ಜಿಎಸ್‌ಟಿ ಏರಿಕೆಯಿಂದ ಹಾಲಿನ ಉತ್ಪನ್ನಗಳ ಬೆಲೆ ಹೆಚ್ಚಾಗಿದೆ. ಈಗಾಗಲೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೂ ದುಬಾರಿಯಾಗಿದೆ. ಇದರ ಬೆನ್ನಲ್ಲೇ ವಾಹನ ಮಾಲೀಕರಿಗೆ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಿದೆ. 

ಬೆಂಗಳೂರು(ಜು.19): ವಸ್ತುಗಳ ಮೇಲಿನ ಜಿಎಸ್‌ಟಿ ಏರಿಕೆ ಮಾಡಲಾಗಿದ್ದು ಹಾಲಿನ ಉತ್ಪನ್ನಗಳು ಸೇರಿದಂತೆ ಕೆಲ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ. ಈಗಾಗಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಎಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಈ ಹೊಡೆತದಿಂದ ಚೇತರಿಸಿಕೊಳ್ಳಲು ಪರದಾಡುತ್ತಿರುವ ಜನಸಾಮಾನ್ಯರಿಗೆ ಇದೀಗ ರಾಜ್ಯ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಈ ಬಾರಿ ವಾಹನ ಮಾಲೀಕರ ಜೇಬಿಗೆ ಕತ್ತರಿ ಹಾಕಿದ್ದಾರೆ. ರಾಜ್ಯ ಸಾರಿಗೆ ಇಲಾಖೆ ವಾಹನ ಮಾಲಿನ್ಯ ತಪಾಸಣೆ ದರ ಹೆಚ್ಚಿಸಿದೆ. ಇನ್ಮುಂದೆ ವಾಹನ ಎಮಿಶನ್ ಟೆಸ್ಟ್ ಬೆಲೆ ದುಬಾರಿಯಾಗಿದೆ. ದ್ವಿಚಕ್ರವಾಹನಗಳ ಎಮಿಶನ್ ಟೆಸ್ಟ್ ಹಾಲಿ ದರ 50 ರೂಪಾಯಿ ಆಗಿದ್ದರೆ, ಇನ್ಮುಂದೆ 65 ರೂಪಾಯಿಗೆ ಏರಿಕೆಯಾಗಲಿದೆ. ಪೆಟ್ರೋಲ್ ಕಾರಿನ ಹಾಲಿ ಎಮಿಶನ್ ಟೆಸ್ಟ್ ಬೆಲೆ 90 ರೂಪಾಯಿ. ಇನ್ಮುಂದೆ ಈ ಬೆಲೆ 115ರೂಪಾಯಿ ಆಗಲಿದೆ. ಸದ್ಯ ಡೀಸೆಲ್ ಕಾರಿನ ಎಮಿಶನ್ ಟೆಸ್ಟ್ ಬೆಲೆ 115 ರೂಪಾಯಿ. ಈ ಬೆಲೆ 160 ರೂಪಾಯಿಗೆ ಏರಿಕೆಯಾಗಲಿದೆ.

ಮೋಟಾರು ವಾಹನ ಕಾಯ್ದೆ ಹಾಗೂ ನಿಯಮಗಳು ಕಟ್ಟು ನಿಟ್ಟಾಗಿದೆ. ನಿಯಮ ಉಲ್ಲಂಘಿಸಿದರೆ ಭಾರಿ ದಂಡ ತೆರಬೇಕಾಗುತ್ತದೆ. ಭಾರತ ಸ್ಟೇಜ್‌ 3, 4 ಮತ್ತು 6 ಮಾಪನದ ವಾಹನಗಳು ಕ್ರಮವಾಗಿ ಪ್ರತಿ 6 ತಿಂಗಳಿಗೆ ಮತ್ತು ಒಂದು ವರ್ಷಕ್ಕೊಮ್ಮೆ ವಾಯು ಮಾಲಿನ್ಯ ತಪಾಸಣೆಗೆ ಒಳಪಡಿಸಬೇಕು. ಅಲ್ಲದೇ ಸರ್ವೊಚ್ಛ ನ್ಯಾಯಾಲಯದ ಆದೇಶದಂತೆ ವಾಹನಗಳ ದಾಖಲಾತಿಗಳಾದ ನೋಂದಣಿ ಪುಸ್ತಕ, ನೋಂದಣಿ ​ಸರಿಯಾಗಿ ಇಟ್ಟುಕೊಳ್ಳುವುದು, ಚಾಲ್ತಿ ವಿಮೆ ಮತ್ತು ಚಾಲನಾ ಅನುಜ್ಞಾ ಪತ್ರ ಪಡೆಯುವದರೊಂದಿಗೆ ವಾಹನಗಳು ರಸ್ತೆಯ ಮೇಲೆ ಸಂಚರಿಸಲು ನಿರ್ದೇಶನವಿರುತ್ತದೆ.

ಮೊಸರು, ಮಜ್ಜಿಗೆ ದರ ಕೊಂಚ ಇಳಿಸಿದ KMF, ಆದ್ರೂ ಜನರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ

ವಾಹನಗಳ ತಪಾಸಣೆಕ್ಕೆ ಒಳಗೊಂಡು ಚಾಲ್ತಿ ಇರದೇ ಇರುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಅಪ್ರಾಪ್ತ ವಯಸ್ಕರರ ಮೋಟಾರ ವಾಹನ ದಂಡಾರ್ಹ ಅಪರಾಧ ಜೊತೆಗೆ ಪೋಷಕರ, ನೋಂದಾಯಿತ ಮಾಲಿಕರ ವಿರುದ್ಧ ಕಲಂ 199-ಎ ಮೋಟಾರು ವಾಹನಗಳ ಕಾಯ್ದೆ 1988ರ ಅನುಸಾರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಸಲ್ಲಿಕೆ ಹಾಗೂ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು . 25 ಸಾವಿರ ದಂಡ ವಿಧಿ​ಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಎಮಿಶನ್ ಟೆಸ್ಟ್ ಬೆಲೆ ಏರಿಕೆ, ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ, ಅಗತ್ಯವಸ್ತುಗಳ ಬೆಲೆ ಏರಿಕೆ, ಗ್ಯಾಸ್ ಬೆಲೆ ಏರಿಕೆ ಸೇರಿದಂತೆ ದೇಶದಲ್ಲಿ ಸಾಲು ಸಾಲು ಬೆಲೆ ಏರಿಕೆಯಿಂದ ಜನಸಾಮಾನ್ಯ ಕಂಗಾಲಾಗಿದ್ದಾನೆ. ಕೇಂದ್ರ ಸರ್ಕಾರ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ವಿಧಿಸಿರುವುದಕ್ಕೆ ಸಾರ್ವಜನಿಕರು, ವ್ಯಾಪಾರಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ದಿನಬಳಕೆಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಬಡವರು ಜೀವನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಅಡುಗೆ ಅನಿಲ, ಡೀಸೆಲ್‌, ಪೆಟ್ರೋಲ್‌, ಅಡುಗೆ ಎಣ್ಣೆ, ತರಕಾರಿ, ಬೇಳೆ ಕಾಳು ಸೇರಿದಂತೆ ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದ್ದು, ಬಡವರು ಜೀವನ ನಡೆಸುವುದೇ ದುಸ್ತರವಾಗಿದೆ. ಇದೀಗ ಕೇಂದ್ರ ಸರ್ಕಾರ ಆಹಾರ ಪಾದಾರ್ಥಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸುತ್ತಿರುವುದರಿಂದ ಇನ್ನಷ್ಟುಸಂಕಷ್ಟಎದುರಿಸಬೇಕಾಗುತ್ತದೆ ಎಂದು ಜನತೆ ಆತಂಕ ವ್ಯಕ್ತಪಡಿಸಿದ್ದಾರೆ.

ಅಕ್ಕಿ, ಬೇಳೆ, ಹಾಲು, ಮೊಸರು ಸೇರಿ 14 ಅಗತ್ಯ ವಸ್ತುಗಳ ತೆರಿಗೆ ಹಿಂಪಡೆದ ಕೇಂದ್ರ, ಷರತ್ತು ಅನ್ವಯ!

ಆಹಾರ ಧಾನ್ಯಗಳು ಅಗತ್ಯ ವಸ್ತುಗಳಾಗಿದ್ದರಿಂದ ಮೊದಲಿನಿಂದಲೂ ಇವುಗಳಿಗೆ ತೆರಿಗೆ ವಿನಾಯಿತಿ ನಿಡಲಾಗುತ್ತಿತ್ತು. ಆದರೆ ಈಗ ಮಜ್ಜಿಗೆ, ಮೊಸರು, ಅಕ್ಕಿ, ಜೋಳ, ರಾಗಿ ಸೇರಿದಂತೆ ಧವಸ ಧಾನ್ಯಗಳ ಮೇಲೆ ಶೇ.5 ರಷ್ಟುಜಿಎಸ್‌ಟಿ ವಿಧಿಸಿರುವುದು ಜನವಿರೋಧಿ ನೀತಿಯಾಗಿದೆ. ಕೇಂದ್ರ ಸರ್ಕಾರ ತಕ್ಷಣ ಇವುಗಳ ಮೇಲಿನ ಜಿಎಸ್‌ಟಿ ರದ್ದುಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.