ದಾವಣಗೆರೆ: ಪತಿ - ಪತ್ನಿಗೆ ಇಬ್ಬರಿಗೂ ಗೆಲುವು : ಮಾವನ ಸೋಲಿಸಿದ ಅಳಿಯ

ದಾವಣಗೆರೆಯಲ್ಲಿ ನಡೆದ ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ಪತಿ - ಪತ್ನಿ ಇಬ್ಬರೂ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಮಾವ ಅಳಿತ ನಿಂತಿದ್ದೆಡೆ ಮಾವನಿಗೆ ಸೋಲಾಗಿದೆ. 

Husband Wife in in Davanagere Corporation Poll

ದಾವಣಗೆರೆ [ನ.15]:  ಮಹಾ ನಗರ ಪಾಲಿಕೆಗೆ ಮೂರನೇ ಬಾರಿಗೆ ನಡೆದ ಚುನಾವಣೆಯಲ್ಲಿ ಪತಿ-ಪತ್ನಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾದರೆ, ಬಂಡಾಯ ಅಭ್ಯರ್ಥಿಯಾಗಿದ್ದ ಮಾವನನ್ನು ಸೋಲಿಸಿದ ಅಳಿಯ, ಪ್ರಭಾವಿ ರಾಜಕಾರಣಿಯ ಪರಮಾಪ್ತನನ್ನು ಸತತ 2 ಸೋಲಿನ ನಂತರ ಅಭ್ಯರ್ಥಿ,...

ಹೀಗೆ ದಾವಣಗೆರೆ ಮಹಾ ನಗರ ಪಾಲಿಕೆ ಅನೇಕ ವೈಶಿಷ್ಟ್ಯಗಳಿಗೂ ಕಾರಣವಾಗಿದೆ. ಈ ಪೈಕಿ 28ನೇ ವಾರ್ಡ್‌ನಿಂದ ಕಾಂಗ್ರೆಸ್‌ ಪಕ್ಷದಿಂದ ಪಾಲಿಕೆ ಸದಸ್ಯನಾಗಿ ಪುನರಾಯ್ಕೆಯಾದ ಜೆ.ಎನ್‌.ಶ್ರೀನಿವಾಸ್‌ ಜೊತೆಗೆ ಶ್ವೇತಾ ಜೆ.ಎನ್‌.ಶ್ರೀನಿವಾಸ ಆಯ್ಕೆಯಾಗಿದ್ದಾರೆ. ಈ ಮೂಲಕ ಪತಿ-ಪತ್ನಿ ಇಬ್ಬರೂ ಪಾಲಿಕೆಗೂ ಜೊತೆ ಜೊತೆಗೆ ಕಾಲಿಡುವಂತಾಗಿದೆ.

ಶ್ವೇತಾ ಶ್ರೀನಿವಾಸ ಸಿಪಿಐ ಹಿರಿಯ ನಾಯಕರಾಗಿದ್ದ ಮಾಜಿ ಶಾಸಕ ದಿವಂಗತ ಪಂಪಾಪತಿ ಅವರ ಸಹೋದರಿಯ ಮೊಮ್ಮಗಳು. ತಮ್ಮ ಅಜ್ಜನನ್ನೇ ಆದರ್ಶವಾಗಿಟ್ಟುಕೊಂಡು ಕಾಂಗ್ರೆಸ್‌ ಪಕ್ಷದಿಂದ ಪಾಲಿಕೆಗೆ ಚುನಾವಣೆಗೆ ಸ್ಪರ್ಧಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿರುವ ಶ್ವೇತಾ ಶ್ರೀನಿವಾಸ ಹಾಗೂ ಪುನರಾಯ್ಕೆಯಾದ ಜೆ.ಎನ್‌.ಶ್ರೀನಿವಾಸ ಈ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು 33ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಕೆ.ಎಂ.ವೀರೇಶ್‌ ಸಂಬಂಧದಲ್ಲಿ ತಮ್ಮ ಮಾವನಾದ ಬಿಜೆಪಿ ಬಂಡಾಯ ಅಭ್ಯರ್ಥಿ ಎನ್‌.ರಾಜಶೇಖರ ವಿರುದ್ಧ ಜಯ ಸಾಧಿಸಿದ್ದಾರೆ. ಕಾಂಗ್ರೆಸ್‌-ಬಿಜೆಪಿ ಜೊತೆಗೆ ಬಂಡಾಯ ಬಿಜೆಪಿ ಅಭ್ಯರ್ಥಿ ಮಧ್ಯ ತ್ರಿಕೋನ ಸ್ಪರ್ಧೆ ಇದ್ದು, ಇಲ್ಲಿ ಬಿಜೆಪಿ ಮೊದಲ ಸ್ಥಾನದಲ್ಲಿದ್ದರೆ, ಬಿಜೆಪಿ ಬಂಡಾಯ 2ನೇ ಸ್ಥಾನ ಅಲಂಕರಿಸಿದರೆ, ಕಾಂಗ್ರೆಸ್‌ 3ನೇ ಸ್ಥಾನಕ್ಕೆ ಕುಸಿದಿದೆ.

ಕಾಂಗ್ರೆಸ್ಸಿನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಪರಮಾಪ್ತ ದಿನೇಶ ಕೆ.ಶೆಟ್ಟಿತಮ್ಮ ಎದುರಾಳಿ ಬಿಜೆಪಿಯ ಬಿ.ಜಿ.ಅಜಯಕುಮಾರ ವಿರುದ್ಧ ಹೀನಾಯ ಸೋಲು ಕಂಡಿದ್ದು ಮಾತ್ರ ಸ್ವಪಕ್ಷೀಯರನ್ನೂ ತೀವ್ರ ಆತಂಕಕ್ಕೆ ನೂಕಿದೆ. ಇಲ್ಲಿ ದಿನೇಶ ಕೆ.ಶೆಟ್ಟಿಆರಂಭದಲ್ಲಿ ಸುಲಭ ಗೆಲುವು ಸಾಧಿಸುವ ನಿರೀಕ್ಷೆ ಇತ್ತು. ನಂತರ ಒಂದಿಷ್ಟುಬಿರುಸಿನ ಸ್ಪರ್ಧೆ ನಿರೀಕ್ಷೆ ಮಾಡಲಾಗಿತ್ತು. ಆದರೆ, ಫಲಿತಾಂಶ ಬಂದಾಗ ಮಾತ್ರ ವಾರ್ಡ್‌ ಜನತೆ ಸತತವಾಗಿ ಗೆದ್ದಿದ್ದ ದಿನೇಶ ಶೆಟ್ಟಿಕೈ ಬಿಟ್ಟು, 2 ಸಲ ಸೋತಿದ್ದ ಅಜಯಕುಮಾರಗೆ ಗೆಲ್ಲಿಸಿದರು.

ಸಂಸದ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಹತ್ತಿರದ ಸಂಬಂಧಿ ಎಚ್‌.ಎನ್‌.ಶಿವಕುಮಾರ 22ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಧಿ ದೇವರಮನಿ ಶಿವಕುಮಾರ ವಿರುದ್ಧ 1 ಸಾವಿರಕ್ಕೂ ಅದಿಕ ಮತಗಳಿಂದ ಸೋಲನುಭವಿಸಿದ್ದಾರೆ. ಒಟ್ಟಾರೆ ದಾವಣಗೆರೆ ಪಾಲಿಕೆ ಫಲಿತಾಂಶ ಸಾಕಷ್ಟುಹೊಸತನ, ಅಚ್ಚರಿಗಳಿಗೆ ಕಾರಣವಾಗಿದ್ದು ಮಾತ್ರ ಸುಳ್ಳಲ್ಲ.

Latest Videos
Follow Us:
Download App:
  • android
  • ios