ಎಲೆಕ್ಟ್ರಿಕ್ ವಾಹನ ಬಳಸುವ ಕನ್ನಡಿಗರಿಗೆ ಗುಡ್ ನ್ಯೂಸ್, ಖರೀದಿಗೆ ಮುಂದಾದ ಜನ!

ಕರ್ನಾಟಕದ ಎಲೆಕ್ಟ್ರಿಕ್ ವಾಹನ ಬಳಕೆದಾರರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ. ಇನ್ಮೇಲೆ ಇವಿ ಖರೀದಿಸಿ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. 
 

Good news for electric vehicle owners bescom relaunch EV mitha app for locate charging station price ckm

ಬೆಂಗಳೂರು(ಸೆ.10) ಎಲೆಕ್ಟ್ರಿಕ್ ವಾಹನ ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ. ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಇದೀಗ ಮತ್ತಷ್ಟು ಸುಲಭವಾಗಿದೆ. ಬೆಸ್ಕಾಂ ಸಹಯೋಗದಲ್ಲಿನ ಇವಿ ಚಾರ್ಜಿಂಗ್ ಆ್ಯಪ್ ಮಿತ್ರ ಇದೀಗ ಕನ್ನಡದಲ್ಲಿ ಮಾಹಿತಿ ನೀಡಲಿದೆ. ಕನ್ನಡ ಮಾತ್ರವಲ್ಲ, ಇತರ ಪ್ರಾದೇಶಿಕ ಭಾಷೆಗಳಲ್ಲೂ ಮಿತ್ರ ಆ್ಯಪ್ ಲಭ್ಯವಿದೆ. ಇವಿ ಸ್ಟೇಶನ್, ಚಾರ್ಜಿಂಗ್ ಸೇರಿದಂತೆ ಇತರ ಮಾಹಿತಿಗಳು ಇದರ ಲಭ್ಯವಾಗಲಿದೆ.

ಹಳೆ ಇವಿ ಮಿತ್ರ ಆ್ಯಪ್ ಬಳಕೆ ಮಾಡತ್ತಿದ್ದ ಬಳಕೆದಾರರು ಇದೀಗ ಹೊಸ ಆ್ಯಪ್ ಡೌನ್‌ಲೋನ್ ಮಾಡಲು ಬೆಸ್ಕಾಂ ಮನವಿ ಮಾಡಿದೆ. ಇದರಿಂದ ಹೆಚ್ಚಿನ ತಲೆನೋವು ಇಲ್ಲ. ಹಳೆ ವ್ಯಾಲೆಟ್‌ನಲ್ಲಿನ ಬ್ಯಾಲೆನ್ಸ್ ಇದೆ ಎಂದು ಚಿಂತೆ ಮಾಡಬೇಕಿಲ್ಲ. ಹೊಸ ಆ್ಯಪ್ ಡೌನ್‌ಲೋಡ್ ಮಾಡಿದೆ ಹಳೇ ರಿಜಿಸ್ಟ್ರೇಶನ್ ಎಲ್ಲಾ ಮಾಹಿತಿ, ಹಣ ಹೊಸ ಆ್ಯಪ್‌ಗೆ ವರ್ಗಾವಣೆ ಆಗಲಿದೆ. ಜೊತೆಗೆ ಇವಿ ಚಾರ್ಜಿಂಗ್ ಸ್ಟೇಷನ್ ಸೇರಿದಂತೆ ಹಲವು ಮಾಹಿತಿ‌ ಸಿಗಲಿದೆ. https://onelink.to/evmithra ಮೂಲಕ ಇವಿ ಮಿತ್ರ ಹೊಸ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಲು ಬೆಸ್ಕಾಂ ಮನವಿ ಮಾಡಿದೆ. ಚಾರ್ಜಿಂಗ್ ಸಮಸ್ಯೆಗಳಿಗೆ ಇದೀಗ ಬೆಸ್ಕಾಂ ಪರಿಹಾರ ನೀಡಿದೆ. ಇದು ಇವಿ ಜನರನ್ನು ಇವಿ ಖರೀದಿಸುವಂತೆ ಉತ್ತೇಜಿಸಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಂದೇ ಚಾರ್ಜ್‌ನಲ್ಲಿ 948 ಕಿ.ಮೀ ಪ್ರಯಾಣ, ಗಿನ್ನೆಸ್ ದಾಖಲೆ ಬರೆದ ಆಟೋ ಕಾರ್ ಇಂಡಿಯಾ!

2022ರ ಜೂನ್ ತಿಂಗಳಲ್ಲಿ ಇವಿ ಮಿತ್ರ ಆ್ಯಪ್ ಬಿಡುಗಡೆ ಮಾಡಲಾಗಿತ್ತು. ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೆಸ್ಕಾಂ ಸಹಭಾಗಿತ್ವದ ಆ್ಯಪ್ ಲಾಂಚ್ ಮಾಡಲಾಗಿತ್ತು.  ಬೆಸ್ಕಾಂ ಇವಿ ಚಾರ್ಜಿಂಗ್‌ ಸ್ಟೇಷನ್‌ಗಳ ಕುರಿತು ಸಮಗ್ರ ಮಾಹಿತಿ ನೀಡುವ ಇವಿ ಮಿತ್ರ ಆ್ಯಪ್‌‌ಗೆ ಇವಿ ಎಕ್ಸ್‌ಪೋದಲ್ಲಿ ಚಾಲನೆ ನೀಡಲಾಗಿತ್ತು.  

ಸಾರ್ವಜನಿಕರು ಇವಿ ಮಿತ್ರ ಆಪ್‌ ಡೌನ್‌ಲೋಡ್‌ ಮಾಡಿಕೊಂಡರೆ ಇವಿ ಚಾರ್ಜಿಂಗ್‌ ಸ್ಟೇಷನ್‌ ಗಳ ಕುರಿತು ಸಂರ್ಪೂಣ ಮಾಹಿತಿ ಆ್ಯಪ್‌ನಲ್ಲಿ ಲಭ್ಯವಾಗಲಿದೆ. ಇವಿ ಚಾರ್ಜಿಂಗ್‌ ಸ್ಟೇಷನ್‌ಗಳು ಇರುವ ಸ್ಥಳ, ದರ ಪಟ್ಟಿ, ಚಾರ್ಜಿಂಗ್‌ ಸೌಲಭ್ಯದ ಲಭ್ಯತೆ ಮುಂತಾದ ಮಾಹಿತಿಗಳನ್ನು ಇವಿ ಮಿತ್ರ ಆ್ಯಪ್‌ನಲ್ಲಿ ಪಡೆಯಬಹುದಾಗಿದೆ. ಆ್ಯಪ್‌ ಮೂಲಕ ನಿಮ್ಮ ವಾಹನವನ್ನು ಮುಂಚಿತವಾಗಿ ಚಾರ್ಜಿಂಗ್‌ ಮಾಡಿಕೂಳ್ಳಲು ಬುಕ್ಕಿಂಗ್‌ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಚಾರ್ಜಿಂಗ್‌ ಸ್ಟೇಷನ್‌ಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ಬೆಸ್ಕಾಂ ಏಕ ಗವಾಕ್ಷಿ ಯೋಜನೆಯನ್ನು ಜಾರಿಗೆ ತಂದಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಇವಿ ಚಾರ್ಜಿಂಗ್‌ ಸ್ಟೇಷನ್‌ ತೆರೆಯಲು ಆಸಕ್ತಿ ಇರುವವರು ಬೆಸ್ಕಾಂ ಅಧಿಕೃತ ವೆಬ್‌ಸೈಟ್‌ನಲ್ಲಿ  ಸೌಲಭ್ಯದ ಮೂಲಕ ಆನ್‌ಲೈನ್‌ನಲ್ಲಿ ದಾಖಲೆ ಸಲ್ಲಿಸಬಹುದು. ಸೂಕ್ತ ದಾಖಲೆ ಸಲ್ಲಿಸಿದರೆ ತ್ವರಿತ ಅನುಮೋದನೆ ದೊರೆಯಲಿದೆ.

ವಾಹನ ಸವಾರರಿಗೆ ಗುಡ್‌ನ್ಯೂಸ್ ಕೊಟ್ಟ ಕೇಂದ್ರ ಸಚಿವ ಕುಮಾರಸ್ವಾಮಿ; ಗ್ರಾಹಕರು ನಿರಾಳ
 

Latest Videos
Follow Us:
Download App:
  • android
  • ios