ಟೋಲ್ ಗೇಟ್‌ ಪಾವತಿ ವ್ಯವ್ಯಸ್ಥೆ ಫಾಸ್ಟ್ಯಾಗ್ ಮೂಲಕ ನಡೆಯುತ್ತಿದೆ. ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ತಯಾರಿಗಳು ಚಾಲ್ತಿಯಲ್ಲಿದೆ. ಇದರ ನಡುವೆ ನಿತಿನ್ ಗಡ್ಕರಿ ಇದೀಗ ಹೊಸ ಟೋಲ್ ಟ್ಯಾಕ್ಸ್ ಕಾರ್ಡ್ ಜಾರಿಗೆ ತರಲು ಮುಂದಾಗಿದ್ದಾರೆ.

ನವದೆಹಲಿ(ಫೆ.04) ಭಾರತದಲ್ಲಿ ಟೋಲ್ ಸಂಗ್ರಹ ಮತ್ತಷ್ಟು ಆಧುನಿಕರಣಗೊಳಿಸುವ ತಯಾರಿ ನಡೆಯುತ್ತಿದೆ. ಇದಕ್ಕಾಗಿ ಜಿಪಿಎಸ್ ಆಧಾರಿತ ಜಿಎನ್ಎಸ್ಎಸ್ ಟೋಲ್ ಸಿಸ್ಟಮ್ ಜಾರಿಗೆ ತರಲು ಸರ್ಕಾರ ತಯಾರಿ ನಡೆಸುತ್ತಿದೆ. ಆದರೆ ಈ ತಯಾರಿಗಳ ನಡುವೆ ಇದೀಗ ನಿತಿನ್ ಗಡ್ಕರಿ ಹೊಸ ಟೋಲ್ ಸಿಸ್ಟಮ್ ತರಲು ಮುಂದಾಗಿದ್ದಾರೆ. ಇದುವೇ ಟೋಲ್ ಟ್ಯಾಕ್ಸ್ ಕಾರ್ಡ್. ಈ ಹೊಸ ಟೋಲ್ ಟ್ಯಾಕ್ಸ್ ಕಾರ್ಡ್ ಎಲ್ಲಾ ಹೆದ್ದಾರಿಯ ಟೋಲ್ ಬೂತ್‌ಗಳಲ್ಲಿ ಅನ್ವಯವಾಗಲಿದೆ. ಸುಲಭವಾಗಿ ಟೋಲ್ ಸಂಗ್ರಹ ಹಾಗೂ ವಾಹನ ಮಾಲೀಕರಿಗೆ ಅನುಕೂಲ ಮಾಡಿಕೊಡಲು ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.

ವರದಿಗಳ ಪ್ರಕಾರ ಟೋಲ್ ಟ್ಯಾಕ್ಸ್ ಕಾರ್ಡ್ ಮೂಲಕ ವಾಹನ ಮಾಲೀಕರಿಗೆ ಡಿಸ್ಕೌಂಟ್ ಸಿಗಲಿದೆ. ಪ್ರತಿ ಟೋಲ್ ಬೂತ್‌ಗಳಲ್ಲಿ ಇಂತಿಷ್ಟು ಪ್ರಮಾಣದ ಡಿಸ್ಕೌಂಟ್ ಸಿಗಲಿದೆ. ಈ ಮೂಲಕ ಪ್ರಯಾಣಿಕರ ಸುಲಭ ಪಾವತಿ ಜೊತೆಗೆ ಹಣ ಉಳಿತಾಯ ಮಾಡಲು ಸಾಧ್ಯವಾಗಲಿದೆ ಅನ್ನೋದು ಹೊಸ ಟೋಲ್ ಟ್ಯಾಕ್ಸ್ ಕಾರ್ಡ್ ಉದ್ದೇಶ. ಪ್ರತಿ ಟೋಲ್ ಗೇಟ್‌ಗಳಲ್ಲೂ ಡಿಸ್ಕೌಂಟ್ ಲಭ್ಯವಾಗಲಿದೆ.

ಫಾಸ್ಟಾಗ್‌ ಬೇಡ, ಟೂಲ್ ಬೂತ್ ಇಲ್ಲ, ಭಾರತದಲ್ಲಿ ಟೋಲ್ ಸಂಗ್ರಹಕ್ಕೆ GNSS ಕ್ರಾಂತಿ!

ಹೊಸ ಟೋಲ್ ಟ್ಯಾಕ್ಸ್ ಸ್ಮಾರ್ಟ್‌ಕಾರ್ಡ್ ಪ್ರತಿ ದಿನ ಸಂಚರಿಸುವ ಅಥವಾ ಟೋಲ್ ಮೂಲಕ ಹೆಚ್ಚಾಗಿ ಸಂಚರಿಸುವ ವಾಹನ ಮಾಲೀಕರಿಗೆ ಉಪಯುಕ್ತವಾಗಿದೆ. ಇದು ಒಂದು ರೀತಿಯಲ್ಲಿ ಪಾಸ್ ಇದ್ದ ಹಾಗೆ. ಒಂದು ತಿಂಗಳಿಗೆ ಅಥವಾ 6 ತಿಂಗಳು, ವರ್ಷಕ್ಕೆ ಟೋಲ್ ಟ್ಯಾಕ್ಸ್ ಕಾರ್ಡ್ ರೀಚಾರ್ಜ್ ಮಾಡಿಸಿಕೊಳ್ಳಬಹುಹುದು. ಪ್ರತಿ ದಿನ ಟೋಲ್ ಮೂಲಕ ಸಾಗುವ ಅಥವಾ ಹೆಚ್ಚಾಗಿ ಟೋಲ್ ಮೂಲಕ ಸಾಗುವ ವಾಹನ ಮಾಲೀಕರು ಪ್ರತಿ ಟೋಲ್ ಗೇಟ್‌ಗಳಲ್ಲಿ ಡಿಸ್ಕೌಂಟ್ ಪಡೆಯಲಿದ್ದಾರೆ. 

ಪ್ರಮುಖವಾಗಿ ಇದು ವಾಣಿಜ್ಯ ವಾಹನಗಳಿಗೆ ಉಪಯುಕ್ತವಾಗಿದೆ. ವಾಣಿಜ್ಯ ವಾಹನಗಳ ಟೋಲ್ ದರ ದುಬಾರಿಯಾಗಿದೆ. ಪ್ರತಿ ದಿನ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಟೋಲ್ ಟ್ಯಾಕ್ಸ್ ಕಾರ್ಡ್ ಮಾಡಿಸಿಕೊಂಡರೆ ಪ್ರತಿ ಟೋಲ್ ಬೂತ್‌ಗಳಲ್ಲಿ ಡಿಸ್ಕೌಂಟ್ ಪಡೆಯಲಿದ್ದಾರೆ. ಶೀಘ್ರದಲ್ಲೇ ಹೊಸ ಟೋಲ್ ಟ್ಯಾಕ್ಸ್ ಕಾರ್ಡ್ ಜಾರಿಯಾಗುವ ಸಾಧ್ಯತೆ ಇದೆ. ಈ ಕುರಿತು ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಮಾಡಲಿದೆ.

GNSS ಟೋಲ್ ಸಿಸ್ಟಮ್
ಈಗಾಗಲೇ ಕೇಂದ್ರ ಸರ್ಕಾರ ಸೂಚಿಸಿರುವಂತೆ GNSS ಟೋಲ್ ಸಿಸ್ಟಮ್ ಜಾರಿಗೆ ತರಲಾಗುತ್ತದೆ. ಇದು ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ಪದ್ಧತಿಯಾಗಿದೆ. ಈ ಹೊಸ ಪದ್ಧತಿಯಲ್ಲಿ ಟೋಲ್ ಗೇಟ್, ಟೋಲ್ ಬೂತ್, ಸ್ಕ್ಯಾನರ್ ಇರುವುದಿಲ್ಲ. ಹೆದ್ದಾರಿಗೆ ಎಂಟ್ರಿಕೊಟ್ಟರೆ ಸಾಕು, ಜಿಪಿಎಸ್ ಮೂಲಕ ಟೋಲ್ ಸಂಗ್ರಹವಾಗಲಿದೆ. ಪ್ರಮುಖವಾಗಿ ಎಷ್ಟು ಕಿಲೋಮೀಟರ್ ಹೆದ್ದಾರಿಯಲ್ಲಿ ಕ್ರಮಿಸಿದ್ದೀರಿ? ಅಷ್ಟಕ್ಕೆ ಮಾತ್ರ ಟೋಲ್ ಪಾವತಿಸಿದರೆ ಸಾಕು. ಸದ್ಯ ಎಂಟ್ರಿಕೊಡುವಾಗಲೇ ಹಣ ಕಡಿತವಾಗಲಿದೆ. ಹೀಗಾಗಿ ಕೆಲವೋ ದೂರ ಕ್ರಮಿಸಿ ಹೆದ್ದಾರಿ ಬಿಟ್ಟು ಬೇರೆ ರಸ್ತೆಯಲ್ಲಿ ಚಲಿಸುವ ಪ್ರಯಾಣಿಕರಿಗೆ ನಷ್ಟವಾಗುತ್ತದೆ. ಆದರೆ GNSS ಪದ್ಧತಿಯಿಂದ ಈ ಸಮಸ್ಯೆ ನಿವಾರಣೆಯಾಗಲಿದೆ. ಇಷ್ಟೇ ಅಲ್ಲ ಯಾವುದೇ ಟೋಲ್ ಗೇಟ್ ಇರದ ಕಾರಣ ಸಮಯದ ಸಮಸ್ಯೆಯೂ, ವಾಹನ ದಟ್ಟಣೆ ಸಮಸ್ಯೆಯೂ ಇರುವುದಿಲ್ಲ.

ಈ ಹೊಸ ವಿಧಾನವನ್ನು ಈಗಾಗಲೇ ಹರಿಯಾಣದ NH-709 ರ ಪಾನಿಪತ್-ಹಿಸಾರ್ ವಿಭಾಗದಲ್ಲಿ ಜಾರಿಗೊಳಿಸಲಾಗಿದೆ. GNSS ವ್ಯವಸ್ಥೆಯು ಟೋಲ್ ಸಂಗ್ರಹವನ್ನು ವಾಹನ ಸವಾರರಿಗೆ ಹೆಚ್ಚು ಪರಿಣಾಮಕಾರಿ ಮತ್ತು ನ್ಯಾಯಯುತವಾಗಿಸುವ ಗುರಿಯನ್ನು ಹೊಂದಿದೆ.ಇದು ಸರ್ಕಾರಕ್ಕೆ ಕಂದಾಯ ಸೋರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರಸ್ತುತ, ಕೆಲವು ಚಾಲಕರು ಮುಂದಿನ ಟೋಲ್ ಬೂತ್ ತಲುಪುವ ಮೊದಲು ಸರ್ವಿಸ್ ರಸ್ತೆಗಳ ಮೂಲಕ ಹೆದ್ದಾರಿಗಳಿಗೆ ಪ್ರವೇಶಿಸುವ ಮತ್ತು ನಿರ್ಗಮಿಸುವ ಮೂಲಕ ಟೋಲ್ ಶುಲ್ಕವನ್ನು ತಪ್ಪಿಸುತ್ತಾರೆ. GNSS ಜೊತೆಗೆ, ಇದು ಇನ್ನು ಮುಂದೆ ಸಾಧ್ಯವಾಗುವುದಿಲ್ಲ, ಏಕೆಂದರೆ ಟೋಲ್ ಶುಲ್ಕವನ್ನು ಟೋಲ್ ರಸ್ತೆಯಲ್ಲಿ ಪ್ರಯಾಣಿಸಿದ ನಿಖರ ದೂರದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.

ಈ ಕೆಲಸ ಮಾಡಿದ್ರೆ, ಟೋಲ್‌ ಪ್ಲಾಜಾದಲ್ಲಿ ಹಣ ಕಟ್ಟದೆ ಎಷ್ಟು ಬಾರಿ ಬೇಕಾದ್ರೂ ತಿರುಗಾಡಬಹುದು!