Asianet Suvarna News Asianet Suvarna News

ಒಂದೇ ಚಾರ್ಜ್‌ನಲ್ಲಿ 948 ಕಿ.ಮೀ ಪ್ರಯಾಣ, ಗಿನ್ನೆಸ್ ದಾಖಲೆ ಬರೆದ ಆಟೋ ಕಾರ್ ಇಂಡಿಯಾ!

ಎಲೆಕ್ಟ್ರಿಕ್ ವಾಹನಗಳಲ್ಲಿ ಬಹುತೇಕರ ಅಳಲು ಮೈಲೇಜ್ ರೇಂಜ್. ಪ್ರಾಯೋಗಿಕವಾಗಿ ಅಷ್ಟು ಮೈಲೇಜ್ ಸಿಗಲ್ಲ, ಸಾಕಾಗಲ್ಲ ಅನ್ನೋ ಕೂಗು ಇದ್ದೇ ಇದೆ. ಆದರೆ ಈ ಎಲ್ಲಾ ಸಮಸ್ಯೆಗಳಿಗೆ ಉತ್ತರವಾಗಿ ಇದೀಗ ಅಟೋ ಕಾರ್ ಇಂಡಿಯಾ ಗಿನ್ನೆಸ್ ದಾಖಲೆ ಬರೆದಿದೆ. ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ 948 ಕಿ.ಮೀ ಪ್ರಯಾಣ ಮಾಡಿದೆ.

Auto car India Mercedes benz eqs 580 travels 948km range on single charge create Guinness record ckm
Author
First Published Sep 9, 2024, 6:33 PM IST | Last Updated Sep 9, 2024, 6:33 PM IST

ಬೆಂಗಳೂರು (ಸೆ.09)  ಆಟೋಕಾರ್ ಇಂಡಿಯಾ  ಹಾಗೂ ಮರ್ಸಿಡಿಸ್ ಬೆಂಝ್ ಇಂಡಿಯಾ ಜಂಟಿಯಾಗಿ ಇವಿ ಕಾರು ಸೆಕ್ಟರ್‌ನಲ್ಲಿ ಹೊಸ ದಾಖಲೆ ಬರೆದಿದೆ. ಮರ್ಸಿಡಿಸ್ eqs 580 ಕಾರು ಕೇವಲ ಒಂದೇ ಚಾರ್ಜ್‌ನಲ್ಲಿ ಬರೋಬ್ಬರಿ  949 ಕಿಲೋಮೀಟರ್ ದೂರ ಪ್ರಯಾಣಿಸುವ ಮೂಲಕ ದಾಖಲೆ ಬರೆದಿದೆ. ಈ ಮೂಲಕ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಫೋರ್ಡ್‌ ಮಸ್ಟಂಗ್‌ ಮ್ಯಾಚ್ ಇ ನಿರ್ಮಿಸಿದ್ದ 916.74  ಕಿ.ಮೀ ದಾಖಲೆಯನ್ನು ಮುರಿದಿದೆ. ಈ ಸಾಧನೆ ಇವಿ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲು ಎಂದೇ ಪರಿಗಣಿಸಲಾಗುತ್ತಿದೆ. 

ವಿಶೇಷ ಅಂದರೆ ಈ ದಾಖಲೆ ಬೆಂಗಳೂರಿನಿಂದ ಮುಂಬೈ ಮಾರ್ಗದಲ್ಲಿ ನಿರ್ಮಾಣವಾಗಿದೆ. ಬೆಂಗಳೂರಿನಿಂದ ನವೀ ಮುಂಬೈ ಮಾರ್ಗದಲ್ಲಿ ಭಾರಿ ಮಳೆ ಸೇರಿದಂತೆ ಹಲವು ಸವಾಲುಗಳು ಎದುರಾದರೂ  ಮರ್ಸಿಡಿಸ್ eqs 580 ಎಲ್ಲವನ್ನೂ ಮೆಟ್ಟಿ ಸಾಗಿತ್ತು. ನಿರಂತರವಾಗಿ ಸುರಿಯುತ್ತಿದ್ದ ಭಾರಿ ಮಾನ್ಸೂನ್ ಮಳೆಯಿಂದಾಗಿ ಮಾರ್ಗದುದ್ದಕ್ಕೂ ಅನೇಕ ಕಡೆ ರಸ್ತೆ ಬದಲಾವಣೆ ಅನಿವಾರ್ಯವಾಗಿದ್ದವು. ಅಲ್ಲಲ್ಲಿ ನಡೆಯತ್ತಿದ್ದ ರಸ್ತೆ ಕಾಮಗಾರಿಗಳು ಮತ್ತು ದುರಸ್ತಿ ಕೆಲಸಗಳಿಂದಾಗಿ ಹೆಚ್ಚಿನ ತಿರುವುಗಳ ಮೂಲಕ ಕಾರು ಸಂಚರಿಸಬೇಕಾಯಿತು.  ಡ್ರೈವ್‌ನ ಕೊನೇ ಹಂತದಲ್ಲಿ ಆಘಾತಕಾರಿ ಎಂಬಂತೆ ಕಾರಿನ ಟಯರ್ ಕೂಡ ಪಂಚರ್ ಆಗಿತ್ತು. ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿ ಪ್ರಯಾಣ ಮುಂದುವರಿಸಿ ನಿರೀಕ್ಷಿತ ಗುರಿ ಮುಟ್ಟಲಾಗಿದೆ. 

ಸಾಲು ಸಾಲು ಹಬ್ಬದ ಆಫರ್‌ಗಳೊಂದಿಗೆ ಬಿಡುಗಡೆಯಾಗುತ್ತಿದೆ ಪ್ರಮುಖ 4 ಕಾರು!

ಗಿನ್ನೆಸ್ ದಾಖಲೆಗೆ ಮೊದಲು ಕಾರಿನ ಆಯ್ಕೆ ನಿರ್ಣಾಯಕವಾಗಿತ್ತು. ಹೀಗಾಗಿ ಮರ್ಸಿಡಿಸ್ ಇಕ್ಯೂಎಸ್ ಸೂಕ್ತ ಆಯ್ಕೆಯಾಗಿತ್ತು. ಏಕೆಂದರೆ ಬೃಹತ್ 107.8 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿರುವ ಇಕ್ಯೂಎಸ್ 580,  ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಅಧಿಕೃತ ರೇಂಜ್ ನೀಡುವ ಕಾರಾಗಿದೆ.  ಇದು ಎಆರ್‌ಎಐ ಪ್ರಕಾರ 857 ಕಿ.ಮೀ.  ದಾಖಲೆಯ ರೇಂಜ್ ನೀಡುತ್ತದೆ. ಹೀಗಾಗಿ ಪ್ರಮಾಣೀಕೃತ ರೇಂಜ್‌ಗಿಂತಲೂ  ಶೇಕಡಾ 10ಕ್ಕಿಂತ ಹೆಚ್ಚುದಾಖಲೆಯ ಸಮಯದಲ್ಲಿ ಪಡೆಯಲಾಗಿದೆ. ಮರ್ಸಿಡಿಸ್ ಇಕ್ಯೂಎಸ್‌ ಕಾರಿನ ಡ್ರ್ಯಾಗ್ ಕೊಎಫಿಷಿಯೆಂಟ್‌ ಕೇವಲ 0.20 ಆಗಿದ್ದು, ಇದು ಭಾರತದ ಅತ್ಯಂತ ಹೆಚ್ಚು ಏರೋಡೈನಾಕ್ಸ್‌ ದಕ್ಷತೆ ಹೊಂದಿರುವ ಕಾರಾಗಿದೆ. ಹೀಗಾಗಿ ಒಟ್ಟು ರೇಂಜ್‌ ಹೆಚ್ಚಿಸಲು ಮತ್ತಷ್ಟು ಸಹಾಯ ಮಾಡಿತು .

ಪ್ರಯಾಣದ ರೇಂಜ್ ಹೆಚ್ಚಿಸುವ ಉದ್ದೇಶದಿಂದ ಹೆದ್ದಾರಿಯಲ್ಲಿ ಸರಾಸರಿ 50 ರಿಂದ60 ಕಿ.ಮೀ ವೇಗ ಕಾಯ್ದುಕೊಳ್ಳಲಾಯಿತು. ಅದೇ ರೀತಿ ಬ್ಯಾಟರಿ ಪ್ಯಾಕ್‌ ನೆರವಿನಿಂದ  ಕೊನೆಯ ಕಿಲೋಮೀಟರ್ ತನಕ ಪ್ರಯಾಣಿಸಲು ಕಾರಿನಲ್ಲಿರುವ ಎಲ್ಲಾ ಮೂರು ಹಂತದ ರೀಜೆನ್ ಅನ್ನು ಬಳಸಲಾಯಿತು. ಈ ಎಲ್ಲ ಯೋಜನೆಗಳು  ಗಿನ್ನೆಸ್ ವಿಶ್ವ ದಾಖಲೆಯ ಪ್ರಶಸ್ತಿ ಪಡೆಯಲು ನೆರವಾಯಿತು. 

ಆಟೋಕಾರ್ ಇಂಡಿಯಾಗೆ ಗಿನ್ನೆಸ್ ದಾಖಲೆ  ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಆಟೋಕಾರ್ ಇಂಡಿಯಾದ ಚಾಲಕರಾದ ರಾಹುಲ್ ಕಾಕರ್ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಈ ಹಿಂದೆಯೂ  ಹಲವು ವಾಹನಗಳಲ್ಲಿ ಕಡಿಮೆ ಸ್ಪೀಡ್‌ನಲ್ಲಿ ಸಾಗಿ ಅತಿ ಹೆಚ್ಚು ಮೈಲೇಜ್ ಪಡೆಯುವ ಪ್ರಯತ್ನ ಮಾಡಿದ್ದೇನೆ.  ಆದರೆ ಐಷಾರಾಮಿ ಇವಿಯಲ್ಲಿ ಹೈಪರ್‌ಮೈಲಿಂಗ್‌ ಮಾಡಿರುವುದು ಇದೇ ಮೊದಲು. ಇದು ನಾನು ಕೈಗೊಂಡ ಅತ್ಯಂತ ಸವಾಲಿನ ಪರೀಕ್ಷೆಯಾಗಿದೆ. ಏಕೆಂದರೆ ಈ ಹಿಂದೆ ನಾನು ಅಸ್ತಿತ್ವದಲ್ಲಿರುವ ದಾಖಲೆಯನ್ನು ಮುರಿಯಲು ಎಂದಿಗೂ ಚಾಲನೆ ಮಾಡಿರಲಿಲ್ಲ. ಭಾರಿ ಮಳೆಯ ನಡುವಿನ ಸಂಚಾರ ಇದಾಗಿತ್ತು. ಹಾಳಾದ ರಸ್ತೆಗಳು, ಸಂಚಾರ ದಟ್ಟಣೆ ಟೈರ್‌ಗಳು ಹೆಚ್ಚು ಹಾಳಾಗುವ ಸಾಧ್ಯತೆಗಳ ನಡುವೆ ಈ ಚಾಲನೆಯು ಹೆಚ್ಚು ಸವಾಲಿನಿಂದ ಕೂಡಿತ್ತು ಎಂದಿದ್ದಾರೆ. 

ಆಟೋಕಾರ್ ಇಂಡಿಯಾ ಗಿನ್ನೆಸ್‌ ದಾಖಲೆಯ ಸಾಧನೆಯನ್ನು ಹೆಮ್ಮೆಯಿಂದ ಆಚರಿಸಿಕೊಂಡಿದೆ.  ಇದೇ ವೇಳೆ  ತನ್ನ 25 ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಂಪಾದಕ ಹಾರ್ಮಾಜ್ಡ್ ಸೊರಾಬ್ಜಿ,  ಗಿನ್ನೆಸ್ ವಿಶ್ವ ದಾಖಲೆಯ ಹೆಗ್ಗಳಿಕೆಯೊಂದಿಗೆ ನಮ್ಮ 25ನೇ ವಾರ್ಷಿಕೋತ್ಸವವನ್ನು ಆಚರಿಸಲು ನಮಗೆ ಸಂತೋಷವಾಗುತ್ತಿದೆ. ಪ್ರತಿಕೂಲ ಪರಿಸ್ಥಿತಿಗಳಲ್ಲೂ ಒಂದು ಬಾರಿ ಚಾರ್ಜ್ ಮಾಡಿಕೊಂಡು 949.0 ಕಿ.ಮೀ ರೇಂಜ್ ಪಡೆದು ಸೃಷ್ಟಿಸಿದ ದಾಖಲೆಯು ನಾವು ಕೈಗೊಂಡ ಅತ್ಯಂತ ಸವಾಲಿನ ಚಾಲನೆಯಾಗಿದೆ ಎಂದಿದ್ದಾರೆ. 

ಉದ್ಯಮಿ ಬಳಿ ಇದೆ ಅತೀ ದುಬಾರಿ ಪ್ಯೂರ್ ವೈಟ್ ಗೋಲ್ಡ್ ಬೆಂಜ್ ಕಾರು, ಇದರ ಬೆಲೆ 20.91 ಕೋಟಿ!

ಬ್ಯಾಟರಿ ಚಾಲಿತ ವಾಹನಗಳನ್ನು ಆಯ್ಕೆಮಾಡಿಕೊಳ್ಳುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಲು ಮುಂದಾಗಿರುವ ಮತ್ತು  ಮರ್ಸಿಡಿಸ್ ಬೆಂಝ್ ಮೇಲಿನ ನಂಬಿಕೆಯಿಂದ ಬ್ಯಾಟರಿ ಚಾಲಿತ ವಾಹನದ ರೂಪದಲ್ಲಿ ಇಕ್ಯೂಎಸ್ ಹೊಂದಿರುವ ಗ್ರಾಹಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮರ್ಸಿಡಿಸ್ ಬೆಂಝ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ  ಸಂತೋಷ್ ಅಯ್ಯರ್ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios