Asianet Suvarna News Asianet Suvarna News

8 ಅಲ್ಲ 68 ಶೇಪ್ ರೌಂಡ್ ಹೊಡೆದರೂ ಚೀನಾದಲ್ಲಿ ಡ್ರೈವಿಂಗ್ ಟೆಸ್ಟ್ ಪಾಸ್ ಆಗುವುದು ಕಷ್ಟ!

ಡ್ರೈವಿಂಗ್ ಟೆಸ್ಟ್ ಪರೀಕ್ಷೆ ಇತ್ತೀಚೆಗೆ ಭಾರತದಲ್ಲೂ ಕಠಿಣವಾಗಿದೆ. ಕೆಲ ಮಾನದಂಡಗಳನ್ನು ಪಾಸ್ ಆಗಲೇಬೇಕು. ಆದರೆ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಬಹುದು. ಇದೀಗ ಚೀನಾದ ಡ್ರೈವಿಂಗ್ ಟೆಸ್ಟ್ ವಿಡಿಯೋ ವೈರಲ್ ಆಗಿದೆ. ಈ ಟೆಸ್ಟ್ ಪಾಸಾಗುವುದು ಸುಲಭದ ಮಾತಲ್ಲ.

China driving test toughest task in the world video surfaced on social media internet users stunned ckm
Author
First Published Nov 6, 2022, 7:33 PM IST

ಬೀಜಿಂಗ್(ನ.06): ಭಾರತದಲ್ಲಿ ಡ್ರೈವಿಂಗ್ ಟೆಸ್ಟ್ ಪಾಸಾಗುವುದು ಕಬ್ಬಿಣದ ಕಡಲೇ ಏನೂ ಅಲ್ಲ. ಕಾರು ಸ್ಟೇರಿಂಗ್ ಮಾತ್ರ ಗೊತ್ತಿದ್ದವರೂ ಪಾಸ್ ಆಗಿದ್ದಾರೆ. ಕೆಲವರು ಕಾರು ಮುಟ್ಟದೇ ಟೆಸ್ಟ್ ಪಾಸಾದವರೂ ಇದ್ದಾರೆ.  ಆದರೆ ವಿದೇಶಗಳಲ್ಲಿ ಡ್ರೈವಿಂಗ್ ಟೆಸ್ಟ್ ಪಾಸಾಗುವುದು ಅತೀ ಕಷ್ಟದ ಕೆಲಸ. ಇದೀಗ ಚೀನಾದಲ್ಲಿ ಡ್ರೈವಿಂಗ್ ಟೆಸ್ಟ್ ವಿಡಿಯೋ ವೈರಸ್ ಆಗಿದೆ. ಈ ವಿಡಿಯೋ ನೋಡಿದರೆ, ಭಾರತದಲ್ಲಿ ಹಲವರು ಡ್ರೈವಿಂಗ್ ಟೆಸ್ಟ್ ಸಹವಾಸವೇ ಬೇಡ ಅಂತಾರೆ. ಭಾರತದ್ಲಿ 8 ಶೇಪ್ ಸರ್ಕಲ್‌ನಲ್ಲಿ ವಾಹನ ಡ್ರೈವ್ ಮಾಡಿ ಸಾಮರ್ಥ್ಯ ಸಾಬೀತು ಪಡಿಸಬೇಕು. ಆದರೆ ಚೀನಾದಲ್ಲಿ 8 ಮಾತ್ರವಲ್ಲ, 6, 7, 8,9 ಶೇಪ್‌ನಲ್ಲಿ ಡ್ರೈವಿಂಗ್ ಮಾಡಬೇಕು. ಸಣ್ಣ ತಪ್ಪಾದರೂ ಲೈಸೆನ್ಸ್ ಸಿಗುವುದಿಲ್ಲ. ಈ ವಿಡಿಯೋಗೆ ಹಲವು ದೇಶದ ಜನರು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ತಮ್ಮ ದೇಶಗಳಲ್ಲಿ ಯಾವ ರೀತಿ ಡ್ರೈವಿಂಗ್ ಟೆಸ್ಟ್ ಮಾಡಲಾಗುತ್ತದೆ ಅನ್ನೋದನ್ನು ಬಹಿರಂಗ ಪಡಿಸಿದ್ದಾರೆ.

ಚೀನಾದಲ್ಲಿನ ಡ್ರೈವಿಂಗ್ ಟೆಸ್ಟ್ ಸುಲಭದ ಮಾತಲ್ಲ. ಸಣ್ಣ ಕಡಿದಾದ ದಾರಿಯನ್ನು ಮಾಡಲಾಗಿದೆ. ಹಲವು ಅತಡೆಗಳನ್ನು ಎದುರಿಸಬೇಕು. ಎಲ್ಲಿಯೂ ಫೌಲ್ ಆಗಬಾರದು. ಅಕ್ಕಪಕ್ಕದ ಲೈನ್ ಟಚ್ ಆಗಬಾರದು. ಇಷ್ಟೇ ಅಲ್ಲ ರಿವರ್ಸ್ ಹೋಗಬೇಕು, ಕಡಿದಾದ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು. ಇಷ್ಟೆಲ್ಲ ಮಾಡಿ, ನಿಮ್ಮ ಡ್ರೈವಿಂಗ್ ತೃಪ್ತಿ ತಂದಿಲ್ಲ ಎಂದಾದರೆ ಡ್ರೈವಿಂಗ್ ಲೆಸೆನ್ಸ್ ಸಿಗುವುದಿಲ್ಲ. ಮತ್ತೆ ಡ್ರೈವಿಂಗ್ ಅಭ್ಯಾಸ ಮಾಡಿ ಮತ್ತೆ ಪರೀಕ್ಷೆ ಎದುರಿಸಬೇಕು.

 

 

ಜಿಗ್‌ಜ್ಯಾಗ್ ಟ್ರಾಕ್‌ನಿಂದ ಆರಂಭಗೊಳ್ಳುವ ಡ್ರೈವಿಂಗ್ ಟೆಸ್ಟ್, ಎಲ್ಲಾ ಸವಾಲುಗಳನ್ನು ನೀಡುತ್ತದೆ. ಇನ್ನು ಅಧಿಕಾರಿಗಳು ಡ್ರೈವರ್ ಯಾವುದೇ ಲೈನ್ ಟಚ್ ಆಗಿದ್ದಾನಾ ಎಂದು ಗಮನಿಸುತ್ತಲೇ ಇರುತ್ತಾರೆ. ಅಂತ್ಯದಲ್ಲಿನ ಪ್ಯಾರಲಲ್ ಪಾರ್ಕಿಂಗ್ ಅತ್ಯಂತ ಕಠಿಣ. ಇದನ್ನು ಮಾಡಬೇಕು. ಈ ವಿಡಿಯೋಗೆ ಹಲವು ಭಾರತೀಯರು ಪ್ರತಿಕ್ರಿಯೆ ನೀಡಿದ್ದಾರೆ. ಭಾರತದಲ್ಲಿ ಇಷ್ಟೆಲ್ಲ ಕಷ್ಟಪಡಬೇಕಾದ ಅಗತ್ಯವಿಲ್ಲ ಎಂದಿದ್ದಾರೆ .

 

5G Technology: ದೆಹಲಿಯಲ್ಲಿದ್ದುಕೊಂಡು ಸ್ವೀಡನ್‌ನಲ್ಲಿ ಕಾರು ಓಡಿಸಿದ ಪ್ರಧಾನಿ ಮೋದಿ

ಸಣ್ಣ ಸುದ್ದಿ..ಅಪ್ರಾಪ್ತ ಬಾಲಕನಿಗೆ ಬೈಕ್‌ ಚಾಲನೆಗೆ ನೀಡಿದ್ದ ವ್ಯಕ್ತಿಗೆ ದಂಡ
ಅಪ್ರಾಪ್ತ ಬಾಲಕನಿಗೆ ಚಲಾಯಿಸಲು ಬೈಕ್‌ ನೀಡಿದ್ದ ವ್ಯಕ್ತಿಗೆ 36 ಸಾವಿರ ರು. ದಂಡ ಮತ್ತು ಒಂದು ದಿನದ ಸಜೆ ವಿಧಿಸಿ ನಗರದ ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.ನಗರದ ನಿವಾಸಿ ಅನ್ವರ್‌ಖಾನ್‌ ನ್ಯಾಯಾಲಯದ ದಂಡ®ಗೆæ ಒಳಗಾದ ವ್ಯಕ್ತಿ. ಸಂಬಂಧಿಕರ ಅಪ್ರಾಪ್ತ ಮಗನಿಗೆ ನಾಲ್ಕು ತಿಂಗಳ ಹಿಂದೆ ತಮ್ಮ ಬೈಕ್‌ನ್ನು ಚಲಾಯಿಸಲು ನೀಡಿದ್ದರು. ಅಪ್ರಾಪ್ತ ಬಾಲಕ ಬೈಕ್‌ ಚಲಾಯಿಸುವಾಗ, ನಗರದ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಬಳಿ ಆಯತಪ್ಪಿ ಕಳೆಗೆ ಬಿದ್ದು ಮೃತಪಟ್ಟಿದ್ದ. ಈ ಕುರಿತು ನಗರದ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಜೆಎಂಎಫ್‌ಸಿ ಪ್ರಧಾನ ಸಿವಿಲ್‌ ನ್ಯಾಯಾಧೀಶ ನ್ಯಾ.ಮಹೇಂದ್ರಕುಮಾರ್‌, ಅಪ್ರಾಪ್ರ ಬಾಲಕನಿಗೆ ವಾಹನ ಚಲಾಯಿಸಲು ನೀಡಿದ್ದಕ್ಕೆ ಬೈಕ್‌ ಮಾಲೀಕನಿಗೆ 25 ಸಾವಿರ ದಂಡ, ವಾಹನಕ್ಕೆ ವಿಮೆ ಇಲ್ಲದ್ದಕ್ಕೆ 5 ಸಾವಿರ ರು. ದಂಡ ಹಾಗೂ ಚಾಲನಾ ಪರವಾನಗಿ ಇಲ್ಲದಕ್ಕೆ 4 ಸಾವಿರ ರು. ದಂಡ ಸೇರಿದಂತೆ ಒಟ್ಟು 36 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
 

Follow Us:
Download App:
  • android
  • ios