ಭಾರತದ ಮೊದಲ ಹಾರುವ ಟ್ಯಾಕ್ಸಿ ಅನಾವರಣ, ಬೆಂಗಳೂರು ಏವಿಯೇಶನ್ ಕಂಪನಿಯಿಂದ ಕ್ರಾಂತಿ

ಗಂಟೆಗೆ 250 ಕಿ.ಮೀ ವೇಗ, ಒಂದು ಬಾರಿ ಚಾರ್ಜ್ ಮಾಡಿದರೆ 160 ಕಿಲೋಮೀಟರ್ ಪ್ರಯಾಣ ಸಾಮರ್ಥ್ಯ, 7 ಜನರಿಗೆ ಆಸನ, 20 ನಿಮಿಷದಲ್ಲಿ ಫುಲ್ ಚಾರ್ಜ್. ಇದು ಭಾರತದ ಮೊದಲ ಫ್ಲೈಯಿಂಗ್ ಟ್ಯಾಕ್ಸಿ ವಿಶೇಷತೆ, ಹಾರುವ ಟ್ಯಾಕ್ಸಿ ಭಾರತದ ಸಾರಿಗೆಯಲ್ಲಿ ಹೊಸ ಕ್ರಾಂತಿ ಮಾಡಲಿದೆ.
 

Bengaluru based Aviation unveils india first flying taxi shunya at auto expo

ನವದೆಹಲಿ(ಜ.19) ಹಾರುವ ಟ್ಯಾಕ್ಸಿ ಹಲವು ದೇಶಗಳಲ್ಲಿ ಪ್ರಯೋಗ ನಡೆಯುತ್ತಿದೆ. ಇದೀಗ ಮೊಟ್ಟ ಮೊದಲ ಭಾರತದ ಫ್ಲೈಯಿಂಗ್ ಟ್ಯಾಕ್ಸಿ ಅನಾವರಣಗೊಂಡಿದೆ. ಶೂನ್ಯ ಹೆಸರಿನ ಈ ಹಾರುವ ಟ್ಯಾಕ್ಸಿಯಲ್ಲಿ ಹಲವು ವಿಶೇಷತೆಗಳಿವೆ. ಸಾರಿಗೆಯಲ್ಲಿ ಈ ಟ್ಯಾಕ್ಸಿ ಹೊಸ ಕ್ರಾಂತಿ ಮಾಡಲಾಗಿದೆ. 7 ಜನರಿಗೆ ಆರಾಮಾಗಿ ಕುಳಿತು ಇದರಲ್ಲಿ ಪ್ರಯಾಣಿಸಬಹುದು. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಹಾರುವ ಟ್ಯಾಕ್ಸಿ ಹೆಚ್ಚು ಪ್ರಯೋಜನವಾಗಲಿದೆ. ಆ್ಯಂಬುಲೆನ್ಸ್ ಸೇರಿದಂತೆ ತುರ್ತು ಸೇವೆ, ಏರ್‌ಪೋರ್ಟ್ ಟ್ಯಾಕ್ಸಿಯಾಗಿಯೂ ಈ ಹಾರುವ ಟ್ಯಾಕ್ಸಿ ಬಳಕೆಯಾಗಲಿದೆ. ವಿಶೇಷ ಅಂದರೆ ಇಂದು ಸಂಪೂರ್ಣ ಎಲೆಕ್ಟ್ರಿಕ್. ಕೇವಲ 20 ನಿಮಿಷದಲ್ಲಿ ಚಾರ್ಜ್ ಆಗಲಿದೆ. 250 ಕಿ.ಮೀ ಗರಿಷ್ಠ ವೇಗ. ಇನ್ನು 160 ಕಿಲೋಮೀಟರ್ ಮೈಲೇಜ್ ನೀಡಲಿದೆ. 

ನವದೆಹಲಿಯಲ್ಲಿ ನಡೆಯುತ್ತಿರುವ ಗ್ಲೋಬಲ್ ಮೊಬಿಲಿಟಿ ಅಟೋ ಎಕ್ಸ್‌ಪೋದಲ್ಲಿ ಈ ಹಾರುವ ಟ್ಯಾಕ್ಸಿ ಅನಾವರಣಗೊಂಡಿದೆ.  ಜನವರಿ 19 ರಂದು ಬೆಂಗಳೂರು ಮೂಲದ ಏರೋಸ್ಪೇಸ್ ಸ್ಟಾರ್ಟ್‌ಅಪ್ ಸರ್ಲಾ ಏವಿಯೇಷನ್ 'ಶೂನ್ಯ' ಫ್ಲೈಯಿಂಗ್ ಟ್ಯಾಕ್ಸಿ ಪ್ರೊಟೊಟೈಪ್ ಅನ್ನು ಅನಾವರಣಗೊಳಿಸಿತು. 

ದುಬೈನಲ್ಲಿ ಪ್ರಾರಂಭವಾಗ್ತಿದೆ Flying taxi: ನಾವು ಪ್ರಯಾಣಿಸುವ ರೀತಿಯನ್ನೇ ಬದಲಿಸುತ್ತೆ ಏರ್‌ ಕ್ಯಾಬ್‌..!

ಪೈಲಟ್ ಸೇರಿ 7 ಜನರಿಗೆ ಆಸನ
ಈ ಫ್ಲೈಯಿಂಗ್ ಟ್ಯಾಕ್ಸಿಯಲ್ಲಿ ಪೈಲಟ್ ಸೇರಿ ಒಟ್ಟು 7 ಜನರಿಗೆ ಆಸನ ವ್ಯವಸ್ಥೆ ಇದೆ. ಅಂದರೆ 6 ಪ್ರಯಾಣಿಕರು ಆರಾಮವಾಗಿ ಕುಳಿತುಕೊಳ್ಳಬಹುದು. ಕಂಪನಿಯ ಸಹ-ಸಂಸ್ಥಾಪಕ ಶಿವಂ ಚೌಹಾಣ್ ಪ್ರಕಾರ, 2028 ರ ವೇಳೆಗೆ ಬೆಂಗಳೂರಿನಿಂದ ಇದರ ಸೇವೆ ಆರಂಭವಾಗಲಿದೆ. ನಂತರ ಮುಂಬೈ, ದೆಹಲಿ ಮತ್ತು ಪುಣೆ ಮುಂತಾದ ದೊಡ್ಡ ನಗರಗಳಲ್ಲೂ ಇದನ್ನು ಚಲಾಯಿಸಲಾಗುವುದು.

20 ನಿಮಿಷ ಚಾರ್ಜ್‌ನಲ್ಲಿ ಒಂದು ಟ್ರಿಪ್ ಪೂರ್ಣ
'ಶೂನ್ಯ' ಫ್ಲೈಯಿಂಗ್ ಟ್ಯಾಕ್ಸಿ ಕೇವಲ 20 ನಿಮಿಷಗಳ ಚಾರ್ಜಿಂಗ್‌ನಲ್ಲಿ ಒಂದು ಟ್ರಿಪ್ ಪೂರ್ಣಗೊಳಿಸುತ್ತದೆ. ಕಂಪನಿಯು ಒಂದು ಟ್ರಿಪ್‌ನ ಬಾಡಿಗೆಯನ್ನು ಪ್ರೀಮಿಯಂ ಕ್ಯಾಬ್ ಸೇವೆಗಳನ್ನು ನೀಡುವ ಓಲಾ-ಉಬರ್‌ನಷ್ಟೇ ಇಡಲು ನಿರ್ಧರಿಸಿದೆ. ತುರ್ತು ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಈ ಏರ್ ಟ್ಯಾಕ್ಸಿ ಮೂಲಕ ನಗರ ಪ್ರದೇಶಗಳಲ್ಲಿ ಏರ್ ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸುವುದಾಗಿಯೂ ಘೋಷಿಸಿದೆ.

ಫ್ಲೈಯಿಂಗ್ ಟ್ಯಾಕ್ಸಿಯ ಲಾಭಗಳೇನು?
ಕಂಪನಿಯು ಭಾರತದ ಮೊದಲ ಮಹಿಳಾ ಪೈಲಟ್ ಸರಳಾ ಠಕ್ರಾಲ್ ಅವರ ಹೆಸರನ್ನು ಈ ಟ್ಯಾಕ್ಸಿಗೆ ಇಟ್ಟಿದೆ. ಈ ಏರೋಸ್ಪೇಸ್ ಸ್ಟಾರ್ಟ್‌ಅಪ್ ಅನ್ನು ಅಕ್ಟೋಬರ್ 2023 ರಲ್ಲಿ ಆಡ್ರಿಯನ್ ಸ್ಕ್ಮಿಡ್ಟ್, ರಾಕೇಶ್ ಗಾಂವ್ಕರ್ ಮತ್ತು ಶಿವಂ ಚೌಹಾಣ್ ಸ್ಥಾಪಿಸಿದರು. ಈ ಕಂಪನಿ ನಿರ್ಮಿಸಿದ ಫ್ಲೈಯಿಂಗ್ ಟ್ಯಾಕ್ಸಿಯ ಲಾಭಗಳನ್ನು ತಿಳಿದುಕೊಳ್ಳೋಣ.

1- ಫ್ಲೈಯಿಂಗ್ ಟ್ಯಾಕ್ಸಿ ಹೊಗೆ ಅಥವಾ ಶಬ್ದವಿಲ್ಲದೆ ಹಾರಾಡುತ್ತದೆ. ಇದರಿಂದ ವಾಯು ಮತ್ತು ಧ್ವನಿ ಮಾಲಿನ್ಯ ಉಂಟಾಗುವುದಿಲ್ಲ.
2- ಇದನ್ನು ಹಾರಿಸಲು ಉದ್ದದ ರನ್‌ವೇ ಅಗತ್ಯವಿಲ್ಲ. ಅಂದರೆ ಇದು ಹೆಚ್ಚು ಜಾಗವನ್ನು ತೆಗೆದುಕೊಳ್ಳುವುದಿಲ್ಲ.
3- ನಗರಗಳಲ್ಲಿನ ಟ್ರಾಫಿಕ್ ಜಾಮ್ ಮತ್ತು ಸಿಗ್ನಲ್‌ಗಳಲ್ಲಿ ಕಾಯುವ ಸಮಯ ಉಳಿತಾಯವಾಗುತ್ತದೆ. ಇದರಿಂದ ಪ್ರಯಾಣ ವೇಗವಾಗಿ ಮತ್ತು ಅಗ್ಗವಾಗುತ್ತದೆ.
4- ಶೂನ್ಯ ಫ್ಲೈಯಿಂಗ್ ಟ್ಯಾಕ್ಸಿ ಆಟೋ ಡ್ರೈವ್ ಮೋಡ್‌ನಲ್ಲಿ ಚಲಿಸುತ್ತದೆ. ಇದರಲ್ಲಿ ಗಮ್ಯಸ್ಥಾನವನ್ನು ಮಾತ್ರ ನಮೂದಿಸಬೇಕು.

ಭಾರತದಲ್ಲೇ ತಯಾರಾಗಲಿದೆ ಫ್ಲೈಯಿಂಗ್ ಟ್ಯಾಕ್ಸಿ; 2025ಕ್ಕೆ ಉತ್ಪಾದನೆ ಆರಂಭ
 

Latest Videos
Follow Us:
Download App:
  • android
  • ios