Asianet Suvarna News Asianet Suvarna News

Vehicle Inspection ಧಾರವಾಡದಲ್ಲಿ ವಾಹನ ತಪಾಸಣಾ ಮತ್ತು ಪ್ರಮಾಣೀಕರಣ ಕೇಂದ್ರ ಆರಂಭಿಸಿದ ಸಾರಿಗೆ ಇಲಾಖೆ

  • ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ಕ್ರಮ
  • ಧಾರವಾಡದಲ್ಲಿ ಸುಸಜ್ಜಿತ ತಪಾಸಣೆ ಕೇಂದ್ರ ಉದ್ಘಾಟನೆ
  • ಯೋಗ್ಯವಲ್ಲದ ಬಸ್ ಬದಲಿಸಿ ಎಲೆಕ್ಟ್ರಿಕ್ ಬಸ್ ಖರೀದಿ
Karnataka Transport department Vehicle inaugurates Inspection Certification Center in Dharwad ckm
Author
Bengaluru, First Published Jan 4, 2022, 5:52 PM IST

ಧಾರವಾಡ(ಜ.04):  ಕೇಂದ್ರ ಸರ್ಕಾರ ಮಾಲಿನ್ಯ ನಿಯಂತ್ರಣಕ್ಕೆ(Pollution Control) ಹಲವು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ವಾಹನ ತಪಾಸಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಇತ್ತ ಕರ್ನಾಟಕದಲ್ಲೂ ಸರ್ಕಾರ(Karnataka Government) ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತಿದೆ.  ಇದೀಗ ರಾಜ್ಯ ಸರ್ಕಾರ ವಾಹನ ತಪಾಸಣಾ ಮತ್ತು ಪ್ರಮಾಣೀಕರಣ ಘಟಕ ಆರಂಭಿಸಿದೆ. ಕರ್ನಾಟಕದ ಸಾರಿಗೆ ಇಲಾಖೆಯು ಹೊಸ ವರ್ಷವನ್ನು ರಾಯಪುರ ಕೈಗಾರಿಕಾ ಪ್ರದೇಶದಲ್ಲಿ ಧಾರವಾಡ(Dharwad) ಪಶ್ಚಿಮ RTOನಲ್ಲಿ ವಾಹನ ತಪಾಸಣಾ ಮತ್ತು ಪ್ರಮಾಣೀಕರಣ(Inspection & Certification Center) ಕೇಂದ್ರ ಉದ್ಘಾಟಿಸುವ ಮೂಲಕ ಚಾಲನೆ ನೀಡಿತು. ಕರ್ನಾಟಕ ರಾಜ್ಯ ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ ಶ್ರೀರಾಮುಲು, ಶಾಸಕ ಅರವಿಂದ್ ಬೆಲ್ಲದ್, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಂ.ಡಿ. ಶಿವಯೋಗಿ ಕಳಸದ ಈ ಐಅಂಡ್‌ಸಿ ಕೇಂದ್ರವನ್ನು ಉದ್ಘಾಟಿಸಿದರು. 

Vehicle Safety ಭಾರತದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಕಠಿಣ ನಿಯಮ, ಶೀಘ್ರದಲ್ಲಿ ಎಲ್ಲಾ ಕಾರುಗಳಿಗೆ 6 ಏರ್‌ಬ್ಯಾಗ್ ಕಡ್ಡಾಯ!

ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಪ್ರಸ್ತುತ ಇರುವ ಹಾಗೂ ಹೊಸ ವಾಹನಗಳನ್ನು ನಿಯಂತ್ರಿಸಲು ನಿರ್ಧರಿಸಿದೆ. ಈ ಕೇಂದ್ರವು ವಾಹನದ ಹೊರಗಿನ ತಪಾಸಣೆ ಮತ್ತು ಸಂಪೂರ್ಣ ರಸ್ತೆಗೆ ಇಳಿಯಬಹುದಾದ ಅರ್ಹತೆಯನ್ನು ಅಂತಿಮಗೊಳಿಸುವಲ್ಲಿ ಇರುವ ಅಂತರ ತುಂಬುತ್ತದೆ. ಈ ಸುಧಾರಿತ ಮತ್ತು ಸ್ವಯಂಚಾಲಿತ ಐ ಅಂಡ್ ಡಿ ಕೇಂದ್ರಗಳು ವಾಹನಗಳನ್ನು ರಸ್ತೆ ಹಾಗೂ ಸುರಕ್ಷತೆಯ ವಾಹನಗಳ ಕ್ರಮಗಳ ಅನ್ವಯ ತಪಾಸಣೆ ನಡೆಸುತ್ತವೆ. ಬಹಳ ಮುಖ್ಯವಾಗಿ ಸ್ಮಾರ್ಟ್-ಕಾರ್ಡ್ ಆಧರಿತ ನೋಂದಣಿ ಮತ್ತು ಪ್ರಮಾಣೀಕರಣವನ್ನು ರೋಸ್‌ಮರ್ಟಾ ಟೆಕ್ನಾಲಜಿ ನೀಡುತ್ತದೆ. ದೆಹಲಿ ಮೂಲದ ಈ ಕಂಪನಿಯು ಸಾಧನ ಮತ್ತು ಸಂಪನ್ಮೂಲಗಳನ್ನು ಪೂರೈಸುವ ಟೆಂಡರ್ ಪಡೆದಿದೆ. 

Karnataka Transport department Vehicle inaugurates Inspection Certification Center in Dharwad ckm

ಸಾರಿಗೆ ಇಲಾಖೆಯು ಹಳೆಯ ಬಸ್‌ಗಳನ್ನು ಬದಲಾಯಿಸಿ ಹೊಸ ಸಿಎನ್‌ಸಿ ಮತ್ತು ವಿದ್ಯುಚ್ಛಾಲಿತ ಬಸ್‌ಗಳನ್ನು ರಾಜ್ಯದಲ್ಲಿ ತರಲಿದೆ. ಕೇಂದ್ರ ಸರ್ಕಾರವು ಹಳೆಯ ಬಸ್‌ಗಳನ್ನು ಬದಲಾಯಿಸಿ ಸಿಎನ್‌ಜಿ ಮತ್ತು ವಿದ್ಯುಚ್ಛಾಲಿತ ಬಸ್‌ಗಳ ಮೂಲಕ ಬದಲಾಯಿಸಲು ಸೂಚಿಸಿದೆ. ಈಗಗಾಲೇ ರಾಜ್ಯ ಸರ್ಕಾರ ಎಲೆಕ್ಟ್ರಿಕ್ ಬಸ್(Electric Bus) ಖರೀದಿ ಸೇರಿದಂತೆ ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಕೆಲ ಒಪ್ಪಂದ ಹಾಗೂ ಯೋಜನೆಗಳನ್ನು ಜಾರಿಗೊಳಿಸಿದೆ.  ಇದರಿಂದ ಎಲೆಕ್ಟ್ರಿಕ್ ಬಸ್‌ಗಳು ರಸ್ತೆಯ ಮೇಲೆ ಸದ್ಯದಲ್ಲೇ ಸಂಚರಿಸಲು ಪ್ರಾರಂಭಿಸುತ್ತವೆ. ಆದರೆ ಸದ್ಯ ರಾಜ್ಯ ಸರ್ಕಾರದ ಸಾರಿಗೆ ಸಂಸ್ಥೆ ಬಳಕೆ ಮಾಡುತ್ತಿರುವ ಬಸ್‌ಗಳ ತಪಾಸಣೆ ಅತೀ ಅವಶ್ಯಕವಾಗಿದೆ. ಮಾಲಿನ್ಯ ರಹಿತ ಹಾಗೂ ಮಾಲಿನ್ಯ ಮುಕ್ತ ಕರ್ನಾಟಕಕ್ಕೆ ವಾಹನಗಳ ತಪಾಸಣೆ ಅತೀ ಅಗತ್ಯವಾಗಿದೆ. ಹೀಗಾಗಿ ಸರಿಯಾದ ಪ್ರಮಾಣದ ಮಾಲಿನ್ಯ ತಪಾಸಣೆಗಾಗಿ ರಾಜ್ಯ ಸರ್ಕಾರ ಸುಸಜ್ಜಿತ ತಪಾಸಣೆ ಕೇಂದ್ರ ನಿರ್ಮಿಸಿದೆ ಎಂದು  ಕರ್ನಾಟಕ ರಾಜ್ಯ ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ  ಬಿ.ಶ್ರೀರಾಮುಲು ಹೇಳಿದ್ದಾರೆ.

License expired ಬೆಂಗಳೂರಲ್ಲಿ ಅಗತ್ಯ ಲೈಸೆನ್ಸ್ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ ಒಲಾ, ಊಬರ್, ಸಾರಿಗೆ ಇಲಾಖೆ ವಾರ್ನಿಂಗ್!

ಅವರು ಎಲ್ಲ ಜಿಲ್ಲೆಗಳಲ್ಲೂ ಆಟೊಮೇಟೆಡ್ ಡ್ರೆೈವಿಂಗ್ ಟೆಸ್ಟ್  ಟ್ರ್ಯಾಕ್ ಪ್ರಾರಂಭಿಸುವುದಾಗಿ ಪ್ರಕಟಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾರಿಗೆ ಸಿಬ್ಬಂದಿಯ ವೇತನಕ್ಕೆ 2,500 ಕೋಟಿ ರೂ. ಹಣಕಾಸು ಪೂರೈಸಿದ್ದಾರೆ. ಸರ್ಕಾರವು ಮುಷ್ಕರದಲ್ಲಿ ಭಾಗವಹಿಸಿದ್ದು ಕೆಲಸದಿಂದ ತೆಗೆದ ಉದ್ಯೋಗಿಗಳನ್ನು ಮತ್ತೆ ಸೇವೆಗೆ ತೆಗೆದುಕೊಳ್ಳುತ್ತಿದೆ ಎಂದರು.  ಹೊಸದಾಗಿ ಪ್ರಾರಂಭಗೊಂಡ ವಾಹನ ತಪಾಸಣಾ ಮತ್ತು ಪ್ರಮಾಣೀಕರಣ ಕೇಂದ್ರವು ಹಾನಿಕಾರಕ ಹೊರಸೂಸುವಿಕೆಯನ್ನು ಕನಿಷ್ಠಗೊಳಿಸುತ್ತದೆ ಮತ್ತು ಪರಿಸರ ಸಂರಕ್ಷಿಸುತ್ತದೆ. ಅಂದರೆ ಗಾಳಿಯ ಗುಣಮಟ್ಟ, ದೃಢ ವಾಹನದ ಹೆಚ್ಚಿನ ಮರುಮಾರಾಟ ಮೌಲ್ಯ ಮತ್ತು ಇಂಧನ ಕ್ಷಮತೆ ಸುಧಾರಣೆ ಹಾಗೂ ಹಣದ ಉಳಿತಾಯವನ್ನು ಈ ಕೇಂದ್ರದಲ್ಲಿ ನಿಯಮಿತ ತಪಾಸಣೆಯಿಂದ ಪಡೆಯಬಹುದು.

Follow Us:
Download App:
  • android
  • ios