ನರೇಗಾ ಕೆಲಸ ನೀಡಲು ವಿಳಂಬ: ಗ್ರಾ.ಪಂ. ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ ಇಬ್ಬರು ಅಂಧರ್

  • ಗ್ರಾ.ಪಂ. ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ ಪುಂಡರಿಬ್ಬರು ಅರೆಸ್ಟ್ 
  • ನರೇಗಾ ಕೆಲಸ ನೀಡಲು ವಿಳಂಬ ಮಾಡಿದ್ದಕ್ಕೆ ಆಕ್ರೋಶ
  • ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆಯಲ್ಲಿ ಘಟನೆ
Delay to get Nrega work: two youth arrested for clash in GP at nyamati taluk akb

ವರದಿ : ವರದರಾಜ್
ದಾವಣಗೆರೆ (ಮೇ 8): ನರೇಗಾ ಕೆಲಸ ನೀಡಲು ವಿಳಂಬ ಮಾಡಿದ್ದಾರೆಂದು ನ್ಯಾಮತಿ (Nyamatti) ತಾಲೂಕಿನ ಚಿನ್ನಿಕಟ್ಟೆಯಲ್ಲಿ (Chinnikatte) ಗ್ರಾಮ ಪಂಚಾಯತಿ ಕಚೇರಿಗೆ ನುಗ್ಗಿ ಪುಂಡರಿಬ್ಬರು ದಾಂಧಲೆ ಮಾಡಿದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಿದರಹಳ್ಳಿ (Bidarahalli) ಗ್ರಾಮದ  ಸಿದ್ದೇಶ್ ನಾಯ್ಕ್ (Siddesh Naik), ಲಕ್ಕಿನಕೊಪ್ಪದ (Lakkinakoppa) ಗಿರೀಶ್ ನಾಯ್ಕ್ (Girish Naik) ಎಂಬವರನ್ನು ಬಂಧಿಸಿದ್ದಾರೆ. ಇವರು ಗ್ರಾಮ ಪಂಚಾಯತಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಬೆಳಗ್ಗೆ ಗ್ರಾಮ ಪಂಚಾತಿಗೆ ಬಂದು ಅಲ್ಲಿನ ಸಿಬ್ಬಂದಿ ಜೊತೆ ಸೌಜನ್ಯದಿಂದ ಮಾತನಾಡಿದವರು ನಂತರ ಮಧ್ಯಾಹ್ನದ ವೇಳೆಗೆ ಕುಡಿದ ಬಂದು ಗಲಾಟೆ ಮಾಡಿದ್ದಾರೆ. 

ಸಾರಾಯಿ ಕುಡಿದು ಕೈಯಲ್ಲೇ ಬಾಟಲಿ ಹಿಡಿದೇ ತೂರಾಡುತ್ತಾ ಗ್ರಾಮ ಪಂಚಾಯತಿ ಬಳಿ ಬಂದಿದ್ದಾರೆ. ಆ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಓರ್ವ ಪುರುಷ ಸಿಬ್ಬಂದಿ ಇಬ್ಬರು  ಮಹಿಳಾ ಸಿಬ್ಬಂದಿ ಕೆಲಸ ಮಾಡುತ್ತಿದ್ದರು‌.ಏಕಾಏಕಿ ಗ್ರಾಮ ಪಂಚಾಯತಿಗೆ ನುಗ್ಗಿದ ಯುವಕರು  ಸಿಬ್ಬಂದಿಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ  ಹಲ್ಲೆ ‌ನಡೆಸಿ ಪೀಠೋಪಕರಣ ಧ್ವಂಸ ಮಾಡಿದ್ದಾರೆ. ನರೇಗಾ ಕೆಲಸ ತಮಗೆ ಬೇಕಾದ ಕಡೆ ಕೊಡಿ‌ ಎಂದು ಒತ್ತಾಯ ಮಾಡಿ ಕಚೇರಿಯಲ್ಲಿದ್ದ ಕುರ್ಚಿ, ಕಿಟಕಿ‌ಗಾಜು ಪುಡಿ ಪುಡಿ ಮಾಡಿ ದಾಂಧಲೆ ಮಾಡಿದ್ದಾರೆ. ಎಲ್ಲೋ ಹೊರಹೋಗಿದ್ದ ಗ್ರಾ.ಪಂ. ಪಿಡಿಓ ಘಟನೆ ತಿಳಿದು ಹೌಹಾರಿದ್ದಾರೆ.

Davanagere: ಜ್ಯೋತಿಷಿ ಬಳಿ ಶಾಸ್ತ್ರ ಕೇಳಿ ಹಣ ದೋಚುತ್ತಿದ್ದ ಇಬ್ಬರು ಕಳ್ಳರ ಬಂಧನ

ಸಿದ್ದೇಶ್ ನಾಯ್ಕ್ ಮತ್ತು ಗಿರೀಶ್ ನಾಯ್ಕ್  ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಬೇಕೆಂದು ಅರ್ಜಿ ಹಾಕಿದ್ದರು. ಕಳೆದ ಎಂಟು  ದಿನಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಸಲ್ಲಿಸಿದ  ನಂತರ ಅರ್ಜಿಯನ್ನು ಅಲ್ಲಿನ ಪಿಡಿಓ ಆಶಾ ವಿಲೇವಾರಿ ಕೂಡ ಮಾಡಿದ್ದರು. ಈ ಬಗ್ಗೆ ವಿಚಾರಿಸಲು  ಬೆಳಗ್ಗೆ  ಸೌಜನ್ಯದಿಂದ  ಬಂದವರು  ಮಧ್ಯಾಹ್ನದ  ನಂತರ  3.30 ರ ಸುಮಾರಿಗೆ ಕುಡಿದು ಬಂದು ಇಬ್ಬರು ಗಲಾಟೆ ಮಾಡಿದರು‌. ಅವರಿಬ್ಬರು ನಿಂತುಕೊಳ್ಳುವ ಪರಿಸ್ಥಿತಿಯಲ್ಲೂ ಇರಲಿಲ್ಲ ಬಂದು ಚೇರ್ ಹೊಡೆದು ಹಾಕಿದರು. ಇಬ್ಬರು ಸಾರಾಯಿ ಬಾಟಲ್ ಹಿಡಿದು ಬಂದು ಮೊದಲು ಚೇರ್‌ಗಳನ್ನು ಹೊಡೆದು ಹಾಕಿದರು. ನಂತರ ಯಾಕೆ ಏನು ಎಂದು ಪ್ರಶ್ನಿಸಲು ಮುಂದಾದ ಕಂಪ್ಯೂಟರ್ ಆಪರೇಟರ್  ಹಾಗೂ ಇತರ ಇಬ್ಬರು ಮಹಿಳಾ ಸಿಬ್ಬಂದಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು   ಅಲ್ಲಿನ ಸಿಬ್ಬಂದಿ ಘಟನೆಯನ್ನು ವಿವರಿಸಿದ್ದಾರೆ‌.

Koppal: ನಿವೃತ್ತ ಶಿಕ್ಷಕಿಯ ಬದುಕಿಗೆ ನರೇಗಾ ಆಸರೆ: ಇಳಿ ವಯಸ್ಸಲ್ಲೂ ದುಡಿದು ತಿನ್ನುವ ಪರಿಸ್ಥಿತಿ..!
ಈ ಬಗ್ಗೆ ಮಾತನಾಡಿದ ಪಿಡಿಓ(PDO) ಆಶಾ (Asha) ಘಟನೆ ಹಿನ್ನೆಲೆಯನ್ನು ವಿವರಿಸಿದ್ದಾರೆ. ನರೇಗಾದಲ್ಲಿ ಕೆಲಸ ಬೇಕೆಂದು ನಮೂನೆ 6ರಲ್ಲಿ ಏಪ್ರಿಲ್ 30 ರಂದು  ಅರ್ಜಿ  ಕೊಟ್ಟಿದ್ದರು. ಅವರಿಗೆ ಕೆಲಸ ಕೊಡಲಿಕ್ಕೆ 15 ದಿನ ಟೈಮ್ ಇರುತ್ತೆ. ಅವರಿಗೆ ಸಾಮಾಜಿಕ ವಲಯ ಅರಣ್ಯದಲ್ಲಿ ಕೆಲಸ ಕೊಡಬೇಕೇಂದು ಅರಣ್ಯ ಇಲಾಖೆಗೆ ಅರ್ಜಿ  ಪಾರ್ವೆಡ್ ಮಾಡಿದ್ದೆವು.ಅಪ್ರೋವಲ್ ಕಾಪಿಯನ್ನು ತಗೊಂಡು ಹೋದವರು ಮಧ್ಯಾಹ್ನ ಕುಡಿದುಕೊಂಡು ಬಂದು ಇಲ್ಲಿನ‌ ಸಿಬ್ಬಂದಿಗೆ ಅವಾಚ್ಯ ಶಬ್ಧಗಳಿಂದ‌ ನಿಂದಿಸಿ ಸಾರಾಯಿ ಬಾಟಲ್‌ನ್ನು ಹೊಡೆದು ನಮ್ಮ ಸಿಬ್ಬಂದಿ ‌‌ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪಿಡಿಓ ಆಶಾ  ದೂರು ದಾಖಲಿಸಿದ್ದಾರೆ. 

ಕುಡಿದು ಬಂದು ಪುಂಡಾಟ  ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ  

ಸಿದ್ದೇಶ್ ನಾಯ್ಕ್ ಹಾಗೂ ಗಿರೀಶ್ ನಾಯ್ಕ್ ಕುಡಿದು ತೂರಾಡುತ್ತಾ ಗ್ರಾಮ ಪಂಚಾಯತಿ ಒಳ ಪ್ರವೇಶಿಸುವ ದೃಶ್ಯ  ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಕುಡಿದ ಮತ್ತಿನಲ್ಲೇ ಒಳ ಬಂದು ಮಹಿಳಾ ಸಿಬ್ಬಂದಿ ಮುಂದೆ ಕೂತು ಕೇಳುವ ಅವರನ್ನು ಬೈಯ್ಯುವ , ನಂತರ ಚೇರ್ ಗಳನ್ನು ಪುಡಿ ಪುಡಿ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿದ್ದ ಸಿಸಿಟಿವಿ (CCTV) ದೃಶ್ಯಗಳನ್ನು ಪೊಲೀಸರು ವೀಕ್ಷಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. 

ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ  ಮೇಲೆ ದೂರು ದಾಖಲಿಸಿ ಆರೋಪಿಗಳನ್ನು ಬಂಧಿಸುವಂತೆ  ಪಿಡಿಓ ದೂರು  ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ನ್ಯಾಮತಿ ಪೊಲೀಸರು ಇಬ್ಬರು ಪುಂಡರನ್ನು ಬಂಧಿಸಿ ಜೈಲು ಕಂಬಿ ಎಣಿಸುವಂತೆ ಮಾಡಿದ್ದಾರೆ.
 

Latest Videos
Follow Us:
Download App:
  • android
  • ios