ವಯಸ್ಸು ಕೇವಲ ನಂಬರ್; 89ರ ಇಳಿವಯಸ್ಸಿನಲ್ಲಿ ಕಾರು ಕಲಿತ ಅಜ್ಜಿ!

ವಯಸ್ಸು ಕೇವಲ ನಂಬರ್ ಅನ್ನೋ ಮಾತನ್ನು ಹಲವು ಬಾರಿ ಕೇಳಿರುತ್ತೀರಿ. ಹಲವು ಬಾರಿ ಇದು ನಿಜವೇ ಎಂದು ತಮ್ಮನ್ನ ತಾವು ಪ್ರಶ್ನಿಸಿದ್ದೂ ಇದೆ. ಇದು ಹಲವು ಬಾರಿ ಸಾಬೀತಾಗಿದೆ. ಇದೀಗ 89ರ ವಯಸ್ಸಿನಲ್ಲಿ ಅಜ್ಜಿ ಕಾರು ಡ್ರೈವಿಂಗ್ ಕಲಿತು ನಗರದೊಳಗೆ ಸಲೀಸಾಗಿ ಹ್ಯುಂಡೈ ವೆನ್ಯಾ ಕಾರು ಡ್ರೈವಿಂಗ್ ಮಾಡಿದ್ದಾರೆ. ಅಜ್ಜಿಯ ಸ್ಪೂರ್ತಿದಾಯಕ ವಿವರ ಇಲ್ಲಿದೆ.
 

Grandma learns car driving at the age of 89 in Maharashtra ckm

ಮುಂಬೈ(ಫೆ.02): ವಯಸ್ಸಾಯಿತು, ಇನ್ನು ಸಾಧ್ಯವಿಲ್ಲ ಅನ್ನೋ ಮಾತೇ ಇಲ್ಲ. ಸಾಧಿಸುವ ಛಲವಿದ್ದರೆ, ಅದ್ಯಾವ ವಯಸ್ಸಿನಲ್ಲೂ ಸಾಧನೆ ಮಾಡಬಹುದು ಅನ್ನೋದನ್ನು ಹಲವರು ಸಾಬೀತು ಪಡಿಸಿದ್ದಾರೆ. ಇದೀಗ 89ರ ಇಳಿ ವಯಸ್ಸಿನ ಅಜ್ಜಿಯೊಬ್ಬರು ಕಾರು ಕಲಿತು, ನಗರದಲ್ಲಿ ಸಲೀಸಾಗಿ ಡ್ರೈವಿಂಗ್ ಮಾಡುತ್ತಿದ್ದಾರೆ. ಈ ರೋಚಕ ಸ್ಟೋರಿ ಹಲವರಿಗೆ ಸ್ಪೂರ್ತಿಯಾಗಿದೆ. 

ಐತಿಹಾಸಿಕ ನಿರ್ಧಾರ;ಡ್ರೈವಿಂಗ್ ಲೈಸೆನ್ಸ್ ಪಡೆಯಲು ಗುಣ-ನಡತೆ ಸರ್ಟಿಫಿಕೇಟ್ ಕಡ್ಡಾಯ!

ಮುಂಬೈನ ಥಾಣೆಯ 89ರ ವಯಸ್ಸಿನ ಅಜ್ಜಿ ಹ್ಯುಂಡೈ ವೆನ್ಯೂ ಕಾರಿನ ಮೂಲಕ ಕಾರು ಡ್ರೈವಿಂಗ್ ಕಲಿತಿದ್ದಾರೆ. ಮೊಮ್ಮಗನ ಸಹಾಯದಿಂದ ಕಾರು ಕಲಿತಿದ್ದಾರೆ. ಅದೆಷ್ಟೋ ಮಂದಿ ಇನ್ನೂ ಸಾಧ್ಯವಿಲ್ಲ ಎಂದು ಮನೆಯಲ್ಲೇ ಕುಳಿತವರಿಗೆ ಈ ಅಜ್ಜಿ ಸ್ಪೂರ್ತಿಯಾಗಿದ್ದಾರೆ. ಮೈದಾನದಲ್ಲಿ ಕಾರು ಡ್ರೈವಿಂಗ್ ಕಲಿತ ಅಜ್ಜಿ, ಇದೀಗ ನಗರದಲ್ಲೂ ಸಲೀಸಾಗಿ ಡ್ರೈವಿಂಗ್ ಮಾಡುತ್ತಿದ್ದಾರೆ.

ಇದೇ ಜೂನ್ ತಿಂಗಳಿಗೆ ಅಜ್ಜಿ 90ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಈ ವೇಳೆ ಮೊಮ್ಮಗ ಅಜ್ಜಿಗೆ ಸರ್ಪ್ರೈಸ್ ನೀಡಲು ಸಜ್ಜಾಗಿದ್ದಾರೆ. ಅಜ್ಜಿಗೆ ಡ್ರೈವಿಂಗ್ ಲೈಸೆನ್ಸ್ ನೀಡಲು ಮೊಮ್ಮಗ ತಯಾರಾಗಿದ್ದಾನೆ. ಇತ್ತ ಆರ್‌ಟಿಒ ಅಧಿಕಾರಿಯೂ ಈ ಕುರಿತ ಸ್ಪಷ್ಟನೆ ನೀಡಿದ್ದಾರೆ ಲೈಸೆನ್ಸ್ ಪಡೆಯಲು ಗರಿಷ್ಠ ವಯೋಮಿತಿ ಇಲ್ಲ. ಯಾರು ಮಾನಸಿಕವಾಗಿ, ದೈಹಿಕವಾಗಿ ಸದೃಡವಾಗಿದ್ದಾರೋ ಅವರು ಲೈಸೆನ್ಸ್ ಪಡೆಯಲು ಅರ್ಹರು ಎಂದಿದ್ದಾರೆ.

Latest Videos
Follow Us:
Download App:
  • android
  • ios