೂಕ್ತ ಸೌಲಭ್ಯ ಪ್ರಸ್ತುತಪಡಿಸಲು ನಾನು ಉತ್ಸುಕನಾಗಿದ್ದೇನೆ. ಈ NEMO ಡ್ರೈವರ್ ಅಪ್ಲಿಕೇಷನ್, ನೈಜ-ಸಮಯದ ಮಾಹಿತಿಗಳೊಂದಿಗೆ ವಿದ್ಯುತ್‌ಚಾಲಿತ ವಾಹನ ಬಳಸುವವರ  ಚಾಲನಾ ಕೌಶಲ ಹೆಚ್ಚಿಸಲಿದೆ. ಪರಿಸರ ಸ್ನೇಹಿ ಮತ್ತು ಸುಸ್ಥಿರತೆಯ ಸಂದೇಶ ರವಾನಿಸುವುದರ ಜೊತೆಗೆ ನಿಖರ ಒಳನೋಟಗಳೊಂದಿಗೆ ಅವರ ಲಾಭದಾಯಕತೆಯನ್ನೂ  ಹೆಚ್ಚಿಸಲಿದೆ’ ಎಂದು ಹೇಳಿದ್ದಾರೆ.

11ಕ್ಕೂ ಹೆಚ್ಚು ಪ್ರಮುಖ ವೈಶಿಷ್ಟ್ಯಗಳೊಂದಿಗೆ, NEMO ಡ್ರೈವರ್ ಅಪ್ಲಿಕೇಷನ್, ಸುಧಾರಿತ ಸಂಚಾರ ಅನುಭವದ ಮೂಲಕ ವಿದ್ಯುತ್‌ಚಾಲಿತ ವಾಹನಗಳ ಬಳಕೆಯ ಆಧುನಿಕ ಯುಗಕ್ಕೆ ಅಗತ್ಯ ನೆರವು ನೀಡಲು ಸಿದ್ಧವಾಗಿದೆ. NEMO ಡ್ರೈವರ್ ಅಪ್ಲಿಕೇಷನ್ ಕ್ಲೌಡ್-ಆಧಾರಿತ ಸೌಲಭ್ಯವಾಗಿದೆ.  ನಗರಗಳಲ್ಲಿ ವಿದ್ಯುತ್‌ಚಾಲಿತ ವಾಹನಗಳ ಬಳಕೆ ಸುಧಾರಿಸಲು ಹೊಸ ತಲೆಮಾರಿನ ಸಂಪರ್ಕಿತ ಸೇವೆಗಳ ಹಂಚಿಕೊಳ್ಳುವಿಕೆ ಮತ್ತು ಅಭಿವೃದ್ಧಿಗೆ ನೆರವಾಗಲಿದೆ.

ಮಂಗಳ ಗ್ರಹದಲ್ಲಿ ಥಾರ್ ಲ್ಯಾಂಡಿಂಗ್ ಯಾವಾಗ? ನೆಟ್ಟಿಗನ ಪ್ರಶ್ನೆಗೆ ಆನಂದ್ ಮಹೀಂದ್ರ ಪ್ರಾಸ ಉತ್ತರ!

NEMO ಡ್ರೈವರ್ ಅಪ್ಲಿಕೇಷನ್ ಮುಖ್ಯಾಂಶಗಳು 
•    ತಕ್ಷಣ ಲಾಗಿನ್- ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಅಪ್ಲಿಕೇಷನ್‌ ಬಳಕೆ ಸುಲಭ
•    ಉಳಿತಾಯದ ಮೇಲೆ ನಿಗಾ ಇಡಿ- ನಿಮ್ಮ ವಿದ್ಯುತ್‌ಚಾಲಿತ ಮತ್ತು ಪಳೆಯುಳಿಕೆ-ಇಂಧನ ಬಳಸುವ 3-ಚಕ್ರ ವಾಹನಗಳಿಂದ ಅಪಾರ ಉಳಿತಾಯ ಸಾಧ್ಯವಾಗುವುದರ ಮೇಲೆ ನಿಗಾ ಇರಿಸಿ
•    ಕಳವು ತಪ್ಪಿಸುವ ಸಾಧನ- 3–ಚಕ್ರ ಕಳ್ಳತನವಾದ ಸಂದರ್ಭದಲ್ಲಿ ಆ್ಯಪ್‌ ನೆರವಿನಿಂದಲೇ ನಿಮ್ಮ ಇವಿ ವಾಹನವನ್ನು ಅನ್ನು ದೂರದಿಂದಲೇ ನಿಶ್ಚಲಗೊಳಿಸಿ
•    ಸುಲಭ ದಿಕ್ಸೂಚಿ- ವೇಗವಾಗಿ ಸಾಗಬಹುದಾದ ಮಾರ್ಗದ ಮಾಹಿತಿ ನೀಡುವುದರ ಮೂಲಕ  ಹೆಚ್ಚಿನ ಪ್ರಯಾಣಗಳನ್ನು ಕೈಗೊಳ್ಳಲು ನೆರವಾಗಲಿದೆ. ಇದರಿಂದ ಉಳಿತಾಯ ಹೆಚ್ಚಿಸಲಿದೆ
•    ವಾಹನದ ಸ್ಥಿತಿಗತಿಯ ಮಾಹಿತಿ ನವೀಕರಣ- ಚಾರ್ಜಿಂಗ್‌ ಹಂತ (SoC), ವಿದ್ಯುತ್‌ ಖಾಲಿಯಾಗುವ ದೂರ ಕ್ರಮಿಸುವ ಅಂತರ (DTE), ಚಾರ್ಜ್ ಮಾಡುವ ಸಮಯ (TTC) ಮುಂತಾದ ವಾಹನದ ಸ್ಥಿತಿಗತಿಯ ಸಂಪೂರ್ಣ ಮಾಹಿತಿ ಪಡೆಯಬಹುದು
•    ನನ್ನ ವಾಹನ ಪತ್ತೆಹಚ್ಚಿ–  ನಿಮ್ಮ ವಾಹನ ಇರುವ ಸ್ಥಳ ಪತ್ತೆಹಚ್ಚಿ, ಖಚಿತ ಪ್ರದೇಶದ ಮಾಹಿತಿ ಲಭ್ಯ
•    ಗಮನ ಸೆಳೆಯುವ ಎಚ್ಚರಿಕೆಗಳು- ವಾಹನದ ಆರೋಗ್ಯಕರ ಸ್ಥಿತಿಗತಿಗೆ ಸಂಬಂಧಿಸಿದ ಎಚ್ಚರಿಕೆಯ ಮಾಹಿತಿ ಪಡೆಯುವ ಮೂಲಕ ವಾಹನವು ಮಾರ್ಗಮಧ್ಯೆ ಸ್ಥಗಿತಗೊಳ್ಳುವ ಸಾಧ್ಯತೆ ತಗ್ಗಿಸಿ 
•     ರಸ್ತೆಬದಿಯ ಸಹಾಯ (RSA)-  ದಿನದ 24 ಗಂಟೆಗಳ ಕಾಲ (24X7) ರಸ್ತೆಬದಿಯ ಸಹಾಯ ಪಡೆಯಲು ನೆರವು.  ಚಿಂತೆ-ಮುಕ್ತರಾಗಿ ಚಾಲನೆ ಮಾಡಿ
•    ಸರ್ವೀಸ್‌ ಜ್ಞಾಪಿಸುವ ಎಚ್ಚರಿಕೆ- ನಿಮ್ಮ ವಾಹನವು ಉತ್ತಮ ಕಾರ್ಯಾಚರಣೆಯ ಸ್ಥಿತಿಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಮಯೋಚಿತ ಸರ್ವೀಸ್‌ ಜ್ಞಾಪನೆಗಳನ್ನು ಪಡೆಯಿರಿ
•    ಸರ್ವೀಸ್‌ ಬುಕಿಂಗ್- ಅಪ್ಲಿಕೇಷನ್ ಮೂಲಕ ವಾಹನ ಸರ್ವೀಸ್‌ನ ವೇಳಾಪಟ್ಟಿ ನಿಗದಿಪಡಿಸಿ
•    ಪ್ರಯಾಣಿಕರ ಕಾಳಜಿ- ತ್ವರಿತವಾಗಿ ಸಂದೇಹಗಳನ್ನು ಪರಿಹರಿಸಿಕೊಳ್ಳಲು  ಗ್ರಾಹಕ ಸೇವಾ ಕೇಂದ್ರಕ್ಕೆ ತ್ವರಿತ ಸಂಪರ್ಕ

Follow Us:
Download App:
  • android
  • ios