ಮೇರಿಲ್ಯಾಂಡ್(ಮೇ.16): ಕೊರೋನಾ ವೈರಸ್‌ನಿಂದ ದೂರ ವಿರಲು ಕಟ್ಟು ನಿಟ್ಟಾಗಿ ಮಾರ್ಗಸೂಚನೆ ಪಾಲನೆ ಅಗತ್ಯ. ಅದರಲ್ಲೂ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ, ಕೈಗಳನ್ನು ಶುಚಿಯಾಗಿ ತೊಳೆಯುವುದು ಅಥವಾ ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಮಾಡುವುದು ಉತ್ತಮ. ಆದರೆ ಈ ನಿಯಮ ಪಾಲನೆ ವೇಳೆ ಎಚ್ಚರವಹಿಸಬೇಕು. ಹೀಗೆ ಎಚ್ಚರ ಮರೆತ ಅಮೆರಿಕದ ಮೇರಿಲ್ಯಾಂಡ್ ನಿವಾಸಿ ಸುಟ್ಟ ಗಾಯಗಳಿಂದ ಆಸ್ಪತ್ರೆ ದಾಖಲಾದ ಘಟನೆ ವರದಿಯಾಗಿದೆ.

ATMಗೆ ಹೋಗಿ ಹಣ ತೆಗೆದ, ಸ್ಯಾನಿಟೈಸರ್ ಕದ್ದ; ವಿಡಿಯೋ ವೈರಲ್!.

ಕೆಲಸದ ನಿಮಿತ್ತ ತನ್ನ ಕಾರಿನಲ್ಲಿ ತೆರಳಿದ್ದಾನೆ. ದಾರಿ ಮಧ್ಯೆ ಧೂಮಪಾನ ಮಾಡಲ ಮನಸ್ಸಾಗಿದೆ. ಸಿಗರೇಟ್ ಹಚ್ಚಿ ಬಾಯಿಗಿಟ್ಟಿದ್ದಾನೆ. ಹೇಳಿ ಕೇಳಿ ಸಿಗರೇಟ್ ಹೊರಗಡೆಯಿಂದ ಖರೀದಿಸಿದ ವಸ್ತು. ಹೀಗಾಗಿ ಈತನಿಗೆ ಕೊರೋನಾ ಮಾರ್ಗಸೂಚಿ ನೆನಪಾಗಿದೆ. ತಕ್ಷಣವೇ ಕಾರಿನಲ್ಲಿ ಕಳೆದೊಂದು ವರ್ಷದಿಂದ ಬಳಕೆ ಮಾಡುತ್ತಿದ್ದ ಹ್ಯಾಂಡ್ ಸ್ಯಾನಿಟೈಸರ್ ತೆಗೆದು ಕೈಗೆ ಹಾಕಿಕೊಂಡಿದ್ದಾನೆ.

 

ಇಷ್ಟೇ ನೋಡಿ ಆಗಿದ್ದು, ಬಾಯಲ್ಲಿ ಸಿಗರೇಟು, ಇತ್ತ ಅಲ್ಕೋಹಾಲ್ ಮಿಶ್ರಿತ ಸ್ಯಾನಿಟೈಸರ್. ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಂಡಿದೆ. ನಡು ರಸ್ತೆಯಲ್ಲೇ ಕಾರು ಹೊತ್ತಿ ಉರಿದಿದೆ. ಕಾರು ನಿಲ್ಲಿಸಿ ಇಳಿಯುವಷ್ಟರಲ್ಲಿ ಬೆಂಕಿ ಕೆನ್ನಾಲಿಗೆ ಸುಟ್ಟ ಗಾಯಗಳಾಗಿವೆ. ಇತ್ತ ತಕ್ಷಣೇ ಅಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದೆ.

ಎಚ್ಚರ ..! ಸ್ಯಾನಿಟೈಸರ್ ಅತಿಯಾದ್ರೆ ಜೀವಕ್ಕೇ ಅಪಾಯ

ಬೆಂಕಿಯ ತೀವ್ರತೆಗೆ ಕಾರು ಬಹುತೇಕ ಸುಟ್ಟು ಕರಕಲಾಗಿದೆ. ಇನ್ನು ಸ್ಯಾನಿಟೈಸರ್ ಹಾಗೂ ಸಿಗರೇಟ್ ಜೊತೆಯಾಗಿ ಬಳಕೆ ಮಾಡುವುದು ಅತ್ಯಂತ ಅಪಾಯಕಾರಿ. ಹೀಗಾಗಿ ಕೊರೋನಾ ಮಾರ್ಗಸೂಚಿ ಪಾಲನೆ ಮಾಡುವುಗಾ ಎಚ್ಚರವೂ ಅಗತ್ಯ. ಏನು ಮಾಡಬಾರದು ಅನ್ನೋ  ಕುರಿತು ಎಚ್ಚರಿಕೆ ಇರಬೇಕು ಎಂದು ಮೇರಿಲ್ಯಾಂಡ್ ಪೊಲೀಸರು ಹೇಳಿದ್ದಾರೆ.