ಒಂದೇ ವಾಕ್ಯದಲ್ಲಿ ವಾಹನದ ವಿಮರ್ಷೆ, ಬೆಂಗಳೂರು ಆಟೋ ಚಾಲಕನ ನಡೆಗೆ ಬೆಚ್ಚಿ ಬಿದ್ದ ಕಂಪನಿ!
ಬೆಂಗಳೂರು ಟ್ರಾಫಿಕ್, ಟ್ರಾಫಿಕ್‌ನಲ್ಲಿ ಕೆಲಸ, ಫುಡ್ ಡೆಲವರಿ ಸೇರಿದದಂತೆ ಹಲವು ವಿಶೇಷ ವಿಡಿಯೋಗಳು ಭಾರಿ ವೈರಲ್ ಆಗಿವೆ. ಇದೀಗ ಫೋಟೋ ಒಂದು ಭಾರಿ ಸಂಚಲನ ಸೃಷ್ಟಿಸಿದೆ. ಆಟೋ ಚಾಲಕ ತನ್ನದೇ ಆಟೋ ರಿಕ್ಷಾ ಕುರಿತು ಒಂದೇ ವಾಕ್ಯದಲ್ಲಿ ವಿಮರ್ಷಿಸಿದ್ದಾನೆ. ಆದರೆ ಚಾಲಕನ ನಡೆಯಿಂದ ಇದೀಗ ಕಂಪನಿ ಬೆಚ್ಚಿ ಬಿದ್ದಿದೆ.
ಬೆಂಗಳೂರು(ನ.22) ಪೀಕ್ ಬೆಂಗಳೂರು ಮೂಮೆಂಟ್ ಪ್ರತಿ ದಿನ ಸುದ್ದಿಯಲ್ಲಿರುತ್ತದೆ. ಬೆಂಗಳೂರಿನ ಹಲವು ವಿಶೇಷತೆಗಳು, ವೈರಲ್ ವಿಡಿಯೋ ಹಾಗೂ ಫೋಟೋಗಳ ಮೂಲಕ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಇದೀಗ ಆಟೋ ಚಾಲಕನೊಬ್ಬ ತನ್ನದೇ ಆಟೋ ಕುರಿತು ರಿವ್ಯೂ ಮಾಡಿದ್ದಾನೆ. ಒಂದೇ ವಾಕ್ಯದಲ್ಲಿ ಆಟೋ ವಿಮರ್ಷಿಸಿದ್ದಾನೆ. ಈ ಆಟೋ ಚಾಲಕನ ರಿವ್ಯೂ ವೈರಲ್ ಆಗುತ್ತಿದ್ದಂತೆ ಕಂಪನಿ ಸಂಕಷ್ಟ ಹೆಚ್ಚಿದೆ.
ಯಾವುದೇ ವಾಹನ ಖರೀದಿಸುವ ಮೊದಲು ವಾಹನ ಕುರಿತು ಟೆಸ್ಟ್ ಡ್ರೈವ್ ರಿವ್ಯೂ ಪರಿಶೀಲನೆ ಮಾಡುವುದು ಸಾಮಾನ್ಯ. ಆದರೆ ಇದುರಲ್ಲಿ ಬಹುತೇಕ ಅಭಿಪ್ರಾಯಗಳು ನೈಜವಾಗಿರುವುದಿಲ್ಲ ಅನ್ನೋ ಆರೋಪವೂ ಇದೆ. ಇದರ ನಡುವೆ ವಾಹನ ಖರೀದಿಸಿದ ಮಾಲೀಕರು ಹೇಳುವ ಅಭಿಪ್ರಾಯಗಳಿಗೆ ಭಾರಿ ಮೌಲ್ಯವಿದೆ. ಹೀಗಾಗಿ ಮಾಲೀಕರ ಕೇಳಿ ವಾಹನ ಖರೀದಿ ನಿರ್ಧಿರಿಸಿ ಅನ್ನೋ ಮಾತಿದೆ. ಬೆಂಗಳೂರಿನ ಆಟೋ ಚಾಲಕ ಎಲೆಕ್ಟ್ರಿಕ್ ಆಟೋ ಖರೀದಿಸಿದ್ದಾನೆ. ಆದರೆ ಖರೀದಿ ಬಳಿಕ ನಿರಾಶೆಗೊಂಡಿದ್ದಾನೆ. ಹೀಗಾಗಿ ಆಟೋದ ಹಿಂಭಾಗದಲ್ಲಿ ದೊಡ್ಡ ಅಕ್ಷರಗಳಲ್ಲಿ ಕಚ್ಚಡ ಗಾಡಿ ತಗೋಬೇಡಿ ಎಂದು ಕನ್ನಡದಲ್ಲಿ ಹಾಗೂ ವರ್ಸ್ ವೆಹಿಕಲ್, ಡೋಂಟ್ ಬೈ ಎಂದು ಇಂಗ್ಲೀಷ್‌ನಲ್ಲೂ ಬರೆದಿದ್ದಾನೆ.
ಬೆಂಗಳೂರಿನಲ್ಲಿ ಪೇಪರ್ ಬ್ಯಾಗನ್ನೇ ಹೆಲ್ಮೆಟ್ ಆಗಿ ಬಳಸಿದ ಸವಾರ, ಶೇ.100 ರಷ್ಟು ಮರುಬಳಕೆ ಎಂದ ಜನ!
ಈ ಆಟೋ ಬೆಂಗಳೂರಿನಲ್ಲಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದೆ. ಆದರೆ ಆಟೋ ಸಂಚಾರ ಮಾಡಿದ ಕಡೆಯಲ್ಲಿ ಎಲೆಕ್ಟ್ರಿಕ್ ಆಟೋ ಕುರಿತು ನೆಗಟೀವ್ ಅಭಿಪ್ರಾಯಗಳು ಜನರಲ್ಲಿ ಮೂಡತೊಡಗಿದೆ. ಹಲವರು ಈ ಕುರಿತು ಆಟೋ ಟಾಲಕನ ಬಳಿ ಪ್ರಶ್ನಿಸಿದ್ದಾರೆ. ಈ ವೇಳೆ ಆಟೋದಲ್ಲಿ ಆಗುತ್ತಿರುವ ಸಮಸ್ಯೆಗಳು, ಕಂಪನಿ ಸ್ಪಂದನೆ ಕುರಿತು ಈತ ಮಾಹಿತಿ ನೀಡುತ್ತಿದ್ದಾನೆ ಅನ್ನೋ ಮಾತುಗಳು ಕೇಳಿಬಂದಿದೆ.
ಕಟ್ಟಡ ವಾಹನ, ಯಾರೂ ತಗೋಬೇಡಿ ಅನ್ನೋ ಒಂದು ವಾಕ್ಯ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಈ ಕುರಿತು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ನಾನು ಈ ಆಟೋ ಚಾಲಕನಲ್ಲಿ ಮಾತನಾಡಿದ್ದೇನೆ. ಚಾರ್ಜಿಂಗ್ ನಿಲ್ಲುತ್ತಿಲ್ಲ, ಹೇಳಿದಷ್ಟು ಮೈಲೇಜ್ ನೀಡುತ್ತಿಲ್ಲ, ಎಲ್ಲೆಂದರಲ್ಲಿ ಚಾರ್ಜ್ ಹಾಕಲು ಸಾಧ್ಯವಾಗುತ್ತಿಲ್ಲ. ಚಾರ್ಜಿಂಗ್ ಹಾಗೂ ಮೈಲೇಜ್ ಸಮಸ್ಯೆಯಿಂದ ಹಲವು ಬಾಡಿಗೆಗಳು ಮಿಸ್ ಆಗುತ್ತಿವೆ ಎಂದಿದ್ದಾನೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು ಮನೆ ಬಾಡಿಗೆಗೆ ಸಂದರ್ಶನ: ಪಾಸ್ ಅದವಳಿಗೆ ಆಫರ್ ಲೆಟರ್!
ಆಟೋ ಚಾಲಕನ ನಡೆ ಇದೀಗ ಆಟೋಮೊಬೈಲ್ ಕಂಪನಿಗೆ ಸಂಕಷ್ಟ ತಂದಿದೆ. ನೆಗೆಟೀವ್ ಪ್ರಚಾರಗಳು ಅತೀ ವೇಗದಲ್ಲಿ ಎಲ್ಲೆಡೆ ಹರಡುತ್ತದೆ. ಅದರಲ್ಲೂ ವಾಹನ ಖರೀದಿಸಿ ಮಾಲೀಕ ನೀಡುವ ರಿವ್ಯೂ ಭಾರಿ ಪರಿಣಾಮ ಬೀರಲಿದೆ. ಇದೀಗ ಈ ಎಲೆಕ್ಟ್ರಿಕ್ ಆಟೋ ಖರೀದಿಸಲು ಜನರು ಹಿಂದೇಟು ಹಾಕುವುದು ಸಹಜ. ನೀವು ಎಷ್ಟೋ ಕೋಟಿ ರೂಪಾಯಿ ನೀಡಿ ವಾಹನ ಜಾಹೀರಾತು ನೀಡಿದರೆ, ಈ ರೀತಿ ಮಾಲೀಕರು ನೀಡುವ ರಿವ್ಯೂ ಎಲ್ಲಾ ಚಿತ್ರಣ ಬದಲಿಸಲಿದೆ ಎಂದು ಮಾರ್ಕೆಟಿಂಗ್ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.