Asianet Suvarna News Asianet Suvarna News

ಮುಂದಿನ ವರ್ಷದಿಂದಲೇ ಈ ದೇಶದಲ್ಲಿ ಪೆಟ್ರೋಲ್ -ಡೀಸೆಲ್‌ ಕಾರ್‌ಗಳ ಮಾರಾಟ ಬಂದ್ - ಭಾರತಕ್ಕೆ ಬೇಕಿನ್ನು 16 ವರ್ಷ!

ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾರ್ವೆ ದೇಶವು ಮುಂದಿನ ವರ್ಷದಿಂದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಮಾರಾಟವನ್ನು ನಿಷೇಧಿಸಲಿದೆ. ಭಾರತವು 2040 ರ ವೇಳೆಗೆ ಇದೇ ರೀತಿಯ ನಿಷೇಧವನ್ನು ಜಾರಿಗೊಳಿಸಲು ಯೋಜಿಸುತ್ತಿದೆ, ಆದರೆ ಚೀನಾವು 2025 ರ ವೇಳೆಗೆ ಈ ಗುರಿಯನ್ನು ಸಾಧಿಸುವ ಗುರಿಯನ್ನು ಹೊಂದಿದೆ.

Ban on petrol-diesel vehicles in Norway When for India mrq
Author
First Published Sep 3, 2024, 6:17 PM IST | Last Updated Sep 3, 2024, 6:17 PM IST

ನವದೆಹಲಿ: ಇಡೀ ವಿಶ್ವ ಜಾಗತೀಕ ತಾಪಮಾನದಿಂದ ಹೇಗೆ ಪಾರಾಗಬೇಕು ಎಂಬುದರ ಬಗ್ಗೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೊಂದು ಜಾಗತಿಕ ಸಮಸ್ಯೆಯಾಗಿದ್ದು, ಹೇಗೆ ಈ ಅಪಾಯದಿಂದ ಪಾರಾಗಬೇಕು ಮತ್ತು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಎಲ್ಲಾ ದೇಶದ ಸರ್ಕಾರಗಳು ಕಠಿಣ ನಿರ್ಧಾರಗಳ ಜೊತೆ ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುತ್ತಿವೆ. ವಾಯುಮಾಲಿನ್ಯವುಂಟು ಮಾಡುವ ವಾಹನಗಳ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿಯೂ ಸರ್ಕಾರಗಳು ಮಹತ್ವದ ಹೆಜ್ಜೆಗಳನ್ನು ಇರಿಸುತ್ತಿದೆ. ಇದೀಗ ನಾರ್ವೆ ದೇಶ ಇಂತಹ ದಿಟ್ಟ ಹೆಜ್ಜೆಯನ್ನು ಇರಿಸಿದೆ. ಮುಂದಿನ ವರ್ಷದಿಂದಲೇ ನಾರ್ವೆಯಲ್ಲಿ ಪೆಟ್ರೋಲ್-ಡೀಸೆಲ್ ವಾಹನಗಳ ಮಾರಾಟ ಬಂದ್ ಆಗಲಿದೆ. ಅಂದ್ರೆ 2025ರಿಂದ ನಾರ್ವೆಯಲ್ಲಿ ಪೆಟ್ರೋಲ್-ಡೀಸೆಲ್ ಆಧಾರಿತ ಯಾವುದೇ ವಾಹನಗಳು ಮಾರಾಟ ನಡೆಯಲ್ಲ. 

ಈ ಯೋಜನೆಯನ್ನು ಭಾರತ 2040ರಲ್ಲಿ ಜಾರಿಗೆ ತರಲು ಯೋಚಿಸುತ್ತಿದೆ. ಇದೇ ರೀತಿಯಲ್ಲಿಯೇ ಚೀನಾ ಸಹ ಐದು ವರ್ಷಗಳ ಹಿಂದೆಯೇ ಈ ನಿರ್ಧಾರ ತೆಗೆದುಕೊಂಡಿತ್ತು. 2025ರೊಳಗೆ ಚೀನಾದಲ್ಲಿ ಸಂಪೂರ್ಣವಾಗಿ ಪೆಟ್ರೋಲ್-ಡೀಸೆಲ್ ಆಧಾರಿತ ವಾಹನಗಳ ಮಾರಾಟ ನಿಲ್ಲಿಸಲಿದೆ. 2025ರಿಂದ ನಾರ್ವೆಯಲ್ಲಿ ಯಾವುದೇ  ಪೆಟ್ರೋಲ್-ಡೀಸೆಲ್ ವಾಹನಗಳ ಮಾರಾಟವಾಗಲ್ಲ. ಬೆಲ್ಜಿಯಂ 2029ಕ್ಕೆ ಈ ನಿರ್ಧಾರವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಮುಂದಾಗಿದೆ. 

ಹಲವರ ನಡುಗಿಸಿದ ಗೌತಮ್ ಅದಾನಿ ನಿರ್ಧಾರ, 8,388 ಕೋಟಿ ರೂಗೆ 3 ಕಂಪನಿ ಖರೀದಿಗೆ ತಯಾರಿ!

ಜರ್ಮನಿ, ಗ್ರೀಸ್, ಐಲ್ಯಾಂಡ್, ಇಸ್ರೇಲ್, ನೆದರ್ಲಾಂಡ್, ಸ್ವೀಡನ್ ಮತ್ತು ಡೆನ್ಮಾರ್ಕ್ 2030ರಲ್ಲಿ ಪೆಟ್ರೋಲ್-ಡೀಸೆಲ್ ವಾಹನಗಳ ಮಾರಾಟ ಸಂಪೂರ್ಣವಾಗಿ ನಿಲ್ಲಿಸಲಿದೆ. ಚಿಲಿ, ಚೀನಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಪೋರ್ಚುಗಲ್, ಥೈಲ್ಯಾಂಡ್, ಯುಕೆ ಮತ್ತು ಅಮೆರಿಕ 2035ರ ವೇಳೆಗೆ ಪೆಟ್ರೋಲ್-ಡೀಸೆಲ್ ವಾಹನಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲು ಯೋಜಿಸುತ್ತಿವೆ.

ಭಾರತ 2040ರಲ್ಲಿ ಪೆಟ್ರೋಲ್-ಡೀಸೆಲ್ ವಾಹನಗಳ ಮಾರಾಟ ಸಂಪೂರ್ಣವಾಗಿ ನಿಲ್ಲಿಸುವ ಉದ್ದೇಶವನ್ನು ಹೊಂದಿದೆ. ಆಸ್ಟ್ರಿಯಾ, ಕ್ರೊಯೇಷಿಯಾ, ಈಜಿಪ್ಟ್, ಎಲ್ ಸಾಲ್ವಡಾರ್, ಐರ್ಲೆಂಡ್, ಮೆಕ್ಸಿಕೊ, ನ್ಯೂಜಿಲೆಂಡ್, ಪಾಕಿಸ್ತಾನ, ಪೋಲೆಂಡ್, ಸ್ಪೇನ್ ಮತ್ತು ಟರ್ಕಿ ಸಹ 2040ರಲ್ಲಿ ಈ ಪೆಟ್ರೋಲ್-ಡೀಸೆಲ್ ಆಧಾರಿತ ಯಾವುದೇ ವಾಹನಗಳ ಮಾರಾಟದ ಮೇಲೆ ನಿಷೇಧ ಹೇರುವ ಗುರಿಯನ್ನು ಹೊಂದಿವೆ. ಈ ಸಂಬಂಧ ಆಫ್ರಿಕಾ ಯಾವುದೇ ಯೋಜಿತ ಉದ್ದೇಶ ಹೊಂದಿಲ್ಲ. ಇತ್ತ ಕಚ್ಚಾ ತೈಲ ಉತ್ಪಾದನೆ ರಾಷ್ಟ್ರಗಳು ಈ ಕುರಿತು ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ

ದಕ್ಷಿಣ ಭಾರತದ ಖಾಸಗಿ ಬಸ್‌ಗಳಿಗೆ ಪೈಪೋಟಿ ನೀಡಲು ಬಂದ ಜರ್ಮನಿಯ ಫ್ಲಿಕ್ಸ್ ಬಸ್!

Latest Videos
Follow Us:
Download App:
  • android
  • ios