Asianet Suvarna News Asianet Suvarna News

ಪತಂಜಲಿ ಆರಂಭದ ಕಾರಣ  ಕಲ್ಲಡ್ಕದಲ್ಲಿ ಬಹಿರಂಗ ಮಾಡಿದ ರಾಮ್ ದೇವ್

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕೇಂದ್ರಕ್ಕೆ ಭೇಟಿ ನೀಡಿದ ಯೋಗಗುರು ಬಾಬಾರಾಮ್ ದೇವ್/ ಮಕ್ಕಳೊಂದಿಗೆ ಸಂವಾದ ನಡೆಸಿದ ಯೋಗಗುರು/ ಪತಂಜಲಿ ಯಾಕೆ ಆರಂಭಿಸಿದೆ ಎಂದು ತಿಳಿಸಿದ ರಾಮ್ ದೇವ್

Yoga guru Baba Ramdev visits Kalladka Sri Rama Vidyakendra
Author
Bengaluru, First Published Nov 20, 2019, 11:53 PM IST

Yoga guru Baba Ramdev visits Kalladka Sri Rama Vidyakendra[ನ. 20]  ಯೋಗಗುರು ಬಾಬಾರಾಮ್ ದೇವ್ ಅವರು ಬುಧವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕೇಂದ್ರಕ್ಕೆ ಭೇಟಿ ನೀಡಿದ್ದರು.  ಮಕ್ಕಳ ಚಟುವಟಿಕೆ, ಮಕ್ಕಳ ಕೂಪಿಕ ಸಮತೋಲನ ಪ್ರದರ್ಶನವನ್ನು ವೀಕ್ಷಿಸಿದರು.

ಶ್ರೀರಾಮನ  ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಬಾಬಾರಾಮ್ ದೇವ್, ಮಾತೃಭಾಷೆ ಹಾಗೂ ಸಂಸ್ಕೃತ ಕಲಿಕೆಯಿಂದ ಬುದ್ಧಿ ವೃದ್ಧಿಯಾಗುತ್ತದೆ. ಮನುಷ್ಯ ಜೀವನದಲ್ಲಿ ಕರ್ಮ ಆಧಾರಿತ, ಧರ್ಮ ಆಧಾರಿತ ವ್ಯವಸ್ಥೆಗಳಿವೆ. ಕರ್ಮ ಆಧರಿತದಿಂದ ಕಲಸ ಮಾಡಿದಾಗ ಖುಷಿ ಸಿಗುತ್ತದೆ. ಸ್ವಲ್ಪವೂ ಕರ್ಮ ಮಾಡದವರು ರಾಕ್ಷಸ ಸ್ವಭಾವದವರು ಎಂದರು.

Yoga guru Baba Ramdev visits Kalladka Sri Rama Vidyakendra

ಸತ್ಯ, ನ್ಯಾಯ, ರಾಮ ಮಾರ್ಗದಲ್ಲಿ ನಡೆದರೆ ಮಾತ್ರ ಬಲಿಷ್ಠ ದೇಶ ಮತ್ತು ಗೌರವ ಸಮಾಜ ನಿರ್ಮಾಣವಾಗಲಿದೆ ಎಂದ ಅವರು, ಭಾರತ ಅತೀ ಶೀಘ್ರದಲ್ಲೇ ವಿಶ್ವಗುರುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕತ್ತೆ, ನಾಯಿ, ಮೀನು, ಕೋಣ ಇರುವಾಗ ಗೋವನ್ನೇಕೆ ತಿನ್ನುತ್ತೀರಿ? 

ಕಳೆದ 40 ವರ್ಷದ ನನ್ನ ಜೀವನದಲ್ಲಿ ನೋ ಪಿಕ್ಚರ್, ನೋ ಸೀರಿಯಲ್, ನೋ ಪಿಕ್ನಿಕ್ ಎಂದ ಬಾಬಾ ರಾಮ್ ದೇವ್, ಜೀವನದಲ್ಲಿ ಒಂದು ಸಂಕಲ್ಪವನ್ನು ಹೊಂದಬೇಕು. ಕರ್ಮ ಮೂಲಕ ಅದನ್ನು ಸಾಧಿಸಬೇಕು ಎಂದರು.

ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಸೋಮಯಾಜಿ, ಪತಂಜಲಿಯ ಕರ್ನಾಟಕದ ಉಸ್ತುವಾರಿ ಪವನ್ ಲಾಲ್ ಆರ್ಯ, ಜಿಲ್ಲಾ ಉಸ್ತುವಾರಿ ರಾಜೇಂದ್ರ, ಸುಜಾತಾ ಮಂಗಳೂರು, ಕಮಲಾ ಪ್ರಭಾಕರ ಭಟ್, ಶಾಲಾ ಸಂಚಾಲಕ ವಸಂತಮಾಧವ, ಸಹ ಸಂಚಾಲಕ ರಮೇಶ್ ಎನ್. ಇದ್ದರು.

Yoga guru Baba Ramdev visits Kalladka Sri Rama Vidyakendra

ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಸ್ವಾಗತಿಸಿ, ವಂದಿಸಿದರು. ಶಿಶುಮಂದಿರಕ್ಕೆ ತೆರಳಿ ಅಲ್ಲಿ ಪುಟಾಣಿ ಮಕ್ಕಳ ಚಟುವಟಿಕೆಯನ್ನು ಕಂಡು ಖುಷಿ ಪಟ್ಟರು. ವೇದವ್ಯಾಸ ಮಂದಿರದಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿಯರ ದಾಂಡೀಯ ನೃತ್ಯವನ್ನು ವೀಕ್ಷಿಸಿದರು. 

ವಿದ್ಯಾರ್ಥಿಗಳೊಂದಿಗೆ ಸಂವಾದ:
ಇದೇ ವೇಳೆ ವಿದ್ಯಾರ್ಥಿಗಳೊಂದಿಗೆ ಬಾಬಾರಾಮ್ ದೇವ್ ಸಂವಾದ ನಡೆಸಿದರು. ವಿದ್ಯಾರ್ಥಿನಿ ಕ್ಷಮಾ ಪ್ರಶ್ನೆಗೆ ಉತ್ತರಿಸಿದ ಬಾಬಾ ರಾಮ್ ದೇವ್, ಪ್ರಾಣಾಯಾಮದಿಂದ ಮೆದುಳಿನ ಶಕ್ತಿ ವಿಕಸನಗೊಳ್ಳುತ್ತದೆ ಎಂದರು.

ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ನಿಮ್ಮ ನಿಲುವೇನು? ಎಂಬ ವಿದ್ಯಾರ್ಥಿ ಜಿನಿತ್ ಪ್ರಶ್ನೆಗೆ ಉತ್ತರಿಸಿದ ಅವರು, ಆಯೋಧ್ಯೆಯಲ್ಲಿಯೇ ರಾಮಮಂದಿರ ನಿರ್ಮಾಣವಾಗಲೇಬೇಕು ಎಂದರು.

ವಿದ್ಯಾರ್ಥಿನಿ ಅಮೃತಾ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ದೇಶದ ಸುಮಾರು 15 ಲಕ್ಷ ಕೋ.ರೂ.ವಿದೇಶಿ ಕಂಪನಿಗಳಿಗೆ ನೇರ ಹೋಗುತಿತ್ತು. ಈ ಸಂದರ್ಭ ಸ್ವದೇಶಿ ಉತ್ಪನ್ನದ ಅಭಿಯಾನ ಆರಂಭಿಸಿದ್ದು, ಪತಂಜಲಿ ಉತ್ಪನ್ನಗಳ ತಯಾರಿಕೆಯಿಂದ ದೇಶಕ್ಕೆ ಆದಾಯ ಬರುವಂತಾಗಿದೆ ಎಂದರು.

Yoga guru Baba Ramdev visits Kalladka Sri Rama Vidyakendra

 

 

 

 

 

Follow Us:
Download App:
  • android
  • ios