Asianet Suvarna News Asianet Suvarna News

ಕೋವಿಡ್‌ನಿಂದ ನಲುಗಿದ 150 ಕುಟುಂಬ ದತ್ತು ಪಡೆದ ಹೀರೋ ಮೋಟೋಕಾರ್ಪ್!

ಕೋವಿಡ್‌ಗೆ ತುತ್ತಾದ ಕುಟುಂಬಗಳ ಮಹಿಳೆಯರು ತಮ್ಮ ಜೀವನ ನಡೆಸಲು ಆಹಾರ ಭದ್ರತೆ ಮತ್ತು ಪೌಷ್ಠಿಕತೆಯಂತಹ ಅವಶ್ಯ ಸೇವೆಗಳನ್ನು ಒದಗಿಸುವುದರ ಜೊತೆಗೆ ಅವರ ಮಕ್ಕಳ ಶಿಕ್ಷಣಕ್ಕೂ ಹೀರೋ ಮೋಟೋಕಾರ್ಪ್ ನೆರವಾಗಲಿದೆ.

Hero Motocorp adopts 150 covid affected families in Bengaluru Karnataka ckm
Author
Bengaluru, First Published Aug 7, 2022, 10:17 PM IST

ಬೆಂಗಳೂರು(ಆ.07): ಸಮಾಜವನ್ನು ಉತ್ತಮಪಡಿಸಬೇಕೆನ್ನುವ ತನ್ನ ಬದ್ಧತೆಯನ್ನು ಹೀರೊ ಮೋಟೋಕಾರ್ಪ್ ಮತ್ತೊಮ್ಮೆ ತೋರಿಸಿದೆ.   ಬೆಂಗಳೂರಿನ ಕೋವಿಡ್ ಪೀಡಿತ 150 ಕುಟುಂಬಗಳನ್ನು ದತ್ತು ಪಡೆಯುವ ಮೂಲಕ ಆ ಕುಟುಂಬಗಳ ಹೊಣೆಯನ್ನು ಹೀರೋ ಮೋಟೋಕಾರ್ಪ್ ಹೊತ್ತುಕೊಂಡಿದೆ. ಸಂಸ್ಥೆಯ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (ಸಿ ಎಸ್ ಆರ್) ವೇದಿಕೆಯಡಿ, “ಹೀರೊ ವಿ ಕೇರ್ ‘ಹೀರೊ ಫಾರ್ ಹ್ಯುಮಾನಿಟಿ’ ( ಮಾನವತೆಗಾಗಿ ಹೀರೊ) ಯೋಜನೆಯು ಕೋವಿಡ್-19 ಕಾರಣದಿಂದ ತಮ್ಮ ತಂದೆ-ತಾಯಿ-ಪೋಷಕರನ್ನು ಕಳೆದುಕೊಂಡ ಮಕ್ಕಳನ್ನು  ಮತ್ತು ತಮ್ಮ ಗಂಡನನ್ನು ಕಳೆದುಕೊಂಡ ಮಹಿಳೆಯರನ್ನು ಬೆಂಬಲಿಸುವ ಗುರಿ ಹೊಂದಿದೆ. ಆ ಕುಟುಂಬಗಳ ಮಹಿಳೆಯರು ತಮ್ಮ ಜೀವನ ನಡೆಸಲು ಆಹಾರ ಭದ್ರತೆ ಮತ್ತು ಪೌಷ್ಠಿಕತೆಯಂತಹ ಅವಶ್ಯ ಸೇವೆಗಳನ್ನು ಒದಗಿಸುವುದರ ಜೊತೆಗೆ ಅವರ ಮಕ್ಕಳ ಶಿಕ್ಷಣಕ್ಕೂ ಹೀರೋ ಮೋಟೋಕಾರ್ಪ್ ನೆರವಾಗಲಿದೆ.

ಒಡಿಷಾದ ವಾಣಿಜ್ಯ ಮತ್ತು ಕೈಗಾರಿಕೆಯಲ್ಲಿರುವ ಮಹಿಳಾ ಉದ್ಯಮಿಗಳ (ABWCI) ಸಂಘದ ಸಹಯೋಗದಲ್ಲಿ ಒಡಿಷಾ ರಾಜ್ಯದಲ್ಲಿ 150 ಕುಟುಂಬಗಳನ್ನು ದತ್ತು ಪಡೆದುಕೊಂಡ ಬೆನ್ನಲ್ಲೇ ‘ಹೀರೊ ಫಾರ್ ಹ್ಯುಮಾನಿಟಿ’ ಯೋಜನೆಯು ಈಗ ಕೊರೋನ ವೈರಾಣುವಿನಿಂದ ತೀವ್ರವಾಗಿ ಬಾಧಿಸಲ್ಪಟ್ಟ ಬೆಂಗಲೂರಿನ 150 ಕುಟುಂಬಗಳನ್ನು ಗುರುತಿಸಿ ಅವರಿಗೆ ವಿಶೇಷ ಕ್ಷೇಮಾಭಿವೃದ್ಧಿ ಪ್ಯಾಕೇಜ್ ಒದಗಿಸಲಿದೆ. ಈ ಯೋಜನೆಯ ಮೊದಲ ಹಂತದಲ್ಲಿ ಅಂತಹ 35 ಕುಟುಂಬಗಳಿಗೆ ಬೆಂಗಳೂರು ರಾಜಧಾನಿಯಲ್ಲಿ ಪರಿಹಾರ ಪ್ಯಾಕೇಜ್‍ಗಳನ್ನು ವಿತರಿಸಲಾಯಿತು.

ಕನ್ನಡಿಗ ಸಿಎಸ್ ಸಂತೋಷ್ ಆಟೋಗ್ರಾಫ್‌ ಇರುವ ಹೀರೋ XPULSE 200 4V ಬೈಕ್ ಬಿಡುಗಡೆ!

ಕೊರೋನ ವೈರಾಣು ಸಾಂಕ್ರಾಮಿಕ ಹಬ್ಬಿರುವ ಅವಧಿಯಲ್ಲಿ ಹೀರ್ಫ್ ಮೋಟೋಕಾರ್ಪ್, ಸಮುದಾಯಗಳನ್ನು ನಿರಂತರ ಬೆಂಬಲಿಸುತ್ತ ಬಂದಿದೆ ಹಾಗೂ ಅವರ ಕ್ಷೇಮಾಭಿವೃದ್ಧಿಗಾಗಿ ಕೆಲಸ ಮಾದುತ್ತ ಬಂದಿದೆ. ಇಂತಹ ಕಠಿಣ ಸನ್ನಿವೇಶದಲ್ಲಿ, ಕೈಗಾರಿಕಾ ಉದ್ಯಮಗಳು ಸರ್ಕಾರಗಳೊಂದಿಗೆ ಹಾಗೂ ಸಮಾಜದೊಂದಿಗೆ ಕೈಜೋಡಿಸಿ, ನಾವು ಕಾರ್ಯಾಚರಣೆ ಮಾದುವ ಮತ್ತು ಸೇವೆ ಒದಗಿಸುವ ಸಮುದಾಯಗಳನ್ನು ಬೆಂಬಲಿಸುವುದು ಅವಶ್ಯಕ. ಮಹಿಳೆಯರು ಉದ್ಯೋಗ ಗಳಿಸಲು ಮತ್ತು ದೀರ್ಘಾವಧಿಯಲ್ಲಿ ಸ್ವಾವಲಂಬಿಗಳಾಗಲು ನಾವು ಅವರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಕೈಗೊಳ್ಳುತ್ತಿದ್ದೇವೆ. ಈ ಉಪಕ್ರಮದ ಮೂಲಕ ಅವರು ತಮ್ಮ ಔದ್ಯಮಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಹಾಗೂ ಅಗತ್ಯ ತರಬೇತಿ ಹೊಂದಲು ಅಹಾಯ ಮಾಡುತ್ತದೆ ಮತ್ತು ಉತ್ತಮ ಜೀವನೋಪಾಯ ಮಾರ್ಗ ಕಂಡುಕೊಳ್ಳಲು ಸಾಧ್ಯವಾಗುವುದರ ಜೊತೆಗೆ ತನ್ಮೂಲಕ ಸಮುದಾಯಗಳ ಊರ್ಜಿತ ಬೆಳವಣಿಗೆಗೆ ಒಳ್ಳೆಯ ಕೊಡುಗೆ ನೀಡಿದಂತಾಗುತ್ತದೆ. ಕೋವಿಡ್-19 ಕಾರಣದಿಂದ ತಮ್ಮ ತಂದೆ-ತಾಯಿ-ಪೋಷಕರನ್ನು ಕಳೆದುಕೊಂಡ ಮಕ್ಕಳ ಶೈಕ್ಷಣಿಕ ಹಾಗೂ ಪೌಷ್ಠಿಕತೆ ಅವಶ್ಯಕತೆಗಳನ್ನು ಪೂರೈಸಲು ನಾವು ಅಂತಹ ಕುಟುಂಬಗಳಿಗೆ ಮಾಸಿಕ ಭತ್ಯೆ ಸಹ ಒದಗಿಸುತ್ತೇವೆ ಎಂದು ಹೀರೋ ಮೋಟೋಕಾರ್ಪ್‍ನ  ಸಾಂಸ್ಥಿಕ ಸಂವಹನ ವಿಭಾಗದ ಮುಖ್ಯಸ್ಥರಾದ  ಭರತೇಂದು ಕಬಿ ಹೇಳಿದ್ದಾರೆ.

ಕೈಗೆಟುಕುವ ದರದ ಹೀರೋ ಮೋಟೋಕಾರ್ಪ್ ಪ್ಯಾಶನ್ XTEC ಬೈಕ್ ಬಿಡುಗಡೆ!

ಇಂದಿನವರೆಗೆ ಹೀರೋಮೋಟೋಕಾರ್ಪ್, ಈ ಯೋಜನೆಯ ಮೂಲಕ ರಾಜಾಸ್ಥಾನ, ಉತ್ತರಾಖಾಂಡ, ಆಂಧ್ರ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ಒಡಿಷಾ ರಾಜ್ಯಗಳಲ್ಲಿ ವಿವಿಧ ಪಾಲುದಾರರ ಸಹಯೋಗದೊಂದಿಗೆ 520 ಕ್ಕೂ ಹೆಚ್ಚು ಕುಟುಂಬಗಳಿಗೆ ಬೆಂಬಲ ಒದಗಿಸಿದೆ.

Follow Us:
Download App:
  • android
  • ios