Asianet Suvarna News Asianet Suvarna News

ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಸಬೇಕು: ಸ್ವರ್ಣವಲ್ಲೀ ಶ್ರೀ ಆಗ್ರಹ

ಸರ್ಕಾರಿ ಶಾಲೆಗಳಲ್ಲಿ ಧ್ಯಾನ ಅಳವಡಿಕೆಯ ಬಗ್ಗೆ ಕೇಳಿ ಬರುತ್ತಿರುವ ಅಪಸ್ವರ ಕೇಳಿಬಂದಿಲ್ಲ. ಮುಂದಿನ ದಿನಗಳಲ್ಲಿ ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಸುವಂತೆ ಶಿಕ್ಷಣ ಸಚಿವರಿಗೆ ಸಲಹೆ ನೀಡಲಾಗುವುದು ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

BhagavadGita should be implemented in education Swarnavalli Sri demand
Author
First Published Nov 29, 2022, 5:09 PM IST

ದಾವಣಗೆರೆ (ನ.29): ಸರ್ಕಾರಿ ಶಾಲೆಗಳಲ್ಲಿ ಧ್ಯಾನ ಅಳವಡಿಕೆಯ ಬಗ್ಗೆ ಕೇಳಿ ಬರುತ್ತಿರುವ ಅಪಸ್ವರದ ಬಗ್ಗೆ ನನಗೆ ಗೊತ್ತಿಲ್ಲ,‌ ಅದ್ರೇ ಶಾಲೆಗಳಲ್ಲಿ ಮಕ್ಕಳಿಗೆ ಧ್ಯಾನ ಮಾಡಿಸುವುದು ಉತ್ತಮವಾದುದು. ಮುಂದಿನ ದಿನಗಳಲ್ಲಿ ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಸುವಂತೆ ಶಿಕ್ಷಣ ಸಚಿವರಿಗೆ ಸಲಹೆ ನೀಡಲಾಗುವುದು ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ದಾವಣಗೆರೆ ತಾಲೂಕಿನ ಕಡ್ಲೆಬಾಳು ಗ್ರಾಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧ್ಯಾನದ ಬಗ್ಗೆ ವಿಶ್ವಮಟ್ಟದಲ್ಲಿ ಸಂಶೋಧನೆಗಳಾಗಿವೆ. ಹಾಗಾಗಿ ಶಾಲೆಗಳಲ್ಲಿ ಧ್ಯಾನ ಮಾಡುವುದು ಯೋಗ್ಯವಾಗಿದೆ. ಶಾಲೆಗಳಲ್ಲಿ ವಿವಿಧ ಧರ್ಮದ ವಿದ್ಯಾರ್ಥಿಗಳಿದ್ದರೆ ಅವರು ಕೂಡ ಧಾನ್ಯದಲ್ಲಿ ಭಾಗವಹಿಸಬಹದು. ಆದರೆ, ಧ್ಯಾನ ಮಾಡಿ ಎಂದು ಅನ್ಯಧರ್ಮೀಯರಿಗೆ ಒತ್ತಡ ಹೇರುವುದಿಲ್ಲ, ಇನ್ನು ಸೂರ್ಯ ನಮಸ್ಕಾರ ಮಾಡುವುದ್ದರಿಂದ ಪ್ರತಿಯೊಬ್ಬರಿಗೂ ಒಳ್ಳೆದಾಗುತ್ತದೆ. ಸೂರ್ಯ ನಮಸ್ಕಾರ ಶರೀರಕ್ಕೆ ವ್ಯಾಯಾಮ, ಶರೀರಕ್ಕೆ ಹಿತ, ಮಾನಸಿಕ ಸಮಸ್ಯೆಗಳು ಪ್ರತಿಯೊಬ್ಬರಿಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Bhagavad Gita Campaign: ಕರ್ನಾಟಕದ ಎಲ್ಲ ಜೈಲಲ್ಲೂ ಭಗವದ್ಗೀತಾ ಅಭಿಯಾನ: ಸ್ವರ್ಣವಲ್ಲೀ ಶ್ರೀ

ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಸುವುದರ ಬಗ್ಗೆ ಒತ್ತು ಕೊಡಲು ಚಿಂತನೆ ನಡೆಸಿದ್ದೇವೆ. ಇದರ ಬಗ್ಗೆ ಶಿಕ್ಷಣ ಸಚಿವರಾದ ನಾಗೇಶ್ ಅವರಿಗೂ ಕಾರ್ಯಕ್ರಮಕ್ಕೆ ಕರೆದಿದ್ದೇವೆ. ಸಚಿವರು ಡಿ.4 ಕ್ಕೆ ನಮ್ಮ ಮಠಕ್ಕೆ ಬರಲಿದ್ದಾರೆ. ಈ ವೇಳೆ ಶಿಕ್ಷಣದಲ್ಲಿ ಭಗವದ್ಗೀತೆ ಅಳವಡಿಸುವ ಬಗ್ಗೆ ಮಾತನಾಡಲಿದ್ದೇವೆ. ಮುಂದಿನ ನಿರ್ಧಾರದ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.

ದೇವಸ್ಥಾನಗಳಲ್ಲಿ ಸರ್ಕಾರ ಹಸ್ತಕ್ಷೇಪ ಸಲ್ಲದು:  ದೇವಸ್ಥಾನಗಳಲ್ಲಿ ಸರ್ಕಾರದ ಹಸ್ತ ಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಸರ್ಕಾರ ದೇವಾಲಯಗಳಲ್ಲಿ‌ ಹಸ್ತಾಕ್ಷೇಪ ಮಾಡುವ ನಿರ್ಧಾರದ ವಿರುದ್ಧ 40‌ ವರ್ಷಗಳಿಂದ‌ ಹೋರಾಟ ನಡೆಯುತ್ತಿದೆ. ನಾವು ಕೂಡ 30 ವರ್ಷಗಳಿಂದ‌ ಈ ಹೋರಾಟದಲ್ಲಿದ್ದೇವೆ. ದೇವಸ್ಥಾನಗಳಿಗೆ‌ ಸ್ವಾಯತ್ತತೆ ಬರಬೇಕೆಂಬುದು ನಮ್ಮ ಹೋರಾಟದ ಮುಖ್ಯವಾದ ಆಶಯವಾಗಿದೆ. ದೇವಾಲಯದ ಆಡಳಿತ ನೋಡಿಕೊಳ್ಳುವುದು, ಪೂಜೆ‌ ಮಾಡುವ ಹಕ್ಕು ಸ್ಥಳೀಯರಿಗೆ ಇಲ್ಲ. ಈಗ ಅಲ್ಲಿನ ಜನರಿಗೆ ಈ ಹಕ್ಕುಗಳನ್ನು ಕೊಡಬೇಕು ಎಂದು ಆಗ್ರಹಿಸಿದರು.

1 ಲಕ್ಷ ಭಗವದ್ಗೀತೆ ಪ್ರತಿ ಹಂಚಲಿರುವ ISKCON

ದೇವಸ್ಥಾನ ಸ್ವತಂತ್ರವಾಗಿ ನಡೆಸಲು ಕಾನೂನು ತರಬೇಕು: ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೇವಸ್ಥಾನ ನೋಡಿಕೊಳ್ಳಲು ಭಕ್ತರಿಗೆ ಕೊಡಲು ತಯಾರಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಆದರೆ, ಈವರೆಗೂ ಅವರ  ಹೇಳಿಕೆ ಆಚರಣೆಗೆ ಬಂದಿಲ್ಲ. ಬದಲಾಗಿ ಅನೇಕ ಕಡೆ ದೇವಾಲಯಗಳಿಗೆ ಅಧಿಕಾರಿಗಳು ನೇಮಕವಾಗುತ್ತಿದ್ದಾರೆ. ಅವರು ದೇವಾಲಯದ ಹಕ್ಕುಪತ್ರ, ಆಸ್ತಿ ವಿವರ ಕೇಳಿ ಅನಗತ್ಯವಾಗಿ ಹಸ್ತಕ್ಷೇಪ ಮಾಡ್ತಿದ್ದಾರೆ. ಇದರಿಂದ ದೇವಾಲಯಗಳು ಸರ್ಕಾರೀಕರಣ ಆಗಬಾರದು. ಎಲ್ಲ ದೇವಾಲಯಗಳು ಭಕ್ತರಿಂದ ಕೂಡಿರಬೇಕು. ಕೆಲವು ದೇವಾಲಯಗಳು ಶತಮಾನಗಳಿಂದ ಸರ್ಕಾರದ ಅಧೀನದಲ್ಲಿವೆ, ಅದಕ್ಕೆ‌ ನಮ್ಮ ಅಭ್ಯಂತರ ಅಕ್ಷೇಪ ಇಲ್ಲ. ಇನ್ನು ಸ್ವಾತಂತ್ರವಾಗಿರುವ ಅನೇಕ ದೇವಸ್ಥಾನಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ದೇವಸ್ಥಾನಗಳನ್ನು ಸ್ವತಂತ್ರವಾಗಿಉ ನಡೆಸಿಕೊಂಡು ಹೋಗಲು ಕಾನೂನು ತರಬೇಕು ಎಂದರು.

Follow Us:
Download App:
  • android
  • ios