ಮೇ.1 ರಿಂದ ಸ್ಯಾಟಲೈಟ್ ಆಧಾರಿತ ಟೋಲ್ ಪಾವತಿ ವ್ಯವಸ್ಥೆ ಜಾರಿಯಾಗುತ್ತಿದೆ. ಇದರ ನಡುವೆ ಗೊಂದಲ ಹೆಚ್ಚಾಗಿದೆ. ಹಾಗಾದರೆ ಸದ್ಯ ಇರುವ ಫಾಸ್ಟ್ಯಾಗ್ ಕಾರ್ಯನಿರ್ವಹಿಸುವುದಿಲ್ಲವೇ? ಫಾಸ್ಟ್ಯಾಗ್ ಟೋಲ್ ಬೂತ್ ಇರೋದಿಲ್ವಾ? ಈ ಎಲ್ಲಾ ಗೊಂದಗಳಿಗೆ ಕೇಂದ್ರ ಸರ್ಕಾರ ಉತ್ತರ ನೀಡಿದೆ.
ನವದೆಹಲಿ(ಏ.18) ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಇದೀಗ ಕೆಲ ಸ್ಪಷ್ಟನೆ ನೀಡಿದೆ. ಪ್ರಮುಖವಾಗಿ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಮೇ.1 ರಿಂದ ಭಾರತದಲ್ಲಿ ಸ್ಯಾಟಲೈಟ್ ಆಧಾರಿತ ಟೋಲ್ ಪಾವತಿ ವ್ಯವಸ್ಥೆ ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಗೊಂದಲ ಸೃಷ್ಟಿಯಾಗಿದೆ. ಜಿಎನ್ಎಸ್ಎಸ್ ಸ್ಯಾಟಲೈಟ್ ಆಧಾರಿತ ಟೋಲ್ ಸಿಸ್ಟಮ್ ಜಾರಿಯಾಗುವುದರಿಂದ ವಾಹನದಲ್ಲಿ ಈಗಾಗಲೇ ಸಕ್ರಿಯವಾಗಿರುವ ಫಾಸ್ಟ್ಯಾಗ್ ಕಾರ್ಯನಿರ್ವಹಿಸುವುದಿಲ್ಲವೇ ಅನ್ನೋ ಪ್ರಶ್ನೆ ಎದ್ದಿದೆ. ಈ ಕುರಿತು ಸೋಶಿಯಲ್ ಮೀಡಿಯಾಗಳಲ್ಲಿ ಕೆಲ ವರದಿಗಳು, ಮಾಹಿತಿಗಳು ಹರಿದಾಡುತ್ತಿದೆ. ಹೀಗಾಗಿ ಗೊಂದಲ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸ್ಪಷ್ಟನೆ ನೀಡಿದೆ.
ಮೇ.1 ರಿಂದ ಫಾಸ್ಟ್ಯಾಗ್ ಇರುತ್ತಾ?
ಮೇ.1ರಿಂದ ಸ್ಯಾಟಲೈಟ್ ಆಧಾರಿತ ಟೋಲ್ ಪಾವತಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಕೆಲ ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್ ವೇಗಳಲ್ಲಿ ಜಾರಿಗೆ ತರಲಾಗುತ್ತಿದೆ. ಹಾಗಂತ ಎಲ್ಲೂ ಕೂಡ ಫಾಸ್ಟ್ಯಾಗ್ ವ್ಯವಸ್ಥೆ ನಿಲ್ಲುವುದಿಲ್ಲ. ಫಾಸ್ಟ್ಯಾಗ್, ಟೋಲ್ ಬೂತ್ ವ್ಯವಸ್ಥೆ ಹಾಗೇ ಇರಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಮೇ.1 ರಿಂದ ಫಾಸ್ಟ್ಯಾಗ್ ವ್ಯವಸ್ಥೆ ಸ್ಥಗಿತಗೊಳ್ಳುತ್ತಿಲ್ಲ. ಸದ್ಯ ಇರುವ ವ್ಯವಸ್ಥೆ ಯಾವುೇ ಅಡೆ ತಡೆ ಇಲ್ಲದೆ ಗೊಂದಲವಿಲ್ಲದೆ ಮುಂದುವರಿಯಲಿದೆ ಎಂದಿದೆ.
ಮೇ.1 ರಿಂದ ಭಾರತದಲ್ಲಿ ಸ್ಯಾಟಲೈಟ್ ಆಧಾರಿತ ಟೋಲ್ ಸಂಗ್ರಹ, ಪ್ರತಿ ದಿನ 20 ಕಿ.ಮಿ ಉಚಿತ
ಫಾಸ್ಟ್ಯಾಗ್ ವ್ಯವಸ್ಥೆ ಜೊತೆಗೆ ಹೊಸ ಪದ್ಧತಿ ಜಾರಿ
ಸದ್ಯ ಇರುವ ಫಾಸ್ಟ್ಯಾಗ್ ಮೂಲಸೌಕರ್ಯಗಳನ್ನು ಬಳಸಿಕೊಂಡು ಹೊಸ ಸ್ಯಾಟಲೈಟ್ ಆಧಾರಿತ ವ್ಯವಸ್ಥೆ ಜಾರಿಗೆ ಬರುತ್ತಿದೆ. ಒಂದು ರೀತಿಯಲ್ಲಿ ಹೈಬ್ರಿಡ್ ಮಾಡೆಲ್. ಫಾಸ್ಟ್ಯಾಗ್ ಮೂಲಸೌಕರ್ಯಕ್ಕೆ ಇದೀಗ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕ್ನಗೀಶನ್ ಸಿಸ್ಟಮ್(ANPR) ಟೆಕ್ನಾಲಜಿಯನ್ನು ಅಳವಡಿಸಲಾಗುತ್ತಿದೆ. ಈ ಮೂಲಕ ಸ್ಯಾಟಲೈಟ್ ಆಧಾರಿತವಾಗಿ ಟೋಲ್ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಮೂಲಕ ಅಳವಡಿಸಿರುವ ಕ್ಯಾಮೆರಾಗಳು ವಾಹನ ರಿಜಿಸ್ಟ್ರೇಶನ್ ನಂಬರ್ ಸೆರೆ ಹಿಡಿದು ಮಾಹಿತಿ ನೀಡಲಿದೆ. ಇತ್ತ ಫಾಸ್ಟ್ಯಾಗ್ ಖಾತೆಯಿಂದಲೇ ಹಣ ಕಡಿತಗೊಳ್ಳಲಿದೆ.
ANPR ಕ್ಯಾಮೆರಾಗಳು ಕೇವಲ ವಾಹನ ಮಾಹಿತ ನೀಡಿ ಟೋಲ್ ದರ ಮಾತ್ರ ಕಡಿತಗೊಳಿಸುುದಿಲ್ಲ. ಇದರ ಜೊತೆಗೆ ವಾಹನದ ವೇಗ, ಯಾವುದೇ ನಿಯಮ ಉಲ್ಲಂಘನೆ ಇದ್ದರೂ ಪತ್ತೆ ಹಚ್ಚಲಿದೆ. ಈ ಮೂಲಕ ಪೊಲೀಸರು ವಾಹನ ಮಾಲೀಕರಿಗೆ ಚಲನ್ ನೋಟಿಸ್ ಕಳುಹಿಸಲಿದ್ದಾರೆ. ಇನ್ನು ಹೆದ್ದಾರಿ ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಅತೀ ವೇಗ ಸೇರಿದಂತೆ ಇತರ ನಿಯಮ ಉಲ್ಲಂಘನೆ ಮಾಡಿದವರಿಗೆ ದುಬಾರಿ ದಂಡ ವಿಧಿಸಲಾಗುತ್ತದೆ, ಪದೇ ಪದೇ ನಿಯಮ ಉಲ್ಲಂಘಿಸಿದರೆ ಲೈಸೆನ್ಸ್ ರದ್ದು, ಫಾಸ್ಟ್ಯಾಗ್ ರದ್ದು ಸೇರಿದಂತೆ ಇತರ ಶಿಕ್ಷೆಗಳು ಅನ್ವಯವಾಗಲಿದೆ.
2 ಪ್ರಮುಖ ಟೋಲ್ ವಿನಾಯಿತಿ ಬಗ್ಗೆ ಸಾರಿಗೆ ಇಲಾಖೆ ಪ್ರಸ್ತಾವಣೆ ಪರಿಗಣಿಸಿದ ನಿರ್ಮಲಾ ಸೀತಾರಾಮನ್!