Asianet Suvarna News Asianet Suvarna News

JSW Incentive ಹೊಸ ವರ್ಷದ ಬಂಪರ್ ಬೋನಸ್, ಎಲೆಕ್ಟ್ರಿಕ್ ಕಾರು ಖರೀದಿಸುವ ಉದ್ಯೋಗಿಗಳಿಗೆ 3 ಲಕ್ಷ ರೂ ಇನ್ಸೆಂಟೀವ್!

  • ಹೊಸ ವರ್ಷಕ್ಕೆ ಬಂಪರ್ ಬೋನಸ್, ಉದ್ಯೋಗಿಗಳಿಗೆ 3 ಲಕ್ಷ ರೂ ಪ್ರೋತ್ಸಾಹಕ ಧನ
  • ದೇಶದ ಎಲ್ಲಾ JSW ಉದ್ಯೋಗಿಗಳಿಗೆ ಅನ್ವಯ, ಸಿಗಲಿದೆ 3 ಲಕ್ಷ ರೂ ಹಣ
  • ಜನವರಿ 2022ರಿಂದ ಕಂಪನಿ ಇನ್ಸಿಂಟೀವ್ ಆರಂಭ, 1 ವರ್ಷದ ವರೆಗೆ ಆಫರ್
JSW Group announces New Year incentive rs 3 lakh for employees to buy an Electric Vehicle ckm
Author
Bengaluru, First Published Dec 28, 2021, 3:51 PM IST
  • Facebook
  • Twitter
  • Whatsapp

ನವದೆಹಲಿ(ಡಿ.28): ಹೊಸ ವರ್ಷಕ್ಕೆ( New Year 2022) ಕೆಲ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಬೋನಸ್, ನಗದು ಹಣ, ಪ್ರೋತ್ಸಾಹಕ ಧನ ಸೇರಿದಂತೆ ಹಲವು ಉಡುಗೊರೆಗಳನ್ನು ಘೋಷಿಸುತ್ತಿದೆ. ಇದೀಗ JSW ಹೊಸ ಆಫರ್ ಘೋಷಿಸಿದೆ. ದೇಶದಲ್ಲಿರುವ ತನ್ನ ಎಲ್ಲಾ ಉದ್ಯೋಗಿಗಳಿಗೆ 3 ಲಕ್ಷ ರೂಪಾಯಿ ಪ್ರೋತ್ಸಾಹಕ ಧನ ಘೋಷಿಸಿದೆ. ಈ ಇನ್ಸೆಂಟೀವ್, ಯಾವ ಉದ್ಯೋಗಿ ಎಲೆಕ್ಟ್ರಿಕ್ ವಾಹನ(electric vehicle) ಖರೀದಿಗೆ ಬಯಸುತ್ತಾರೋ ಅವರು ಈ 3 ಲಕ್ಷ ರೂಪಾಯಿ ಪ್ರೋತ್ಸಾಹಕ ಧನ ಬಳಸಿಕೊಳ್ಳಬಹುದು. ಈ ಮೂಲಕ ದೇಶದಲ್ಲಿ ಅತೀ ದೊಡ್ಡ ಇನ್ಸೆಂಟೀವ್ ಘೋಷಿಸಿದ ಕಂಪನಿ ಎಂಬ ಹೆಗ್ಗಳಿಕೆಗೆ ಇದೀಗ JSW ಪಾತ್ರವಾಗಿದೆ.

ನೂತನ ಇನ್ಸೆಂಟೀವ್ ಜನವರಿ 1, 2022ರಿಂದ ಆರಂಭಗೊಳ್ಳಲಿದೆ. ಭಾರತದ ಕಾರ್ಪೋರೇಟ್ ಕಂಪನಿಗಳಲ್ಲಿ(Indian corporate house) ಈ ರೀತಿಯ ಘೋಷಣೆ ಮಾಡಿದ ಮೊದಲ ಕಂಪನಿ JSW. ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನ ಖರೀದಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರ ಬೆನ್ನಲ್ಲೇ JSW ಘೋಷಣೆ ಸರ್ಕಾರದ ಪ್ರಯತ್ನಕ್ಕೆ ಮತ್ತಷ್ಟು ವೇಗ ನೀಡುವ ಜೊತೆಗೆ ಪರಿಸರಕ್ಕೆ ಪೂರಕವಾದ ವಾಹನ ಖರೀದಿಗೆ ಉತ್ತೇಜನ ನೀಡಿದೆ.

Electric Cars ಹೊಸ ವರ್ಷಕ್ಕೆ ಟಾಟಾದಿಂದ ಗೂಡ್ ನ್ಯೂಸ್, 400+ ಮೈಲೇಜ್ ಟಾಟಾ ನೆಕ್ಸಾನ್ EV ಬಿಡುಗಡೆ ರೆಡಿ!

JSW ಗ್ರೂಪ್ ಈ ಆಫರ್ ಘೋಷಿಸಿದೆ. ಭಾರತದ ಎಲ್ಲಾ JSW ಉದ್ಯೋಗಗಳಿಗೆ ಇದು ಅನ್ವಯವಾಗಲಿದೆ. ಸೋಮವಾರ(ಡಿ.27) ಹೊರಡಿಸಿದ ಪ್ರಕಟಣೆಯಲ್ಲಿ JSW, ಇದು ಕಂಪನಿಯ ಹಸಿರು ಉಪಕ್ರಮ ಯೋಜನೆಯ JSW ಎಲೆಕ್ಟ್ರಿಕ್ ವಾಹನ ಪಾಲಿಸಿ( EV policy ) ಅಡಿಯಲ್ಲಿ ಈ ಯೋಜನೆ ಘೋಷಿಸಲಾಗಿದೆ.  ಜನವರಿ 1, 2022ರಿಂದ ಆರಂಭಗೊಳ್ಳಲಿರುವ ಈ ಯೋಜನೆ ಸಂಪೂರ್ಣ ಒಂದು ವರ್ಷ ಜಾರಿಯಲ್ಲಿರಲಿದೆ.

JSW ಎಲೆಕ್ಟ್ರಿಕ್ ವಾಹನ ಪಾಲಿಸಿ ಅಡಿಯಲ್ಲಿ ಎಲೆಕ್ಟ್ರಿಕ್ ಕಾರು ಅಥವಾ ಸ್ಕೂಟರ್, ಬೈಕ್ ಖರೀದಿಸುವ ಉದ್ಯೋಗಿಗಳಿಗೆ ಗರಿಷ್ಠ 3 ಲಕ್ಷ ರೂಪಾಯಿ ವರೆಗೆ ಇನ್ಸೆಂಟೀವ್ ನೀಡಲಾಗುತ್ತದೆ. ಉದ್ಯೋಗಿಗಳು ಖರೀದಿಸುವ ವಾಹನದ ಮೇಲೆ ಇನ್ಸೆಂಟೀವ್ ನಿರ್ಧರಿಸಲಾಗುತ್ತದೆ. ಆಫರ್ ಇಲ್ಲಿಗೆ ಮುಗಿದಿಲ್ಲ. JSW ಎಲ್ಲಾ ಕಚೇರಿಗಳಲ್ಲಿ ಹಾಗೂ ಘಟಕಗಳಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಶನ್ ಅಳವಡಿಸಲಾಗುತ್ತಿದೆ. ಉದ್ಯೋಗಿಗಳು ತಮ್ಮ ವಾಹನವನ್ನು ಉಚಿತವಾಗಿ ಚಾರ್ಜ್ ಮಾಡಿಕೊಳ್ಳಬಹುದು. ಆಫೀಸ್, ಘಟಕಗಳಲ್ಲಿನ ಕಾರು ಪಾರ್ಕಿಂಗ್ ಸ್ಥಳದಲ್ಲಿ ಚಾರ್ಜಿಂಗ್ ಸ್ಟೇಶನ್ ಅಳವಡಿಸಲಾಗುತ್ತದೆ. ಈ ಮೂಲಕ ಕೆಲಸಕ್ಕೆ ಹಾಜರಾಗುವ ಉದ್ಯೋಗಿಗಳು ಕಾರು ಪಾರ್ಕ್ ಮಾಡಿ ಉಚಿತವಾಗಿ ಚಾರ್ಜ್ ಮಾಡಿಕೊಳ್ಳಬಹುದು. 

Electric Vehicle Converter ಹಳೇ ವಾಹನ ಆತಂಕ ಬೇಡ, ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಲು ಇದೆ ಮಾನ್ಯತೆ ಪಡೆದ ಘಟಕ!

ತಮ್ಮ ಉದ್ಯೋಗಿಗಳನ್ನು ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜಿಸಲು ಹಾಗೂ ದೇಶವನ್ನು ಕಾರ್ಬನ್ ಮುಕ್ತವಾಗಿಸುವ ನಿಟ್ಟಿನಲ್ಲಿ ಕಂಪನಿ ಈ ಯೋಜನೆ ಘೋಷಿಸಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ. ಯೋಜನೆ ಕುರಿತು JSW ಚೇರ್ಮೆನ್ ಸಜ್ಜನ್ ಜಿಂದಾಲ್ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಗ್ಲಾಸ್ಕೋದಲ್ಲಿ ನಡೆದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(PM Narendra Modi), 2070ರ ವೇಳೆಗೆ ಭಾರತ ಶೂನ್ಯ ಕಾರ್ಬನ್ ದೇಶವಾಗಿ ಹೊರಹೊಮ್ಮಲಿದೆ ಎಂದು ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಸರ್ಕಾರದ ಜೊತೆಗೆ JSW ಕಂಪನಿ ಕೈಜೋಡಿಸುತ್ತಿದೆ. ಹೀಗಾಗಿ ಎಲ್ಲಾ ಉದ್ಯೋಗಿಗಳಿಗೆ 3 ಲಕ್ಷ ರೂಪಾಯಿ ಇನ್ಸೆಂಟೀವ್ ಬಳಸಿಕೊಳ್ಳುವ ಅಕಾಶವಿದೆ. ಉದ್ಯೋಗಿಗಳು ಯಾವುದೇ ಎಲೆಕ್ಟ್ರಿಕ್ ವಾಹನ ಖರೀದಿಸಿದರೆ ವಾಹನದ ಬೆಲೆ ಹಾಗೂ ಇತರ ಕೆಲ ಅಂಶಗಳ ಆಧಾರದಲ್ಲಿ ಇನ್ಸೆಂಟೀವ್ ನೀಡಲಾಗುತ್ತದೆ ಎಂದು ಸಜ್ಜನ್ ಜಿಂದಾಲ್ ಹೇಳಿದ್ದಾರೆ.

Electric 2 Wheeler Sales ಕೇಂದ್ರದ ಸಬ್ಸಿಡಿಯಿಂದ ಹೊಸ ದಾಖಲೆ ನಿರ್ಮಾಣ, ವಾರಕ್ಕೆ 5,000 ಟು ವ್ಹೀಲರ್ ಸೇಲ್!

JSW ದೇಶದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸುತ್ತಿದೆ. ಇದರ ಕಂಪನಿಗಳು, ಕಾರ್ಪೋರೇಟ್ ಕಂಪನಿಳಿಗೆ ಇದು ಮಾದರಿಯಾಗಿದೆ. ದೇಶದಲ್ಲಿ ಮಾಲಿನ್ಯ ತಗ್ಗಿಸಲು ಈ ರೀತಿಯಲ್ಲೂ ಕೊಡುಗೆ ಸಲ್ಲಿಸಲು ಸಾಧ್ಯವಿದೆ. ಎಲೆಕ್ಟ್ರಿಕ್ ಇನ್ಸೆಂಟೀವ್‌ನಿಂದ ಹಲವರು ತಮ್ಮ ಸಾರಿಗೆಯನ್ನು ಎಲೆಕ್ಟ್ರಿಕ್ ಕಾರಾಗಿ ಪರಿವರ್ತಿಸಲು ಇಚ್ಚಿಸಿದ್ದಾರೆ. ಹೊಸ ವಾಹನ ಖರೀದಿಗೆ ಮುಂದಾಗಿದ್ದ ಹಲವರು ಇದೀಗ ಕಂಪನಿ 3 ಲಕ್ಷ ರೂ ಇನ್ಸೆಂಟೀವ್ ಬಳಸಿಕೊಂಡು ಎಲೆಕ್ಟ್ರಿಕ್ ಕಾರು ಖರೀದಿಗೆ ಮುಂದಾಗಿದ್ದಾರೆ. ಇದರಿಂದ ದೇಶದ ಜೊತೆಗೆ ಉದ್ಯೋಗಿಗಳ ಜೀವನ ಶೈಲಿ ಕೂಡ ಮೇಲ್ದರ್ಜೆಗೆ ಏರಲಿದೆ ಎಂದು JSW ಅಧ್ಯಕ್ಷ ಪಟ್ಟನಾಯಕ್ ಹೇಳಿದ್ದಾರೆ.

Follow Us:
Download App:
  • android
  • ios