ಒಂದು ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಗರಿಷ್ಠ 22 ಲಕ್ಷ ರೂಪಾಯಿ ದಂಡ, ಹೊಸ ನೀತಿ ಜಾರಿ!
ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಪ್ರಕರಣ, ದಂಡ ಸೇರಿದಂತೆ ಹಲವು ಶಿಕ್ಷೆಗಳಿವೆ. ಭಾರತದಲ್ಲಿ ಡ್ರಿಂಕ್ ಅಂಡ್ ಡ್ರೈವ್ ಗರಿಷ್ಠ ಅಂದರೆ 10 ಸಾವಿರ, 20 ಸಾವಿರ ರೂಪಾಯಿ ಫೈನ್ ಕಟ್ಟಬೇಕು. ಇದೀಗ ದುಬೈನಲ್ಲಿ ಹೊಸ ಟ್ರಾಫಿಕ್ ದಂಡದ ಪಟ್ಟಿ ಪ್ರಕಟ ಮಾಡಲಾಗಿದೆ. ದಂಡದ ಮೊತ್ತದಲ್ಲಿ ಹೊಸ ಕಾರು ಖರೀದಿಸಬಹುದು.
ದುಬೈ(ಜು.09) ಟ್ರಾಫಿಕ್ ನಿಯಮ ಪಾಲನೆ ಅತೀ ಅಗತ್ಯ. ಸಿಗ್ನಲ್ ಜಂಪ್, ರಾಂಗ್ ಸೈಡ್ ಡ್ರೈವ್, ಅತೀ ವೇಗ, ವ್ಹೀಲಿಂಗ್ ಸೇರಿದಂತೆ ಒಂದೊಂದು ನಿಯಮ ಉಲ್ಲಂಘನೆಗೂ ಒಂದೊಂದ ರೀತಿಯ ದಂಡ ವಿಧಿಸಲಾಗುತ್ತದೆ. ಈ ಮೂಲಕ ಟ್ರಾಫಿಕ್ ನಿಯಮ ಪಾಲನೆಗೆ ಹೆಚ್ಚಿನ ಒತ್ತು ನೀಡುವಂತೆ ನೋಡಿಕೊಳ್ಳಲಾಗುತ್ತದೆ. ಇಷ್ಟಾದರೂ ಟ್ರಾಫಿಕ್ ನಿಯಮ ಉಲ್ಲಂಘನೆಯಿಂದ ಅಪಘಾತದ ಪ್ರಮಾಣಗಳು ಹೆಚ್ಚಾಗುತ್ತಿದೆ. ಇದೀಗ ದುಬೈ ಪೊಲೀಸರು ಸುರಕ್ಷತೆಗಾಗಿ ದುಬಾರಿ ದಂಡ ಜಾರಿ ಮಾಡಿದ್ದಾರೆ. ಒಂದು ಟ್ರಾಫಿಕ್ ನಿಯಮ ಉಲ್ಲಂಘನೆಗೆ ಗರಿಷ್ಠ 22 ಲಕ್ಷ ರೂಪಾಯಿ ದಂಡ ಜಾರಿ ಮಾಡಲಾಗಿದೆ.ಕನಿಷ್ಠ ಅಂದರೆ 2.24 ಲಕ್ಷ ರೂಪಾಯಿ. ಇದೀಗ ದುಬೈನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ಕಟ್ಟುವುದಕ್ಕಿಂತ ಹೊಸ ವಾಹನ ಖರೀದಿಸುವುದೇ ಉತ್ತಮ ಅನ್ನೋ ಮಾತುಗಳು ಕೇಳಿಬಂದಿದೆ.
ರಸ್ತೆಯಲ್ಲಿ ನಡೆಯುವ ಅಪಘಾತಗಳನ್ನು ತಪ್ಪಿಸಲು, ನಿಮ್ಮ ಸುರಕ್ಷತೆ ಹಾಗೂ ಇತರ ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಟ್ರಾಫಿಕ್ ದಂಡ ಜಾರಿ ಮಾಡಲಾಗಿದೆ ಎಂದು ದುಬೈ ಪೊಲೀಸರು ಹೇಳಿದ್ದಾರೆ. ನಿಮ್ಮ ಹಾಗೂ ಇತರರ ಜೀವಗಳು ಅಮೂಲ್ಯವಾಗಿದೆ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹೀಗಾಗಿ ಜೀವ ಉಳಿಸಲು ದುಬಾರಿ ದಂಡ ಪದ್ಧತಿ ಜಾರಿಯಾಗುತ್ತಿದೆ ಎಂದು ದುಬೈ ಪೊಲೀಸರು ಹೇಳಿದ್ದಾರೆ.
ಅತ್ಯಂತ ದುಬಾರಿ ಕಾರು ಬಳಸೋ ಪೊಲೀಸರು ಯಾರು?
ಟ್ರಾಫಿಕ್ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಸಣ್ಣ ತಪ್ಪನ್ನು ಸಹಿಸಲು ಸಾಧ್ಯವಿಲ್ಲ ಎಂದು ದುಬೈ ಪೊಲೀಸರು ಹೇಳಿದ್ದಾರೆ. ದುಬೈ ಪೊಲೀಸರ ಹೊಸ ದಂಡ ಪದ್ಧತಿಯಲ್ಲಿ ಗರಿಷ್ಠ ದಂಡ 22 ಲಕ್ಷ ರೂಪಾಯಿ ಆದರೆ ಕನಿಷ್ಠ ದಂಡ 2.24 ಲಕ್ಷ ರೂಪಾಯಿ. ರಸ್ತೆಯಲ್ಲಿ ಪೊಲೀಸಲ ಅನುಮತಿ ಇಲ್ಲದೆ ರೇಸ್, ಸ್ಪರ್ಧೆ ರೂಪದಲ್ಲಿ ವಾಹನ ಚಲಾಯಿಸುವುದು ಮಾಡಿದರೆ ಬರೋಬ್ಬರಿ 22.49 ಲಕ್ಷ ರೂಪಾಯಿ ದಂಡ, ಇನ್ನು ಅತೀ ಕಡಿಮೆ ಎಂದರೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುವುದು, ವಾಹನ ನಿಲ್ಲಿಸಲು ಸೂಚಿಸಿದರೆ ನಿಲ್ಲಿಸದೆ ಹೋಗುವುದು, ಟಿಂಟೆಡ್ ಗ್ಲಾಸ್ ಬಳಕೆ ಸೇರಿದಂತೆ ಇತರ ಕೆಲ ನಿಯಮ ಉಲ್ಲಂಘನೆಗೆ 2.24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ರೆಡ್ ಸಿಗ್ನಲ್ ಜಂಪ್ ಮಾಡಿದರೆ 11.24 ಲಕ್ಷ ರೂಪಾಯಿ ದಂಡ ಹಾಕಲಾಗುತ್ತದೆ. ಹೀಗಾಗಿ ದುಬೈನಲ್ಲಿ ಕನಸಿನಲ್ಲೂ ನೀವು ರೆಡ್ ಸಿಗ್ನಲ್ ಜಂಪ್ ಮಾಡಲು ಜನ ಹಿಂದೇಟು ಹಾಕುತ್ತಾರೆ. ಭಾರತದಲ್ಲಿ ಅತೀ ಹೆಚ್ಚು ನಿಯಮ ಉಲ್ಲಂಘನೆ ಪೈಕಿ ಸಿಗ್ನಲ್ ಜಂಪ್ ಕೂಡ ಸೇರಿದೆ. ಇನ್ನು ನಕಲಿ ನಂಬರ್ ಪ್ಲೇಟ್ ಅಥವಾ ನಂಬರ್ ಸರಿಯಾಗಿ ಕಾಣಿಸದ, ಅಥವಾ ಅಳಿಸಿ ಹೋಗಿರುವ ನಂಬರ್ ಪ್ಲೇಟ್ ಬಳಸಿದರೆ 11 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ.
ವಾಹನ ಮಾಡಿಫಿಕೇಶ್ ಮಾಡಿದರೆ, ಆಕರ್ಷಕವಾಗಿ ಕಾಣಲು ಹೆಚ್ಚುವರಿಯಾಗಿ ಏನಾದರು ಬಳಸಿದರೆ, ಹೆಚ್ಚಿನ ಶಬ್ದಕ್ಕಾಗಿ ಬೇರೆ ಸೈಲೆನ್ಸ್ ಬಳಕೆ ಸೇರಿದಂತೆ ಇತರ ಕೆಲ ನಿಯಮ ಉಲ್ಲಂಘನೆಗೆ 2 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ.
ಬೆಂಟ್ಲಿ ಬೆಂಟೆಯಾಗ to ಬೆಂಝ್: ದುಬೈ ಪೊಲೀಸರ ದುಬಾರಿ 'ಕಾರು'ಬಾರು!
18 ವರ್ಷಕ್ಕಿಂತ ಕೆಳಗಿನವರಿಗೆ ವಾಹನ ಚಲಾಯಿಸಲು ನೀಡಿದರೆ ಪೋಷಕರಿಗೆ ಅಥವಾ ವಾಹನ ಮಾಲೀಕರಿಗೆ 11 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ಇನ್ನು ಪೊಲೀಸ್ ವಾಹನಕ್ಕೆ ಉದ್ದೇಶ ಪೂರ್ವಕವಾಗಿ ಡಿಕ್ಕಿ ಮಾಡಿದರೆ, ಪೊಲೀಸ್ ವಾಹನಕ್ಕೆ ಡ್ಯಾಮೇಜ್ ಮಾಡಿದರೆ 11 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ.