Asianet Suvarna News Asianet Suvarna News

ಅಪಾಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಜೀವ ಉಳಿಸಿದ ಐಫೋನ್ ಕ್ರಾಶ್ ಡೆಟೆಕ್ಷನ್ ಫೀಚರ್!

ಕಾರು ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಜೀವ ಉಳಿಸುವಲ್ಲಿ ಆ್ಯಪಲ್ ಐಫೋನ್ ಕ್ರಾಶ್ ಡಿಟೆಕ್ಷನ್ ಫೀಚರ್ ಮತ್ತೆ ಸಫಲವಾಗಿದೆ. ಏನಿದು ಐಫೋನ್ ಕ್ರಾಶ್ ಡಿಟೆಕ್ಷನ್ ಫೀಚರ್? ಹೇಗೆ ಕಾರ್ಯನಿರ್ವಹಿಸುತ್ತದೆ?
 

Apple iPhone car crash detection feature saves passenger life Role SOS feature ckm
Author
First Published Oct 21, 2023, 7:13 PM IST

ನವದೆಹಲಿ(ಅ.21)  ಇತರ ಫೋನ್‌ಗಳಿಂದ ಆ್ಯಪಲ್ ಐಫೋನ್ ಸುರಕ್ಷತೆಗೆ ಮೊದಲ ಆದ್ಯತೆ. ಡೇಟಾ ಸೋರಿಕೆ ಸೇರಿದಂತೆ ಯಾವುದೇ ವಿಚಾರಗಳಲ್ಲಿ ಐಫೋನ್ ಗ್ರಾಹಕರಿಗೆ ಹೆಚ್ಚಿನ ಭದ್ರತೆ ನೀಡುತ್ತದೆ. ಇನ್ನು ಕರೆ, ಡೇಟಾ, ಕ್ಯಾಮೆರಾ ಸೇರಿದಂತೆ ಐಫೋನ್ ಫೀಚರ್ಸ್ ಅತ್ಯುತ್ತಮವಾಗಿದೆ. ಐಫೋನ್ ಫೀಚರ್ಸ್ ಇಷ್ಟಕ್ಕೇ ಸಮೀತವಾಗಿಲ್ಲ. ಇದು ಜೀವರಕ್ಷಣೆಯಲ್ಲೂ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಹೌದು, ಐಫೋನ್‌ನಲ್ಲಿ ಕ್ರಾಶ್ ಡಿಟೆಕ್ಷನ್ ಫೀಚರ್ ಇದೀಗ ಕಾರು ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದೆ. 

ರೆಡ್ಡಿಟ್ ಬಳಕೆದಾರ ಈ ಕುರಿತು ಅಪಘಾತದ ಭಯಾನಕ ಘಟನೆ ಹಂಚಿಕೊಂಡಿದ್ದಾರೆ. ಇದೇ ವೇಳೆ ಐಫೋನ್ ಫೀಚರ್ ನನ್ನ ಜೀವ ಉಳಿಸಿತು. ಧನ್ಯವಾದ ಎಂದಿದ್ದಾರೆ. ಐಫೋನ್ SoS ಫೀಚರ್ ಗುಣಗಾನ ಮಾಡಿರುವ ವ್ಯಕ್ತಿ, ನಡೆದ ಘಟನೆಯನ್ನು ವಿವರಿಸಿದ್ದಾರೆ. BMW ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರು ಅಪಘಾತಗೊಂಡಿದೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಐಫೋನ್ ಕ್ರಾಶ್ ಡಿಟೆಕ್ಷನ್ ಫೀಚರ್ ‌ನಿಂದ ಸೂಕ್ತ ಸಮಯದಲ್ಲಿ ತುರ್ತ ವೈದ್ಯಕೀಯ ತಂಡ ಹಾಗೂ ತುರ್ತು ಸೇವಾ ತಂಡಗಳು ಸ್ಥಳಕ್ಕೆ ದೌಡಾಯಿಸಿದೆ. ಬಳಿಕ ಚಾಲನಕ ರಕ್ಷಿಸಿ ಸೂಕ್ತ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದೆ. ಇದರಿಂದ ಚಾಲಕನ ಪ್ರಾಣ ಉಳಿದಿದೆ.

ಪತಿಯ ಜೀವ ಉಳಿಸಿದ ಆ್ಯಪಲ್ ವಾಚ್‌: ಸಿಇಒ ಟಿಮ್ ಕುಕ್‌ಗೆ ಕೃತಜ್ಞತೆ ಸಲ್ಲಿಸಿದ ಪತ್ನಿ!

ಏನಿದು ಐಫೋನ್ ಕ್ರಾಶ್ ಡಿಟೆಕ್ಷನ್? ಹೇಗೆ ಕಾರ್ಯನಿರ್ವಹಿಸುತ್ತದೆ?
ಐಫೋನ್ 14 ಹಾಗೂ ಐಫೋನ್ 15 ಸೀರಿಸ್‌ನಲ್ಲಿ ಈ ಮಹತ್ವದ ಕ್ರಾಶ್ ಡಿಟೆಕ್ಷನ್ ಫೀಚರ್ ಲಭ್ಯವಿದೆ. ಇಷ್ಟೇ ಅಲ್ಲ ಆ್ಯಪಲ್ ವಾಚ್ ಸೀರಿಸ್ 8, ವಾಚ್ ಸೀರಿಸ್ 9 ಹಾಗೂ ಆ್ಯಪಲ್ ವಾಚ್ SE ಸೇರಿದಂತೆ ಅಲ್ಟ್ರಾ ಸೀರಿಸ್‌ನಲ್ಲೂ ಈ ಫೀಚರ್ ಲಭ್ಯವಿದೆ. ಕಾರು ಅಪಘಾತವಾದರೆ ಸೇರಿದಂತೆ ಯಾವುದೇ ರೀತಿಯ ಅಪಘಾತವಾದ ತಕ್ಷಣ ಕಾರ್ ಕ್ರಾಶ್ ಡಿಟೆಕ್ಷನ್ ಫೀಚರ್ ಈ ಅಪಘಾತದವನ್ನು ಗುರುತಿಸಲಿದೆ. ಮುಖಾಮುಖಿ ಡಿಕ್ಕಿ, ಪಲ್ಟಿ, ಹಿಂಭಾಗದಲ್ಲಿ ಡಿಕ್ಕಿ, ನಜ್ಜು ಗುಜ್ಜು ಸೇರಿದಂತೆ ಯಾವುದೇ ಅಪಘಾವಾದ ತಕ್ಷಣವೇ ಕ್ರಾಶ್ ಡಿಟೆಕ್ಷನ್ ಫೀಚರ್ ಪ್ರಮುಖ ಪಾತ್ರ ನಿರ್ವಹಿಸಲಿದೆ.

ಕಾರು ಅಪಘಾತವಾದ ತಕ್ಷಣ ಐಫೋನ್ ಅಥವಾ ಆ್ಯಪಲ್ ವಾಚ್ ಡಿಟೆಕ್ಟ್ ಮಾಡಲಿದೆ. ತಕ್ಷಣವೇ ಅಲರಾಂ ಶಬ್ದವಾಗಲಿದೆ. ಇದು ಕಾರಿನ ಸಿಸ್ಟಮ್‌ನಲ್ಲೂ ಕಾಣಿಸಿಕೊಳ್ಳಲಿದೆ. ಇಷ್ಟೇ ಅಲ್ಲ ತಕ್ಷವೇ ತುರ್ತು ಸೇವಾ ವಿಭಾಗಕಕ್ಕೆ ಸಂದೇಶ ರವಾನಿಸಲಿದೆ. ಆಟೋಮ್ಯಾಟಿಕ್ ಕಾಲ್ ತುರ್ತು ಸೇವಾ ವಿಭಾಗಕ್ಕೆ ಮಾಡಲಿದೆ. ಇಷ್ಟೇ ಅಲ್ಲ ಅಪಘಾತದ ವಿವರ ನೀಡಲಿದೆ. ಇದರ ಜೊತೆಗೆ ಕಾರು ಅಪಘಾತವಾಗಿರುವ ಸ್ಥಳದ ಲೊಕೇಶನ್ ಕೂಡ ಹಂಚಲಿದೆ. 

ಮೈ ಜುಮ್ಮೆನಿಸುವ ವಿಡಿಯೋ, ಹಳಿ ಮೇಲೆ ಮಲಗಿದ ವ್ಯಕ್ತಿಯ ಮಿಂಚಿನ ವೇಗದಲ್ಲಿ ರಕ್ಷಿಸಿದ ಮಹಿಳಾ ಪೊಲೀಸ್!

ಇದರಿಂದ ತುರ್ತು ಸೇವಾ ವಿಭಾಗದ ತಂಡ ತಕ್ಷಣವೇ ಸ್ಥಳಕ್ಕೆ ಧಾವಿಸಿ ಅಪಘಾತಗೊಂಡವರ ರಕ್ಷಣೆ ಸಾಧ್ಯವಾಗಲಿದೆ. ಇಷ್ಟೇ ಅಲ್ಲ ವೈದ್ಯಕೀಯ ನೆರವು ಕೂಡ ಸಿಗಲಿದೆ. ಅಪಘಾತದ ವೇಳೆ ಸೂಕ್ತ ಸಮಯಕ್ಕೆ ವೈದ್ಯಕೀಯ ನೆರವು ಅತೀ ಅಗತ್ಯ. 

ಈ ಫೀಚರ್‌ನಿಂದ ಪ್ರಯಾಣಿಕ ಅಪಘಾತವಾದ ಬೆನ್ನಲ್ಲೇ ತುರ್ತು ಸೇವಾವಿಭಾಗದಕ್ಕೆ ಸಂದೇಶ ರವಾನೆಯಾಗಿದೆ. ವೈದ್ಯಕೀಯ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಪ್ರಯಾಣಿಕನ ರಕ್ಷಿಸಿ ತುರ್ತು ವೈದ್ಯಕೀಯ ನೆರವು ನೀಡಿ ಆಸ್ಪತ್ರೆ ದಾಖಲಿಸಿದ್ದಾರೆ. ಇದರಿಂದ ಜೀವ ಉಳಿದಿದೆ.

Follow Us:
Download App:
  • android
  • ios